ಈ ಪುಟವನ್ನು ಪ್ರಕಟಿಸಲಾಗಿದೆ

೨೪೦ / ಕುಕ್ಕಿಲ ಸಂಪುಟ

ಆಲಿಸೂಡ, ಸಂಕೀರ್ಣಸೂಡ, ಉತ್ತಮಸೂಡ, ಜಘನ್ಯಸೂಡ ಎಂಬ ಹೆಸರುಗಳಿವೆ. ಹೀಗೆ ಸೂಡ ಎಂಬ ಪದವು ವ್ಯಾಪಕವಾಗಿ ಯಂಚಿತ್ ಗೇಯಪ್ರಬಂಧ ಎಂಬ ಸಾಮಾನ್ಯಾರ್ಥದಲ್ಲಿಯೂ ವಿಶಿಷ್ಟ ಪ್ರಬ೦ಧಗಳ ವರ್ಗ ಎಂಬ ವಿಶೇಷಾರ್ಥದಲ್ಲಿಯೂ ಪ್ರಯೋಗಿಸಲ್ಪಟ್ಟಿದೆ.

ಅಂತೆಯೇ ಲಾಕ್ಷಣಿಕರೂ ಈ ಪದಕ್ಕೆ ಇವೆರಡು ಅರ್ಥಗಳನ್ನು ಕೊಟ್ಟಿರುತ್ತಾರೆ. ಸಾಮಾನ್ಯ ಸಂಜ್ಞೆಯನ್ನೇ ವಿಶಿಷ್ಟವರ್ಗಕ್ಕೂ ಅನ್ವಯಿಸುವ ಈ ಕ್ರಮವು ಪ್ರಬಂಧವಾಚಕ ವಾದ ಇತರ ಶಬ್ದಗಳ ವ್ಯವಹಾರದಲ್ಲಿ ಇರುವುದೇ ಆಗಿದೆ- ಪ್ರಬಂಧ ಎಂಬುದಕ್ಕೆ ಯಾವುದೇ ಒಂದು ಪದ್ಯ, ಗದ್ಯ, ಶ್ಲೋಕ, ವೃತ್ತ ಇತ್ಯಾದಿ ರಚನಾಮಾತ್ರ ಎಂಬ ವ್ಯಾಪಕವಾದ ಅರ್ಥವೂ ಅನೇಕ ಗದ್ಯಪದ್ಯಗಳು ಸೇರಿದ ಗ್ರಂಥ ಎಂಬ ವಿಶೇಷ ಅರ್ಥವೂ ರೂಢಿಯಲ್ಲಿರುವುದಷ್ಟೆ? ಅದೇ ಪ್ರಬಂಧಕ್ಕೆ ಸಂಗೀತಶಾಸ್ತ್ರದಲ್ಲಿ ನಿಬದ್ಧ ಗೇಯವಸ್ತು ಅಥವಾ ಗೀತಮಾತ್ರ ಎಂಬುದು ಸಾಮಾನ್ಯ ಅರ್ಥ. ವಿಶೇಷಾರ್ಥದಲ್ಲಿ ಕೆಲವೊಂದು ಲಕ್ಷಣ ವಿಶೇಷವಿರುವ ಗೀತವರ್ಗಕ್ಕೂ ಅದೇ ಹೆಸರಿದೆ. ಹಾಗೆಯೇ ಗೀತ ಎಂಬುದಕ್ಕೂ ಆ ಪ್ರಬಂಧಗಳಿಂದ ಭಿನ್ನವಾದ ಗೀತವರ್ಗ ಎಂಬ ವಿಶಿಷ್ಟ ಅರ್ಥವಿದೆ. ವಸ್ತುರೂಪಕ ಎಂಬುದಕ್ಕೂ ಹೀಗೆಯೆ. ಮೇಲೆ ಹೇಳಿದ ಶುದ್ಧಸೂಡಾದಿ ಪ್ರಬಂಧವರ್ಗ ಗಳಲ್ಲಿ ಶುದ್ಧ ಸೂಡ ಮತ್ತು ಸಾಲಗಸೂಡ ಎಂಬವು ದೇಶೀಯ ಸಂಪ್ರದಾಯದಲ್ಲಿ ಅತ್ಯಂತ ಪ್ರಶಸ್ತವಾಗಿದ್ದು ಕ್ರಮಾನುವೃತ್ತಿಯಿಂದ ಪ್ರಸಿದ್ದಿಗೆ ಬಂದಿವ ಸಂಗೀತಶಾಸ್ತ್ರ ಗ್ರಂಥಗಳಿಂದ ತಿಳಿಯುವುದು. ಲಕ್ಷ್ಮಸಂಪ್ರದಾಯದಲ್ಲಿ ಅವಕ್ಕೆ ಅದೆಷ್ಟು ಮಹತ್ವವಿತ್ತೆಂದರೆ, ಒಂದೊಮ್ಮೆ ಸೂಡ ಎಂದರೆ ಶುದ್ಧ ಸೂಡವೇ ಸರಿ. ಆ ವರ್ಗದ ಪ್ರಬಂಧಗಳೇ ಗೇಯಸರ್ವಸ್ವ ಎಂದೂ ಕಾಲಾಂತರದಲ್ಲಿ ಸಾಲಗಸೂಡವರ್ಗವು ಅದರ ತಲೆಮೆಟ್ಟಿ ನಿಂದು ಸೂಡ ಎಂಬ ಹೆಸರೇ ಇನ್ನೊಂದಕ್ಕಿಲ್ಲ ಎಂದೂ ಭಾವಿಸು ವಂತಾಗಿತ್ತು. ಅವೆರಡು ವರ್ಗಗಳ ಪ್ರಬಂಧಗಳು ಸಂಗೀತ ರತ್ನಾಕರದಲ್ಲಿ ಕೊಟ್ಟಿರುವ ಪ್ರಕಾರ ಹೀಗಿವೆ.


