ಈ ಪುಟವನ್ನು ಪ್ರಕಟಿಸಲಾಗಿದೆ

೩೬೪ | ಕುಕ್ಕಿಲ ಸಂಪುಟ
ಇದ್ದವನು. ಆಗ ಅವರು ತಾವು ಪ್ರತಿಮಾಡಿಸಿದ್ದ ತೊರವೆ ರಾಮಾಯಣ, ನಿತ್ಯಾತ್ಮ ಭಾಗವತಗಳನ್ನು ನನ್ನಿಂದ ಓದಿಸುತ್ತಿದ್ದಂತೆಯೇ, ಮತ್ತೆ ತಮ್ಮ ಪೌತ್ರನಿಂದಲೂ ಓದಿಸುತ್ತಿದ್ದರು. ಹೀಗೆ ಪ್ರಸ್ತುತ ಲೇಖನಕ್ಕೆ ವಿಷಯಭೂತರಾದ ಕೃಷ್ಣ ಭಟ್ಟರಿಗೆ ಬಾಲ್ಯದಲ್ಲಿಯೇ ಕನ್ನಡ ಸಾಹಿತ್ಯದ ಹಾಗೂ ಯಕ್ಷಗಾನದ ಸಂಸ್ಕಾರವು ಚೆನ್ನಾಗಿ ಆಗುವಂತಾಯಿತು. ಇದೂ ಅಲ್ಲದೆ ಪೂರ್ವೋಕ್ತ ವೆಂಕಟರಮಣ ಭಟ್ಟರ ನೆರೆಮನೆ ಯೆಂಬುದು ಆ ಕಾಲದಲ್ಲಿ ಒಂದು ಸಂಸ್ಕೃತ ಪಾಠಶಾಲೆಯೇ ಎಂಬಂತಿತ್ತು. ಸಂಸ್ಕೃತದಲ್ಲಿ ಅಸಾಮಾನ್ಯ ವಿದ್ವಾಂಸರಾಗಿದ್ದ ಮಿತ್ತೂರು ನಾರಾಯಣ ಶಾಸ್ತ್ರಿಗಳು ಆ ಮನೆಯ ಒಬ್ಬಿಬ್ಬರಿಗೆ ಅಲ್ಲಿ ಪಾಠ ಹೇಳುತ್ತಿದ್ದರು. ಕೃಷ್ಣ ಭಟ್ಟರೂ ಅಲ್ಲಿ ಸೇರಿಕೊಂಡು ಸಂಸ್ಕೃತದ ಪ್ರಾಥಮಿಕ ಪರಿಚಯವನ್ನೂ ಚೆನ್ನಾಗಿ ಮಾಡಿಕೊಂಡರು.
ಬಡೆಕ್ಕಿಲದ ಬಳಿಯ ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸವನ್ನು ಮುಗಿಸಿದ ಮೇಲೆಕೃಷ್ಣ ಭಟ್ಟರು ಮುಂದಿನ ವಿದ್ಯಾಭ್ಯಾಸಕ್ಕಾಗಿ ಪುತ್ತೂರಿನ ಬೋರ್ಡು ಹೈಸ್ಕೂಲಿಗೆ ಸೇರಿದರು. ಅಲ್ಲಿ ಅಭ್ಯಾಸ ಮಾಡುತ್ತಿದ್ದ ಕಾಲದಲ್ಲಿಯೇ ಆ ಹೈಸ್ಕೂಲಿನ ಪಂಡಿತರಾಗಿದ್ದ ದಿವಂಗತ ಕಡವ ಶಂಭು ಶರ್ಮ, ವೇದಾಂತ ಶಿರೋಮಣಿ-ಇವರ ಬಳಿಯಲ್ಲಿ ಖಾಸಗಿ ಯಾಗಿ ಸಂಸ್ಕೃತಾಭ್ಯಾಸವನ್ನೂ ಮಾಡಿದರು. ಆದರೆ ಹೈಸ್ಕೂಲು ವಿದ್ಯಾಭ್ಯಾಸವನ್ನು ಅಲ್ಲಿ ಪೂರ್ಣಗೊಳಿಸುವುದು ಕೃಷ್ಣ ಭಟ್ಟರಿಗೆ ಸಾಧ್ಯವಾಗಲಿಲ್ಲ. ಮನೆಯಲ್ಲಿ ಅವರ ಅಜ್ಜ ತೀರಿ ಹೋದರು. ಅವರ ತಂದೆ ದಿ. ನಾರಾಯಣ ಭಟ್ಟರು ತಮ್ಮ ಕೃಷಿ ಕಾರ್ಯಗಳಲ್ಲಿ ಮಗನ ನೆರವನ್ನು ಅಪೇಕ್ಷಿಸಿ ಹೈಸ್ಕೂಲಿನಿಂದ ಅವರನ್ನು ಬಿಡಿಸಿ ಮನೆಗೆ ಕರೆಯಿಸಿಕೊಂಡರು. ಇದರಿಂದಾಗಿ ಕೃಷ್ಣ ಭಟ್ಟರು ಕೃಷಿಕಾರ್ಯಗಳಲ್ಲಿಯೂ ನಿಪುಣರಾಗಿ ಪರಿಣಮಿಸಿದರು. ಆದರೆ ವಿದ್ಯಾಭ್ಯಾಸದ ತೃಷ್ಣೆ ಅವರನ್ನು ಬಿಡದುದರಿಂದ, ತಮ್ಮ ತಂದೆಯ ಒಪ್ಪಿಗೆ ಯಿದ್ದೋ ಇಲ್ಲದೆಯೋ, ಆಗ ಮಂಗಳೂರಲ್ಲಿ ನೆಲಸಿದ್ದ ನನ್ನಲ್ಲಿಗೆ ಬಂದು ಖಾಸಗಿ ಯಾಗಿ ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ಕುಳಿತುಕೊಳ್ಳುವ ಏರ್ಪಾಡು ಮಾಡಬೇಕೆಂದು ಕೇಳಿಕೊಂಡರು. ಅದರಂತೆ, ನನ್ನ ಮಿತ್ರರೂ ಸಹೋದ್ಯೋಗಿಗಳೂ ಆಗಿದ್ದ ದಿವಂಗತ ಬೆಳ್ಳ ಭುಜಂಗರಾಯರ ಬಳಿಯಲ್ಲಿ ಅವರು ಅಭ್ಯಾಸ ಮಾಡುವಂತೆ ನಾನು ವ್ಯವಸ್ಥೆ ಮಾಡಿದೆ. ಅದಕ್ಕೆ ಮೊದಲು ರಾಷ್ಟ್ರಬಂಧು ವಾರಪತ್ರಿಕೆಯ ಉಪಸಂಪಾದಕನಾಗಿ ಕೆಲಸ ಮಾಡುತ್ತಿದ್ದ ನಾನು ಉಪಾಧ್ಯಾಯ ವೃತ್ತಿಯನ್ನು ಸ್ವೀಕರಿಸಿದುದರಿಂದ ಮಾಡುತ್ತಿದ್ದ ಆ ಕೆಲಸವನ್ನು ಕೃಷ್ಣ ಭಟ್ಟರಿಗೆ ಒಪ್ಪಿಸಿದೆ. ಇದರಿಂದ ಲೇಖನ ಕಲೆಯ ಅಭ್ಯಾಸವೂ ಅವರಿಗೆ ಆಗುವಂತಾಯಿತು. ಹೀಗೆ ಒಂದೆರಡು ವರ್ಷ ನನ್ನ ಮನೆ ಯಲ್ಲಿಯೇ ಅವರು ಇದ್ದುದರಿಂದ ನಮ್ಮಿಬ್ಬರ ಪರಸ್ಪರ ಸ್ವಭಾವ ಪರಿಚಯವೂ ಸ್ನೇಹವೂ ಪ್ರಗಾಢವಾದುವು. ಮತ್ತು ಆ ಸಮಯದಲ್ಲಿ ಹಳೆಗನ್ನಡ ಕಾವ್ಯಗಳ ಪಠನ ವನ್ನೂ ಅವರು ಮಾಡುತ್ತಾ ಇದ್ದುದಲ್ಲದೆ ನನ್ನ ನೆರೆಮನೆಯಲ್ಲಿದ್ದ ದಿವಂಗತ ಕೃಷ್ಣ ಉಡುಪರ ಬಳಿಯಲ್ಲಿ ಸಂಗೀತಾಭ್ಯಾಸವನ್ನೂ ಮಾಡುತ್ತಿದ್ದರು. ಹೀಗೆ ಅವರು ಸಂಸ್ಕೃತ ದಲ್ಲಿಯೂ ಇಂಗ್ಲಿಷಿನಲ್ಲಿಯೂ ಕನ್ನಡದಲ್ಲಿಯೂ ಸಂಗೀತದಲ್ಲಿಯೂ ಲೇಖನಕಲೆ ಯಲ್ಲಿಯೂ ಸಾಕಷ್ಟು ಪ್ರೌಢಿಮೆಯನ್ನು ಪಡೆದರು. ಆದರೆ ಮೆಟ್ರಿಕ್ಯುಲೇಷನ್‌ ಪರೀಕ್ಷೆಗೆ ಕುಳಿತುಕೊಳ್ಳುವ ಯೋಗವು ಅವರಿಗೆ ಒದಗಲಿಲ್ಲ. ಅವರ ತಂದೆಯವರು ತಮ್ಮ ಸಂಬಂಧಿಕರೊಬ್ಬರ ದಾಕ್ಷಿಣ್ಯಕ್ಕೆ ಸಿಕ್ಕಿ ಆರ್ಥಿಕ ಕಷ್ಟಕ್ಕೆ ಒಳಗಾದುದರಿಂದ ಇವರು ಸ್ವಗೃಹಕ್ಕೆ ಹಿಂತೆರಳಲೇ ಬೇಕಾಯಿತು. ಅಲ್ಲಿ ಗೃಹಕೃತ್ಯಗಳೊಡನೆ ಯಕ್ಷಗಾನ ಪದ್ಧತಿಯ ಗಾಯನ, ಮೃದಂಗವಾದನ ಮುಂತಾದ ಕಲೆಗಳಲ್ಲಿಯೂ ವ್ಯಾಪೃತರಾಗಿದ್ದು ಯಕ್ಷಗಾನ ಗ್ರಂಥಗಳ ಮತ್ತು ಕಲೆಯ ಸಂಶೋಧನೆಯನ್ನು ಮಾಡತೊಡಗಿದರು. ಮಾತ್ರವಲ್ಲ