ಈ ಪುಟವನ್ನು ಪ್ರಕಟಿಸಲಾಗಿದೆ
ಸಂಗೀತ ರತ್ನಾಕರ - ವ್ಯಾಖ್ಯಾನ / ೨೮೩

ವ್ಯತ್ಯಾಸಗೊಳಿಸಿ (ಕಲೆ ಎಂದರೆ ಪ್ರಸ್ಪೋಚ್ಚಾರ ಪ್ರಮಾಣ) ಹಾಗೂ ಸೂಕ್ಷ್ಮ ಮಾಡಿ ನಾರದೀಯಶಿಕ್ಷೆಯ ದೀಪ್ತಾಯತಾದಿ ಶ್ರುತಿ ವಿಶೇಷಗಳನ್ನು ಈ ಅಲಂಕಾರಕ್ಕೆ ಹೊಂದಿಕೆ ಯಾಗುವ ವಿಧಾನಗಳಲ್ಲಿ ಪ್ರಯೋಗಿಸಬೇಕು. ಆ ಪ್ರಕಾರ ಸ್ಥಾಯಿ ಆರೋಹಿ, ಅವರೋಹಿ, ಸಂಚಾರಿ ಎಂಬ ಚತುರ್ವಿಧ ವರ್ಣಗಳಲ್ಲಿ ಪ್ರಯೋಗಿಸುವ ಪ್ರಸಾದಿ ಮೊದಲಾದ ೨೨ ಅಲಂಕಾರಗಳು ಗಾನಕ್ಕೆ ವಿಹಿತವಾಗಿರುತ್ತವೆ ಎಂಬ ತಾತ್ಪರ್ಯ.

ಇದನ್ನಿಷ್ಟು ವಿಸ್ತಾರವಾಗಿ ಉದ್ಧರಿಸಿಕೊಟ್ಟಿರುವುದೇಕೆಂದರೆ- ಶ್ರೀ ರಾ. ಸತ್ಯ ನಾರಾಯಣನವರು ಈ ಶ್ರುತಿಜಾತಿಗಳು ಆವರ್ತಕಸ್ಟರ, ಮಧ್ಯಮಭಾವ, ಪಂಚಮಭಾವ, ಸ್ವರಗಳ ಪ್ರತ್ಯೇಕ ವೈಶಿಷ್ಟ್ಯ, ಪರಸ್ಪರ ಸಂಬಂಧ, ವ್ಯಕ್ತಿತ್ವ ಮುಂತಾದುವಕ್ಕೆಲ್ಲ ಕಾರಣ ವಾಗಿದ್ದು ಸಂಗೀತಶಾಸ್ತ್ರಕ್ಕೆ ಮೂಲಾಧಾರವಾಗಿವೆ, 'ಗಾನಶಾಸ್ತ್ರಕ್ಕೆ ತಳಹದಿಯಂತಿರುವ ಕಲ್ಪನೆಯ ಸೃಷ್ಟಿಗೆ ಶ್ರೀ ಶಾರ್ಙ್ಗದೇವನೇ ಸಂಪೂರ್ಣ ಕಾರಣನಾದವನು. ಅವನು ಇವುಗಳನ್ನು ದೀಪ್ತಾ, ಆಯತಾ, ಮೃದು, ಮಧ್ಯಾ, ಕರುಣಾ ಎಂಬ ಹೆಸರಿನಿಂದ ವ್ಯವಹರಿಸಿ ನಾದಶಾಸ್ತ್ರಕ್ಕೂ ಸಂಗೀತಶಾಸ್ತ್ರಕ್ಕೂ ಎಣೆ ಇಲ್ಲದ ಕಾಣಿಕೆಯನ್ನು ನೀಡಿದ್ದಾನೆ.' ( ಸಂ. ರ. ವ್ಯಾ. ೨೩೬).

“ದೀಪಾದಿ ಐದು ಶ್ರುತಿಗಳೇ ಶಬಳಿತವಾಗಿ ಸ್ವರಸಪ್ತಕ, ಸ್ವರಾಷ್ಟಕ, ಸ್ಥಾಯಿ, ಪ್ರಕೃತಿ, ವಿಕೃತಿ, ಸ್ವರವ್ಯವಸ್ಥೆ, ವಾದಿ ಸಂವಾದಿ ಮೊದಲಾದ ಭಾವಗಳು ಈ ಎಲ್ಲ ಮೂಲಭೂತ ತತ್ವಪ್ರಮೇಯಗಳಿಗೂ ಕಾರಣವಾಗಿವೆ.” (ಸಂ. ರ. ವ್ಯಾ. ೩೮೨)

ಇವುಗಳಿಂದಾಗಿ ೨೨ ಸ್ಥಾನಗಳೂ ಪ್ರತ್ಯೇಕವೂ, ಭಿನ್ನವೂ, ವಿಶಿಷ್ಟವೂ ಆಗಿರುವ ಗಣನೆಯನ್ನು ಪಡೆಯುತ್ತವೆ.” (೩೮೨)

