ಶುದ್ಧ ಕೂಡ : ಏಲಾಕರಣ ಡೇಂಕೀಭಿರ್ವತ್ರನ್ಯಾಜೇ೦ಬಡೇನಚ |
ಲಂಭರಾಸೈಕತಾಲೀಭಿರಷ್ಟಭಿ: ಸೂಡ ಉಚ್ಯತೇ ||
ಏಲಾ, ಕರಣ, ಡೇಂಕಿ, ವರ್ತನೆ, ಜೋಂಬಡ, ಲಂಭ, ರಾಸ, ಏಕತಾಲಿ ಈ ಎಂಟು ಪ್ರಬಂಧಗಳ ವರ್ಗವು ಶುದ್ಧ ಸೂಡ.
ಸಾಲಗ ಕೂಡ : ಆನ್ನೋ ಧ್ರುವಸ್ತತೋಮಂಠ ಪ್ರತಿಮಂಠ ನಿಸಾರುಕಾಃ |
ಅಡ್ಡ ತಾಲಸ್ಕತೋರಾಸ ಏಕತಾಲೀತ್ಯಸೌ ಮತ: ||
ಧ್ರುವ, ಮಂಠ, ಪ್ರತಿಮಂಠ, ನಿಸಾರುಕ, ಅಡ್ಡ ತಾಲ, ರಾಸ, ಏಕತಾಲಿ ಈ ಏಳು ಪ್ರಬಂಧಗಳ ವರ್ಗವು ಸಾಲಗಸೂಡ, ಪ್ರಕೃತ ಈ ಪ್ರಬಂಧ ವಿಶೇಷಗಳ ಲಕ್ಷಣ ವನ್ನು ವಿವರಿಸುವುದಿಲ್ಲ. ಸಂಗೀತಶಾಸ್ತ್ರ ಗ್ರಂಥಗಳಲ್ಲೆಲ್ಲ ಅವುಗಳು ವಿಸ್ತರವಾಗಿ ನಿರೂಪಿಸಲ್ಪಟ್ಟೇ ಇವೆ. ಪ್ರಬಂಧವಾಚಕವಾಗಿ ರೂಢಿಗೆ ಬಂದ ಸೂಡ-ಸೂಳಾದಿ-ಸಾಲಗ ಎಂಬ ಹೆಸರುಗಳ ನಿಜಾರ್ಥ ಮತ್ತು ಔಚಿತ್ಯದ ಕುರಿತು ಯಥಾಮತಿ ವಿಚಾರಿಸುವುದಷ್ಟೆ ಪ್ರಸ್ತುತ ಲೇಖನದ ವಿಷಯ.
ಈ ಸೂಡ ಶಬ್ದವು ಸೂಲ, ಸೂಳ ಎಂಬ ರೂಪಗಳಲ್ಲಿಯೂ ಪ್ರಯೋಗಿಸಲ್ಪಟ್ಟಿದೆ. ಸಂಸ್ಕೃತ ಭಾಷೆಯಲ್ಲಿರುವ ಅರ್ವಾಚೀನ ಸಂಗೀತಲಕ್ಷಣಗ್ರಂಥಗಳಲ್ಲಿ ಹೆಚ್ಚಾಗಿ ಸೂಲ ಎಂಬ ರೂಪವು ಕನ್ನಡದಲ್ಲಿ ಸ್ಥಳ ಎಂಬ ವ್ಯವಹಾರವೂ ಕಂಡುಬರುತ್ತದೆ, ಹಳೆಗನ್ನಡ ಕಾವ್ಯಾದಿಗಳಲ್ಲಿ ಮಾರ್ಗಸೂಳ,೧ ಶುದ್ಧಸೂಳ ಸಾಲಗಸೂಳ ಎಂಬಂತೆ ( ಅವಿ ವಲ್ಲದ) ಆಕಾರವಿರುವ ಪ್ರಯೋಗ ಕಂಡುಬರುತ್ತದೆ. ಸಂಗೀತರತ್ನಾಕರಾದಿ ಪ್ರಾಚೀನ ಲಕ್ಷಣಗ್ರಂಥ ಗಳಲ್ಲಿ ಸೂಡ ಎಂಬ ರೂಪವೇ ಇರುವುದರಿಂದ ಮತ್ತು ಹೆಚ್ಚಾಗಿ ಡಕಾರದ ಸ್ಥಾನದಲ್ಲಿ ಆಕಾರ ಬರುವುದು ಹೊರತು ಆಕಾರವು ಡಕಾರವಾಗುವುದು ವಿರಳವಾದುದರಿಂದಲೂ ಸೂಡವೇ ಮೂಲರೂಪವಾಗಿರಬೇಕೆಂದು ಗ್ರಹಿಸಬಹುದು. ಸಂಗೀತಲಾಕ್ಷಣಿಕರ ಮತ್ತು ವಿಮರ್ಶಕರ ಅಭಿಪ್ರಾಯವೂ ಹಾಗೆ ಇದೆ. ಎಟ್ಟಿಯಾಪುರಂ ಸುಬ್ಬರಾಮ ದೀಕ್ಷಿತರು ರಚಿಸಿದ 'ಸಂಗೀತ ಸಂಪ್ರದಾಯ ದರ್ಶಿನಿ'ಯಲ್ಲಿ ಅದರ ವಿವರಣೆ ಹೀಗಿದೆ. 'ಸೂಳಯನಿ ಶಬ್ದ ಮುನಕು ಗೀತಮನಿಯರ್ಥಮು, ಸೂಳಯನುನದಿ ದೇಶೀಯಪದಮು, ಲಡಯೋರ ಭೇದಮನಿಯುಂಡುಟವಲನ ಸೂಡ ಶಬ್ದಮುಲೋ ಡಕಾರಮುನಕು ಲಕಾರಮು ವಚ್ಚಿನದಿ'. ಡಕಾರದ ಸ್ಥಾನದಲ್ಲಿ ಲಕಾರ ಆಕಾರಗಳು ಬಂದು ಸೂಲ ಸೂಳ ಎಂಬ ರೂಪಗಳಾಗಿವೆ, ಎಂದು ಇದರ ತಾತ್ಪರ್ಯ, ಸಂಸ್ಕೃತದಲ್ಲಿ ಆಕಾರವಿಲ್ಲದಿರುವುದರಿಂದ ಸೂಲ ಎಂಬ ರೂಪವೂ ಕನ್ನಡದಲ್ಲಿ ಸೂಳ ಎಂಬ ರೂಪವೂ ಬಂದಿರುವುದು ಸಹಜ.
ಸೂಡವು ದೇಶೀಯ ಪದ೨ ಎಂದಿಷ್ಟೆ ಲಕ್ಷಣಗ್ರಂಥಗಳಿಂದ ತಿಳಿಯುವುದು ಹೊರತು ಯಾವ ಭಾಷೆಯ ಪದ, ಅದರ ಮೂಲ ವ್ಯುತ್ಪತ್ತಿ ಹೇಗೆ ಎನ್ನುವ ವಿಚಾರವನ್ನು ಇದು ವರೆಗೆ ಯಾರೂ ಚೆನ್ನಾಗಿ ವಿಮರ್ಶಿಸಿದಂತೆ ಕಾಣುವುದಿಲ್ಲ. ಸಂಸ್ಕೃತದಲ್ಲಿರುವ ನಮ್ಮ
ಸಂಗೀತಶಾಸ್ತ್ರ ಗ್ರಂಥಗಳಲ್ಲಿ ಮಾತು, ಮುಕ್ತಾಯ, ಪರಿವಿಡಿ, ಜೋಡಣಿ (ಜೋಡಣೆ)
೧. ಚಂದ್ರಪ್ರಭ ಪುರಾಣ, ಪುಟ ೨೦೧ - ಅನಂತನಾಥ ಪುರಾಣ, ಜನ್ನಕವಿ.
ಪಂಪಾ ವಿರೂಪಾಕ್ಷಾಸ್ಥಾನವರ್ಣನಂ, ಚಂದ್ರಕವಿ, ಪುಟ ೨೭.
೨. ಸಂ. ರ. ಪ್ರಬಂಧಾಧ್ಯಾಯ, ಶ್ಲೋ. ೨೩ರ ವ್ಯಾಖ್ಯಾನ, ಕಲ್ಲಿನಾಥ ಚತುರ್ದಂಡೀ,
ಗೀತಪ್ರಕರಣ- ಸಂ. ಸಾರಾಮೃತ, ಪ್ರಬಂಧಾಧ್ಯಾಯ.