ಈ ಪುಟವನ್ನು ಪ್ರಕಟಿಸಲಾಗಿದೆ

ನಾಟ್ಯಶಾಸ್ತ್ರ ಹಾಗೂ ಸಂಸ್ಕೃತ ನಾಟಕಗಳು / ೨೨೭

ತಾಳವಿಸ್ತಾರದಲ್ಲಿ ಧ್ರುವಾಗೀತೆಗಳನ್ನು ಹಾಡುತ್ತಾನೆ. ಅದಕ್ಕನುಗುಣವಾದ ವಾದ್ಯಘೋಷ ದೊಡನೆ ನಾಟ್ಯದ ಅದ್ಭುತ ಪ್ರಯೋಗವು ಕೆಲಹೊತ್ತು ನಡೆಯುತ್ತದೆ. ಸೂತ್ರಧಾರನು ಮಧ್ಯಮಧ್ಯೆ ನಾಂದೀಶ್ಲೋಕಗಳನ್ನು ಹೇಳುತ್ತಾನೆ. ನರ್ತಕಿಯರು ಪುಷ್ಪಾಂಜಲಿಯನ್ನು ಚೆಲ್ಲುತ್ತಿರುತ್ತಾರೆ.೪೬ ಒಬ್ಬೊಬ್ಬರಾಗಿಯೂ, ಒಟ್ಟಾಗಿಯೂ ನಾನಾ ತಾಂಡವ ವಿಧಿಗಳಲ್ಲಿ ನರ್ತಿಸಿ, “ಪಿಂಡೀಬಂಧ”ಗಳೆಂಬ ವಿಶಿಷ್ಟ ಸ್ಥಿರಭಂಗಿಗಳಲ್ಲಿ ನಾಟ್ಯವನ್ನು ಪೂರೈಸುತ್ತಾರೆ. ಈ ತಾಂಡವದ ಅದ್ಭುತದರ್ಶನವಾದ ಮೇಲೆ ಸುಕುಮಾರಪ್ರಯೋಗವಾದ ಲಾಸ್ಯವಿಧಿಯ ವಿನೋದನೃತ್ತ ಪ್ರಾರಂಭವಾಗುತ್ತದೆ.

ಇದರಲ್ಲಿ ನರ್ತಕಿಯರೊಂದಿಗೆ ನಟರೂ ಭಾಗವಹಿಸುತ್ತಾರೆ. ದಂಪತಿಗಳ ಮದನಾವಸ್ಥೆಯನ್ನು ವರ್ಣಿಸುವ ಶೃಂಗಾರಗೀತೆಗಳೂ ಲಲಿತಭಾವದ ನರ್ತನಗಳೂ ಸಾಮಾನ್ಯವಾಗಿ 'ಕೀಳೋಟ'ದಲ್ಲಿಯೇ ನಡೆಯುತ್ತವೆ. ಕಾಮೋತ್ಕಂಠ, ಪ್ರಣಯಕಲಹ, ಅಶ್ಲೀಲಹಾಸ್ಯ, ಬೀದಿಯ ವಿನೋದ, ಇಂಥ ಪಾಮರರಂಜಕವಾದ ವೀಥ್ಯಂಗಗಳು ಮಧ್ಯ ಮಧ್ಯ ದೇವರ ಸ್ತುತಿಯೊಂದಿಗೇ೪೭ ಪ್ರಯೋಗಿಸಲ್ಪಡುತ್ತವೆ. ಇದಾದ ಮೇಲೆ ನಟನಟಿ ಯರು ರಂಗದಿಂದ ಹೊರಟುಹೋಗುತ್ತಾರೆ. ಇಲ್ಲಿಗೆ ದೇವಸ್ತುತ್ಯಾಶ್ರಯವಾದ ಪೂರ್ವ ರಂಗವಿಧಾನ ಕೊನೆಗೊಳ್ಳುತ್ತದೆ. ಇದರ ಉಪಸಂಹಾರವಾಗಿ ಒಂದು ರೌದ್ರರಸದ ಶ್ಲೋಕವನ್ನು ಹಾಡಲಾಗುವುದು:೪೮ ಆಮೇಲೆ ಪಾರಿಪಾರ್ಶ್ವಕರು ಪ್ರವೇಶಿಸಿ ತಾವು


ಅಲ್ಲಿ ಪ್ರಯೋಗಿಸುವ ತಾಂಡವಗೀತ :
ಪಾದತಲಾಹತ ಪಾತಿತ ಶೈಲಂ |
ಕೋಭಿತ ಭೂತ ಸಮಗ್ರ ಸಮುದ್ರಂ ǁ
ತಾಂಡವನೃತ್ತಮಿದಂ ಪ್ರಲಯಾಂತೇ |
ಪಾತುಹರಸ್ಯ ಸದಾಸುಖದಾಯಿ ǁǁ೧೨೯ǁ

೪೬. ಶುದ್ಧಾಃ ಕುಸುಮ ಮೂಲಾಭಿರ್ವಿಕಿರೆಯುಃ ಸಮಂತತಃ
ಅಂಗಹಾರೈಶ್ಚದೇವಶ್ಚನ್ಯಾಸಾಪನ್ಯಾಸ ಸಂಯುತಾಃ
ಏವಂಕೃತಾಯಥಾನಾಯಂ ಶುದ್ಧಂ ಚಿತ್ರಂ ಪ್ರಯತ್ನತಃ
ತತಸ್ವಂತರ್ಹಿತಾಃ ಸರ್ವಾಭವೇಯುರ್ದಿವ್ಯಯೋಷಿತಃǁ೧೫೯ǁ

(ನಾ. ಶಾ. ಅ. ೫)

೪೭. ದೇವಸ್ತುತ್ಯಾಶ್ರಯಾತತ್ ಸುಕುಮಾರಂ ನಿಧತ
ಸ್ತ್ರೀಪುಂಸಯೋಸ್ತು ಸಂಲಾಪೋ ಯಸ್ತು ಕಾಮಸಮುದ್ಭವಃ
ತದ್‌ಜ್ಞೆಯಂ ಸ್ವಕೃತಾರಂಭಿ ಶೃಂಗಾರರಸ 'ಸಂಭವಂ ǁ೩೦೪ǁ
ಯತ್ರ ಸಂದೃಶ್ಯತೇ ಕಿಂಚಿತ್ ದಂಪತ್ಯೋರ್ಮದನಾಶ್ರಯಂ |
ಖಂಡಿತಾ ವಿಪ್ರಲಬ್ದಾ ವಾ ಕಲಹಾಂತರಿತಾದ ವಾ |
ಯಸ್ಮಿನ್ನಂಗೇ ತು ಯುವತಿ ನೃತ್ತಂ ತತ್ರ ಪ್ರಯೋಜಯೇತ್ǁ೩೧೧ǁ

(ನಾ. ಶಾ. ಅ. ೫)

೪೮. ತತೋ ರೌದ್ರ ರಸಂ ಶ್ಲೋಕಂ ಪದಸಂಹರಣಂ ಪಠೇತ್ |
ತಸ್ಕಾಂತೇ ತು ತ್ರಿ ಪದ್ಯಾಥ ವ್ಯಾಹರೇತ್ ಪಾರಿಪಾರ್ಶ್ವಕ
ತಯೋರಾಗಮನಂ ಕಾರ್ಯಂ ಗಾನಂ ನರ್ಕುಟಕ ಬುಧಃǁ೧೩೫ǁ

(ನಾ. ಶಾ. ಅ. ೫)