“ದ್ವಾವಿಂಶತಿ ಶ್ರುತಿಗಳನ್ನು ಉಂಟುಮಾಡುವುದೂ ಈ ಐದು ಶ್ರುತಿಗಳು; (೩೮೩) ಈಗ ಲಕ್ಷ್ಮದಲ್ಲಿರುವ ಹನ್ನೆರಡು ಸ್ವರಸ್ಥಾನಗಳು ಇವುಗಳಿಂದ ಸಿದ್ಧಿಸುತ್ತವೆ. (೩೮೭) ಈ ಐದು ಶ್ರುತಿಗಳನ್ನು ಬೇರೆ ಬೇರೆ ವಿಧದಲ್ಲಿ ದ್ವಿಶ್ರುತಿ, ತ್ರಿಶ್ರುತಿ ಚತುಶ್ರುತಿಗಳಾಗಿ ಸಂಯೋಜಿಸಿದರೆ ಇವುಗಳಿಂದ ೨೦೦ ಸ್ವರಭೇದಗಳು ಸಿದ್ಧವಾಗುತ್ತವೆ.” (೩೮೭)

“ಈ ಶ್ರುತಿಪಂಚಕದಲ್ಲಿ ಪ್ರತಿಯೊಂದಕ್ಕೂ ಕಾಲ, ಕಲಾ ಮತ್ತು ಪ್ರಮಾಣಗಳು ನಿರ್ದಿಷ್ಟವಾಗಿಯೂ ಬೇರೆ ಬೇರೆಯಾಗಿಯೂ ಇರುವುದರಿಂದ ಪ್ರತಿಯೊಂದಕ್ಕೂ ಒಂದು ವಿಶಿಷ್ಟ ವ್ಯಕ್ತಿತ್ವವು ಲಭಿಸುತ್ತದೆ.” ಈ ಕಲಾಕಾಲ, ಪ್ರಮಾಣಗಳನ್ನು, ನಾನ್ಯದೇವನು ಹೇಳಿದ್ದಾನೆ- ಪಂಚೈತಾಃ ಕಲಾಕಲ ಪ್ರಮಾಣೇನ ವಿಭೇದಿತಾ ದ್ವಾವಿಂಶತೀತಿ ವ್ಯಾಖ್ಯಾತಾ : ಪ್ರತಿಯೊಂದು ಶ್ರುತಿಯೂ ಕಲಾ, ಕಾಲ, ಪ್ರಮಾಣಗಳಲ್ಲಿ ಭಿನ್ನವಾಗಿರುತ್ತವೆ. (೩೭೫)

“ವೈದಿಕ ಸಾಮಗಾನ ಸಂದರ್ಭದಲ್ಲಿ ಪ್ರಸಿದ್ಧವಾಗಿದ್ದ ಲಕ್ಷ್ಯಸಂಬಂಧೀ ತಂತ್ರ ವೊಂದನ್ನು ಸಂಗೀತಶಾಸ್ತ್ರದ ಶ್ರುತಿ ಎಂಬ ಪ್ರಮೇಯವೊಂದಕ್ಕೆ ನಾನ್ಯದೇವನು ಸ್ಪಷ್ಟವಾಗಿ ಅನ್ವಯಿಸುತ್ತಾನೆ.” (ಪುಟ ೩೭೫)

“ದೀಪ್ತಾ, ಆಯತಾ, ಕರುಣಾ, ಮೃದು ಮತ್ತು ಮಧ್ಯಾ ಎಂಬ ಈ ಐದು ಶ್ರುತಿಗಳಿಗೆ ಸಂಸ್ಕಾರ ಪ್ರದಾನ ಸಾಮರ್ಥ್ಯವೂ ಸ್ವರಸಂವೇದ್ಯತೆಯೂ ಅವುಗಳಲ್ಲಿರುವ ಕಾಲಕಲಾ ಪ್ರಮಾಣ ಮತ್ತು ಊರ್ಧ್ವಸ್ಪರ್ಶಗಳೆಂಬ ಗುಣಗಳಿಂದಾಗುತ್ತವೆ.” (೩೯೦).

“ಈ ಶ್ರುತಿಪಂಚಕಕ್ಕೆ ಸಂಸ್ಕಾರಪ್ರದಾನ, ಸ್ವಸಂವೇದ್ಯತೆಗಳು ಪ್ರಯೋಜನ ಗಳೆಂದೂ ಕಲಾಕಾಲ ಪ್ರಮಾಣಾದಿಗಳು ಲಕ್ಷಣಗಳೆಂದೂ ಆಧುನಿಕ ಸಂಗೀತ ಶಾಸ್ತ್ರಜ್ಞರು ತಿಳಿಯಲಿಲ್ಲ”(೩೯೩) ಎಂದು ಮುಂತಾಗಿ ಅವರ ವ್ಯಾಖ್ಯಾನದ ನೂರಾರು ಪುಟಗಳಲ್ಲಿ ಈ