ಈ ಪುಟವನ್ನು ಪ್ರಕಟಿಸಲಾಗಿದೆ

೨೮೪ / ಕುಕ್ಕಿಲ ಸಂಪುಟ

ಶ್ರುತಿಜಾತಿಗಳನ್ನು ಶಾರ್ಙ್ಗದೇವನ ಅತ್ಯುನ್ನತ ಸಾಧನೆ ಎಂದು ನಾನಾವಿಧವಾಗಿ ವರ್ಣಿಸಿರುವುದರ ಮುಖ್ಯ ಸಾರಾಂಶವೆಂದರೆ ಭರತಾದಿ ಪೂರ್ವಾಚಾರ್ಯದಿಂದ ಹಾಗೂ ಅಭಿನವಗುಪ್ತನಿಂದ ಸ್ಫೂರ್ತಿ ಪಡೆದ ಶಾರ್ಙ್ಗದೇವನು ನಿದರ್ಶನವಾಗಿ ಹೇಳಿದ ೨೨ ಶ್ರುತಿಗಳು ಪ್ರತಿಯೊಂದೂ ಭಿನ್ನ ಪ್ರಮಾಣದ ಉಚ್ಚನೀಚ ಅಂತರಗಳನ್ನು ಪಡೆದಿರುತ್ತವೆ ಎಂಬುದು ಈ ಶ್ರುತಿಜಾತಿಗಳಿಂದ ಸಿದ್ಧವಾಗುವುದು. ಅದಕ್ಕಾಗಿಯೇ ಆತನು ಇವನ್ನು ಹೇಳಿರುವುದು ಎಂದಾಗಿದೆ. ಇದಕ್ಕೆ ಅವನು ನಾನ್ಯದೇವನಿಗೆ ಸಂಪೂರ್ಣ ಋಣಿ ಯಾಗಿದ್ದಾನೆಂದೂ ಹೇಳುತ್ತಾರೆ.

