ಈ ಪುಟವನ್ನು ಪ್ರಕಟಿಸಲಾಗಿದೆ

೨೨೮ / ಕುಕ್ಕಿಲ ಸಂಪುಟ

ಬಂದಿರುವ ಉದ್ದೇಶ, ಪ್ರಯೋಗಿಸುವ ನಾಟಕದ ವಿಚಾರ, ಸಭಾಸದ ಉತ್ಸಾಹ ಇತ್ಯಾದಿ ವಿಷಯಗಳನ್ನು ತಮ್ಮೊಳಗಿನ ಸಂಭಾಷಣೆಯಲ್ಲಿ ಪ್ರಸ್ತಾವಿಸುತ್ತಾರೆ. ಆಗ ವಿದೂಷಕನು ಹಾಸ್ಯವೇಷದ ವಿಕೃತಗತಿಯಲ್ಲಿ ಪ್ರವೇಶಿಸಿ ಅಸಂಬದ್ಧ ಪ್ರಲಾಪಗಳಿಂದ ಸೂತ್ರಧಾರಾದಿ ಗಳನ್ನು ನಗಿಸುತ್ತಾನೆ. ಹಾಸ್ಯಪ್ರಧಾನವಾದ ಈ ಪ್ರಯೋಗಕ್ಕೆ 'ಪ್ರರೋಚನೆ' ಎಂದು ಹೆಸರು. ಇದರ ಕೊನೆಯಲ್ಲಿ ಎಲ್ಲರೂ ರಂಗದಿಂದ ಹೊರಟುಹೋಗುತ್ತಾರೆ. ಪರದೆ ಬೀಳುತ್ತದೆ.

ತದನಂತರ ಪ್ರಸ್ತಾವಕನೆಂಬ ಬ್ರಾಹ್ಮಣನ ಪಾತ್ರದ ಪ್ರವೇಶ. ಆತನು ಕವಿಕಾವ್ಯ ಪ್ರಶಂಸಾಪೂರ್ವಕ ನಾಟಕದ ಕಥಾವಸ್ತುವನ್ನು ಸರಾಗವಾಗಿ ವರ್ಣಿಸಿ ಆರಂಭದ ಪಾತ್ರ ಪ್ರವೇಶವನ್ನು ಪ್ರಸ್ತಾಪಿಸಿ ಹೊರಟುಹೋದಲ್ಲಿಗೆ 'ಕಾವ್ಯಪ್ರಸ್ತಾವನೆ' ಎಂಬ ವಿಧಿಯೂ ಕೊನೆಗೊಳ್ಳುವುದು. ಪೂರ್ವರಂಗದಲ್ಲಿ ಪ್ರಯೋಗಿಸತಕ್ಕ ಗೀತಗಳನ್ನೂ ನಾಟ್ಯಾ ಚಾರ್ಯನು ಅವನ ಸ್ವಬುದ್ದಿಯಿಂದಲೇ ಯಥೋಚಿತವಾದ ತಾಳ ಲಯಗಳಲ್ಲಿ ರಚಿಸಿ ಕೊಳ್ಳಬೇಕಾದ್ದರಿಂದ ಅವುಗಳ ರಚನೆ ಹೀಗೇ ಇರಬೇಕೆಂದು ತಾನು ವಿಧಿಸುವು ದಿಲ್ಲವೆಂದೇ ಭರತನು ಹೇಳುತ್ತಾನೆ :

ಏತತ್ ಪ್ರಮಾಣಂ ನಿರ್ದಿಷ್ಟಮುಭಯೋ ಪೂರ್ವರಂಗಯೋ: |
ಆಚಾರ್ಯಬುಧ್ಯಾ ಕರ್ತವ್ಯಶ್ರತಾಲ ಪ್ರಮಾಣತಃ |
ತಸ್ಮಾನ್ನ ಲಕ್ಷಣಂ ಪ್ರೋಕ್ತಂ ಪುನರುಕ್ಕಂ ಭವೇದ್ಯತಃ ǁ

(ನಾ. ಶಾ. ಅ. ೫)