೧. ಸಂಗೀತೋಪನಿಷತ್ಕಾರೋದ್ಧಾರ.
೨. ಸಂಗೀತ ದಾಮೋದರ.
೩. ಸಂಗೀತೋಪನಿಷತ್ಪಾರೋದ್ಧಾರ.
೪. ಸಂ. ರ. ಪ್ರಬಂಧಾಧ್ಯಾಯ ಶೂ ೨೩ಕ್ಕೆ ಕಲ್ಲಿನಾಥನ ವ್ಯಾಖ್ಯಾನ.
-ಚತುರ್ದಂಡೀ ಪ್ರಕಾಶಿಕಾ, ಗೀತಪ್ರಕರಣ, ಶ್ಲೋ, ೫
-ಸಂ. ಸಾರಾಮೃತ, ಪ್ರಬಂಧಪ್ರಕರಣ.
೫. ಸಂ. ರ. ಪ್ರಬಂಧಾಧ್ಯಾಯ, ಶ್ಲೋ. ೫೬.
೬. ಚ. ದಂ, ಪ್ರ. ಪ್ರಬಂಧ ಪ್ರಕರಣ ಶೇ. ೧-೬.
೭. ಚ, ದಂಡೀ ಗೀತ ಪ್ರಕರಣ ಶೇ. ೨-೪.
೮. ಉತ್ತಮೋತ್ತಮಸೂಡಸ್ತು ಸಾಲಗಾಸ್ಕೊ ಮಹಾರಸಃ
ಪ್ರವರ್ತತೇ ಸುಖಕರಃ ಸೋಯಂ ಸರ್ವಜನಪ್ರಿಯಃ (ಸಂ. ಸಾರೋದ್ಧಾರ)
-ಏಲಾದ್ಯಾ ದುಷ್ಕರಾಃ ಸಂತಿ ಪ್ರಬಂಧಾ ಮುನಿಭಾಷಿತಾಃ (ಸಂ. ಸಾರಸಂಗ್ರಹ)