ಶಾರ್ಙ್ಗದೇವನ ಗ್ರಂಥದಲ್ಲಿ ಈ ಅಭಿಪ್ರಾಯದ ಲವಲೇಶ ಸಹ ವ್ಯಕ್ತವಾಗಿರುವು ದಿಲ್ಲ. ಅಷ್ಟೇ ಅಲ್ಲ ಇದು ಅವನ ಪ್ರತಿಪಾದನೆಗೆ ಸಂಪೂರ್ಣ ವಿರುದ್ಧವೇ ಆಗಿದೆ. ಆತನು ನಿದರ್ಶನದ ಮೂಲಕ ವೀಣೆಯ ೨೨ ತಂತಿಗಳಲ್ಲಿ ಶ್ರುತಿನಾದಗಳನ್ನು ಹಾಗೂ ಸ್ವರ ಗಳನ್ನು ಸ್ಥಿರಗೊಳಿಸಿ ನಾಲ್ಕು ಸಾರಣೆಗಳಿಂದ 'ಇಯತ್ತಾ ಜಾಯತೇಸ್ಸುಟಂ' ಎಂದು ೨೨ ಶ್ರುತಿಗಳ ಪ್ರಮಾಣವನ್ನೂ ಸಂಖ್ಯೆಯನ್ನೂ ನಿರ್ಣೈಸಿ ಇವುಗಳಿಂದ ಸಪ್ತಸ್ವರಗಳಾಗುತ್ತವೆ, ಇಂತಿಂತಹ ಶ್ರುತಿಗಳಲ್ಲಿ ಪಟ್ಟಾದಿ ಸ್ವರಗಳು ಸ್ಥಿರವಾಗಿವೆ ಎಂದು ಕೂಡ ತೀರ್ಮಾನಿಸಿದ ಮೇಲೆಯೇ ನಾನ್ಯದೇವನಿಂದ ಈ ಶ್ರುತಿಜಾತಿಗಳ ನಾಮಮಾತ್ರ ಸಂಗ್ರಹಿಸಿ ೧೧ ಶ್ಲೋಕಗಳಲ್ಲಿ ಕೊಟ್ಟಿರುವುದು ಹೊರತು ಅದಕ್ಕಿಂತ ಹಿಂದಾಗಲಿ ಮುಂದಾಗಲಿ ಎಲ್ಲಿಯೂ ಈ ಶ್ರುತಿಗಳ ಕುರಿತು ಚಕಾರ ಶಬ್ದವನ್ನೆತ್ತಿದ್ದಿಲ್ಲ. ಇವುಗಳ ಲಕ್ಷಣವನ್ನಾಗಲಿ, ಪ್ರಯೋಜನವನ್ನಾಗಲಿ, ವಿನಿಯೋಗವನ್ನಾಗಲಿ ಸತ್ಯನಾರಾಯಣನವರು ಹೇಳುವ ಇನ್ನಾವುದನ್ನೇ ಆಗಲಿ ಆತನು ಸೂಚಿಸಿದ್ದು ಸಹ ಇರುವುದಿಲ್ಲ. ವೀಣಾನಿದರ್ಶನದಲ್ಲಿ ಅವನು ಹೇಳಿದ ೨೨ ಶ್ರುತಿಗಳೆಂಬುವು ಕ್ರಮವಾಗಿ ಒಂದರಿಂದೊಂದು ಉಚ್‌ಚ್ಚತರ ಪಾದ ಭಿನ್ನ ಸ್ವರೂಪವುಳ್ಳ ನಾದಗಳಾಗಿರುವುದರಿಂದ ವ್ಯವಹಾರ ಸೌಲಭ್ಯಕ್ಕಾಗಿ ಅವುಗಳಿಗೆ ಬೇರೆ ಬೇರೆ ಹೆಸರುಗಳಿರುವುದು ಅನುಕೂಲವೇ. ಆದ್ದರಿಂದ ನಾನ್ಯದೇವನು ಅವುಗಳಿಗೆ ಕೊಟ್ಟಿರುವ ಹೆಸರುಗಳನ್ನು ತನ್ನ ಗ್ರಂಥದಲ್ಲಿ ಸಂಗ್ರಹಿಸಿ ಕೊಟ್ಟಿದ್ದಾನೆ ಹೊರತು ಇದಕ್ಕಿಂತ ಹೆಚ್ಚಿನ ಯಾವ ಪುರುಷಾರ್ಥವನ್ನೂ ಅವನು ಈ ಶ್ರುತಿಗಳಲ್ಲಿ ಉದ್ದೇಶಿಸಿರುವಂತೆ ಕಾಣುವುದಿಲ್ಲ. ಇದ್ದರೆ ಅವನು ಹೇಳಬೇಕಲ್ಲವೆ? ಸಂಗೀತ ನಾರದ, ಪಾರ್ಶ್ವದೇವ, ಕುಂಭಕರ್ಣ, ಸುಧಾಕಲಶಾದಿ ಇತರ ಸಂಗೀತಶಾಸ್ತ್ರ ಕರ್ತರೂ ಒಬ್ಬೊಬ್ಬರು ಒಂದೊಂದು ವಿಧವಾಗಿ ಶ್ರುತಿಗಳಿಗೆ ಬೇರೆ ಬೇರೆ ಹೆಸರುಗಳನ್ನು ಕೊಟ್ಟಿದ್ದಾರೆ. ಸ್ವರ, ತಾನ, ಮೂರ್ಛನೆ, ಅಲಂಕಾರ, ಜಾತಿ, ರಾಗಾದಿಗಳಲ್ಲಿ ಬೇರೆ ಬೇರ ಹೆಸರುಗಳಿರುವಂತೆ ಶ್ರುತಿಗಳಿಗೂ ಇರಲಿ ಎಂದು ಕೊಟ್ಟಿದ್ದಾರೆ. ಭರತನು ಯಾಕೆ ಶ್ರುತಿಗಳಿಗೆ ಹೆಸರು ಕೊಟ್ಟಿಲ್ಲ ಎಂದರೆ ಆತನ ಶ್ರುತಿಗಳೆಂದರೆ ಪ್ರಮಾಣ ಮಾತ್ರ. ಅವುಗಳಿಗೆ ಸ್ವತಃ ವ್ಯಕ್ತಿ ಸ್ವರೂಪವಿಲ್ಲ, ಎಂದರೆ ನಾದಗಳಿಲ್ಲ, ಅವುಗಳ ವ್ಯಕ್ತಸ್ವರೂಪ ವೆಂದರೆ ಸ್ವರಗಳೇ ಆಗಿವೆ. ಆದ್ದರಿಂದ ಅವಕ್ಕೆ ಬೇರೆ ಹೆಸರುಗಳಿಲ್ಲ. ಏಕಶ್ರುತಿ ಪ್ರಮಾಣವನ್ನು 'ಪಂಚಮ ಶ್ರುತಿ' ಎಂದಿದ್ದಾನೆ. (ಎರಡು ದ್ವಿಪಂಚಮಗಳ ಪ್ರಮಾಣ ಎಂಬರ್ಥ. ಗಾಂಧಾರವು ಶ್ರುತಿ, ಋಷಭವು ತ್ರಿಶ್ರುತಿ, ಷಡ್ಡ- -ಚತುಃ ಶ್ರುತಿ ಹೀಗೆ.)

ನಾನ್ಯದೇವನಾದರೂ ಈ ಶ್ರುತಿಗಳಿಗೆ ಸತ್ಯನಾರಾಯಣನವರು ಹೇಳುವ ಯಾವ ಮಹತ್ವವನ್ನೂ ಕೊಟ್ಟಿದ್ದು ಕಾಣುವುದಿಲ್ಲ. ಆತನು ತನ್ನ ಭರತಭಾಷ್ಯಗ್ರಂಥದಲ್ಲಿ, ನಾರದೀಯ ಶಿಕ್ಷೆಯಲ್ಲಿ ಈ ಶ್ರುತಿಗಳಿಗೆ ಯಾವ ಅರ್ಥ ಹಾಗೂ ಲಕ್ಷಣವಿದೆಯೋ ಅದನ್ನೇ ಹೇಳಿರುವುದಾಗಿದೆ. ಮಾತ್ರವಲ್ಲ ಭರತನು ಹೇಳಿದ (ಉಚ್ಚನೀಚ ಪ್ರಮಾಣ)