ಈ ಪೂರ್ವರಂಗಪ್ರಯೋಗವೂ ಯಥಾವಿಧಿ ನಡೆಯುತ್ತಿತ್ತೆಂಬುದು ನಮ್ಮ ಸಂಸ್ಕೃತ ನಾಟಕಗಳ ಆರಂಭದಲ್ಲಿ ಬರುವ 'ಅಲಮಲಮತಿ ಪ್ರಸಂಗೇಣ', 'ಅಲಮನೇನ ಪರಿಷತ್ಕುತೂಹಲ ವಿಮರ್ದಕಾರಿಣಾ ಅತಿವಿಸ್ತರಣ' ಎಂಬ ಸೂತ್ರಧಾರನ ಮಾತುಗಳಿಂದ ವ್ಯಕ್ತವಾಗುವುದು. ಹೀಗೆ ಪೂರ್ವರಂಗಸಹಿತವಾದ ನಾಟಕಾಭಿನಯದಲ್ಲಿ ನೃತ್ಯಗೀತಗಳು ರಸೋತ್ಕರ್ಷಕ್ಕೆ ಸಹಾಯವಾಗುವುವೆಂದಷ್ಟೇ ಅಲ್ಲ. ಅವುಗಳಿಲ್ಲದೆ ನಾಟ್ಯದಲ್ಲಿ ರಸೋತ್ಪತ್ತಿಯಾಗುವುದಿಲ್ಲವೆಂದೇ ಭರತನು ಹೇಳುತ್ತಾನೆ. ರಸವೆಂದರೆ ಒಂದು ಪ್ರತ್ಯೇಕ ವಸ್ತುವಲ್ಲ. ನಾಟ್ಯವೇ ರಸ ಎನ್ನುತ್ತಾನೆ. ಎಂದರೆ ನಾಟ್ಯವೆಂಬುದು ಅನುಭವೈಕಗಮ್ಯ


೪೯. ವಿದೂಷಕಕಪದಾಂ ಸೂತ್ರ ಧಾರತಾವಹಾಂ
ಅಸಂಬದ್ಧ ಕಥಾಪ್ರಾಯಾಂ ಕುರ್ಯಾತ್ ಕಥನಿಕಾಂತತಃ
ವಿತಂಡಾಂ ಗಂಡಸಂಯುಕ್ತಾಂ ನಾಮಿಕಾಂ ಚ ಪ್ರಯೋಜಯೇತ್ǁ೧೩೮ǁ

(ನಾ. ಶಾ. ಅ. ೫)

೫೦. ಸ್ಥಾಪಕಃ ಪ್ರವಿಶೇತ್ರತ್ರ ಸೂತ್ರಧಾರಗುಣಾಕೃತಿಃ
ಸುವಾಕ್ಯ ಮಧುರೈಃ ಶ್ಲೋಕ್ಕರ್ನಾನಾ ಭಾವರಸಾನ್ವಿತೈಃ
ಪ್ರಸಾದ್ಯರಂಗಂ ವಿಧಿವತ್ ಕವೇರ್ನಾಮ ಚ ಕೀರ್ತಯೇತ್
ಪ್ರಸ್ತಾವನಾಂತತಃ ಕುರ್ಯಾತ್ ಕಾವ್ಯಪ್ರಖ್ಯಾಪನಾಶ್ರಯಂǁ೧೭೦ǁ

(ನಾ. ಶಾ. ಅ. ೫)

೫೧. 'ತಸ್ಮಾನ್ನಾಟ್ಕರಸಾಃ ಸ್ಮೃತಾಃ' ಭ. ನಾ. ೬-೩೬. ವ್ಯಾಖ್ಯಾ - ತಸ್ಮಾದಿತಿ | ನಾಟ್ಯ
ಸಮುದಾಯ ರೂಪಾದ್ರಸಾ, ಅಥವಾ ನಾಟ್ಯಮೇವರಸಾ ರಸಸಮುದಾಯೋಹಿ
ನಾಟ್ಯಂ... ಯದಾಹುಃ ಕಾವ್ಯ ಕೌತುಕೇ 'ಪ್ರಯೋಗತ್ವಮನಾಪನ್ನೇ ಕಾವ್ಯ
ನಾಸ್ಸಾದ ಸಂಭವಃ' ಇತಿ.