ಈ ಪುಟವನ್ನು ಪ್ರಕಟಿಸಲಾಗಿದೆ
ಸಂಗೀತ ರತ್ನಾಕರ - ವ್ಯಾಖ್ಯಾನ / ೨೮೫

ಶ್ರುತಿಗಳು ಇವಕ್ಕಿಂತ ಭಿನ್ನವಾದುವು ಎಂಬುದನ್ನು ಅಲ್ಲಿಯೇ ವ್ಯಕ್ತಪಡಿಸಿದ್ದಾನೆ. ಭರತನು 'ಸ್ವರ ಮಂಡಲ ಸಾಧಿತಾಃ' ಎಂದೆನ್ನುವ ಆ ೨೨ ಶ್ರುತಿಗಳನ್ನು ಸ್ವರಮಂಡಲಗಳ ಮೂಲಕವೇ ನಿರೂಪಿಸಿ ಆ ಪ್ರಕರಣವನ್ನು (ಭ. ಭಾ ಚತುರ್ಥಪ್ರಕರಣ) ಅಲ್ಲಿಗೆ ಮುಗಿಸಿ ಮುಂದಿನ ೫ನೇ ಪ್ರಕರಣದಲ್ಲಿ ನಾರದೀಯ ಶಿಕ್ಷೆಯಲ್ಲಿರುವ ಈ ಶ್ರುತಿಗಳನ್ನು ಹೇಳುತ್ತಾನೆ. ಹಾಗೂ ಇವು ಹಿಂದಿನ ಪ್ರಕರಣಗಳಲ್ಲಿ ಭರೋತೋಕ್ತ ಕ್ರಮದಲ್ಲಿ ನಿರೂಪಿಸಿದ ಶ್ರುತಿಗಳಿಗಿಂತ ಭಿನ್ನವಾದುವು. ಎಂಬುದರಿಂದಲೇ ಈ ಪ್ರಕರಣಕ್ಕೆ 'ಶ್ರುತಿ ಭೇದಾದಿ ಪ್ರಕರಣಂ' ಎಂಬ ಹೆಸರು ಕೊಟ್ಟಿರುತ್ತಾನೆ ಎಂದು ತಿಳಿಯಬಹುದಾಗಿದೆ. (ಹಿಂದಿನ ಗ್ರಾಮಭೇದ ಪ್ರಕರಣವನ್ನು 'ಯಥಾಹ ಭರತಃ' ಎಂದು ಪ್ರಾರಂಭಿಸಿರುವುದ ರಿಂದಲೂ ಈ ಶ್ರುತಿಭೇದ ಪ್ರಕರಣವನ್ನು 'ತಥಾಚ ನಾರದ ಎಂದು ಪ್ರಾರಂಭಿಸಿರುವುದ ರಿಂದಲೂ ಇದು ಸ್ಪಷ್ಟವಾಗುವುದು. (ಈ ಶ್ರುತಿಗಳ ಲಕ್ಷಣ ಶ್ಲೋಕಗಳೂ ನಾರದೀಯ ಶಿಕ್ಷೆಯ ಉದ್ಧತಿಗಳೇ ಆಗಿವೆ. ಭ. ಭಾ. ಪು. ೯೪)

ನಾರದೀಯ ಶಿಕ್ಷೆಯಿಂದ ಉದ್ಧರಿಸಿದ ಈ ಶ್ಲೋಕಗಳಲ್ಲಿ-

ದೀಪ್ತಾಮಂದ್ರೇ ದ್ವಿತೀಯೇ ಚ ಪ್ರಚತಾರ್ಥತಥೈವಚ
ಅತಿಸ್ಟಾರೇ ತೃತೀಯೇಚ ಕೃಷ್ಣತು ಕರುಣಾಶ್ರುತಿ:

ಎಂಬ ಶ್ಲೋಕಕ್ಕೆ ನ್ಯಾಯವಾಗಿ ಕೃಷ್ಣಸ್ಪರ (ಪಂಚಮ) ಒಂದರಲ್ಲಿ ಮಾತ್ರ ಕರುಣಾ ಶ್ರುತಿ ಇರುವುದೆಂದೂ ಉಳಿದ ಆರು ಸ್ವರಗಳಲ್ಲಿ ದೀಪಾಶ್ರುತಿ ಇರುವುದೆಂದೂ ಅರ್ಥವಾಗುವುದು. ನಾನ್ಯದೇವನ ಗ್ರಂಥದಲ್ಲಿ ಇದಕ್ಕೆ 'ಅನೇನನಿಷಾದಗಾಂಧಾರ ಮಧ್ಯಮಷಷ್ಟೇಷು ದೀಪ್ತಾ ಧೈವತರ್ಷಭಪಂಚಮೇಷು ಕರುಣಾ' ಎಂದು ಅರ್ಥ ಕೊಟ್ಟಿದ್ದೂ ಕಾಣುತ್ತದೆ. (ಪಾಠದೋಷದಿಂದ ಹಾಗಿದ್ದಿರಲೂಬಹುದು) ಉಳಿದ ಮೃದು ಮಧ್ಯಾ ಆಯತ ಎಂಬ ಶ್ರುತಿಗಳು ಹೇಗೆ ಬೇಕೋ ಹಾಗೆ ದ್ವಿತೀಯಾದಿಸ್ವರಗಳಲ್ಲಿ ಎಂದರೆ ದ್ವಿತೀಯ, ತೃತೀಯ, ಚತುರ್ಥ, ಮಂದ್ರ, ಅತಿಸ್ಟಾರ್ಯ (ರಿ ಸ ನಿ ದ ಪ) ಸ್ವರಗಳಲ್ಲಿ ಇರುತ್ತವೆ ಎಂದು ತಿಳಿಯತಕ್ಕದ್ದು ಎನ್ನುತ್ತಾನೆ. (ಶ್ರುತಯೋನ್ಮಾದ್ವಿತೀಯಸ್ಯ ಮೃದುಮಧ್ಯಾಯತಾಃ ಸ್ಮೃತಾಃ | ಅನ್ಯಾಶ್ಚಮೃದು ಮಧ್ಯಾಯತಾ ವಿತೇವ ದ್ವಿತೀಯಾ ದಿಷು ಯಥಾಯಥಮವಗಂತವ್ಯಾ.)

ಮತ್ತು ಈ ಐದು ಶ್ರುತಿಗಳು ಕಲಾಕಾಲಪ್ರಮಾಣದಿಂದ ಭಿನ್ನಗಳಾಗಿ ೨೨ ಎಂದು ಹೇಳಲ್ಪಟ್ಟಿವೆ. . 'ಪಂಚೈತಾಃ ಕಲಾಕಾಲಪ್ರಮಾಣೇನ ವಿಭೇದಿತಾ ಸ್ವಾವಿಂಶತೀತಿ ವ್ಯಾಖ್ಯಾತಾಃ |' ಎನ್ನುತ್ತಾನೆ.

ಇಲ್ಲಿ 'ಕಲೆ' ಎಂದೆನ್ನುವ ಶಬ್ದಕ್ಕೆ ಸಾಮಾನ್ಯವಾಗಿ ಮಾತ್ರೆ ಅಥವಾ ಹಸ್ಟೋಚ್ಚಾರ ಎಂಬ ಅರ್ಥವಿದೆ. ಇದರ ಪ್ರಮಾಣದಿಂದ ಇವು ವಿಭಿನ್ನಗಳಾಗುತ್ತವೆ ಎಂದರೆ ಮಾತ್ರೆಯ ಕಾಲಪ್ರಮಾಣ ವ್ಯತ್ಯಾಸದಿಂದ ಈ ಸ್ವರಗತ ಶ್ರುತಿಗಳು ೨೨ ವಿಧವಾಗಿ ಪರಿಗಣಿಸಲ್ಪಡು ಇವೆ ಎಂಬ ಅರ್ಥವಾಗುವುದು. (ನಾರದೀಯ ಶಿಕ್ಷೆಯಲ್ಲಿ ಈ ವಿಚಾರ ಹೇಳಿರುವುದಿಲ್ಲ). ಈ ಅರ್ಥದಲ್ಲಿಯಾದರೆ ಸ್ವರಗಳನ್ನು ದೀಪ, ಮೃದು, ಕರುಣ ಇತ್ಯಾದಿ ಗುಣಭೇದ ಗಳಿಂದ ಉಚ್ಚರಿಸತಕ್ಕ ಕಾಲಪ್ರಮಾಣದಲ್ಲಿ ವ್ಯತ್ಯಾಸವುಂಟೆಂದಾಗುವುದು. ನಾನ್ಯದೇವನು ಅದು ಹೇಗೆಂಬುದನ್ನು ಹೇಳಲಿಲ್ಲ.

ಇದಲ್ಲದೆ ವರ್ಣಾಲಂಕಾರಗಳಲ್ಲಿ ಕಲೆ ಎಂಬುದಕ್ಕೆ ಸ್ವರಗಳನ್ನು ಒಂದು, ಎರಡು, ಮೂರು, ನಾಲ್ಕು ಎಂಬಂತೆ ಪ್ರಸ್ತವಾಗಿಯೂ ದೀರ್ಘ, ಹಸ್ತ ಸಂಮಿಶ್ರಿತವಾಗಿಯೂ