ಈ ಪುಟವನ್ನು ಪ್ರಕಟಿಸಲಾಗಿದೆ
೩೮ / ಕುಕ್ಕಿಲ ಸಂಪುಟ

ಲಕ್ಷಣಗಳನ್ನು ತಿಳಿಯಬಹುದಾಗಿದೆ. ಆ ಕಾಲದಲ್ಲಿ ಪ್ರಚಲಿತವಾಗಿದ್ದ ಸಂಗೀತ ಪದ್ಧತಿಯು ವಿದ್ಯಾರಣ್ಯರ ಮತಾನುಸಾರವಾಗಿರುವುದೆಂದೇ ಅವನ ಅಭಿಮತ. ಮಾತ್ರ ಅಲ್ಲ, ಪುಂಡರೀಕ ರಾಮಾಮಾತ್ಮರ ರಾಗಲಕ್ಷಣ ಸ್ವರಸ್ಥಾನಾದಿ ನಿರ್ಣಯಗಳೂ ವಿದ್ಯಾರಣ್ಯರ ಮತಕ್ಕೆ ಅನುವಾದಿಗಳಾಗಿವೆ. ನಮ್ಮ ಯಕ್ಷಗಾನದ ಗಾನಪದ್ಧತಿಯು ಮೇಲಿನ ಗ್ರಂಥಗಳಲ್ಲಿ ನಿರೂಪಿಸಿರುವ ಲಕ್ಷಣಾನುಸಾರವಾದ ಪೂರ್ವ ಪರಂಪರೆಯನ್ನು ಉಳಿಸಿಕೊಂಡು ಬಂದಿರುವುದೆಂಬುದು ಮಹತ್ವದ ವಿಷಯ. ಕ್ರಮಬದ್ಧವಾದ ಶಾಸ್ತ್ರೀಯ ಶಿಕ್ಷಣವಿಲ್ಲದಿದ್ದರೂ ಪರಂಪರಾಗತವಾಗಿ ಕಂಠದಿಂದ ಕಂಠಕ್ಕೆ ಬಂದುಳಿದ ಆದರ್ಶ ಸಂಪ್ರದಾಯಗಳನ್ನು ಶುದ್ಧವಾಗಿಯೇ ಉಳಿಸಿಕೊಂಡು ಬಂದ ಸುಶಾರೀರವುಳ್ಳ ಅನುಭವರಾದ ಪ್ರಸಿದ್ಧ ಯಕ್ಷಗಾನ ಭಾಗವತರು ನಮ್ಮಲ್ಲಿದ್ದರು. ಪ್ರಾಯಸ್ಥರಾದ ಕೆಲಮಂದಿ ಈಗಲೂ ಇದ್ದಾರೆ. ಪೂರ್ವ ಶಾಸ್ತ್ರಗ್ರಂಥಗಳ ಪರಿಚಯವುಳ್ಳ ಸಂಗೀತಜ್ಞರಾದ ವಿದ್ವಾಂಸರು ನಮ್ಮ ಹಳೆಯ ಕ್ರಮದ ಹಾಡುಗಾರಿಕೆಯನ್ನು ಕಿವಿಯಾರೆ ಕೇಳಿ ಪರಿಶೀಲಿಸಿಯೆ ಅದರ ಶಾಸ್ತ್ರೀಯತೆಯನ್ನು ಮನಗಾಣಬೇಕಲ್ಲದೆ ಬರೆದು ತಿಳಿಸಲು ಸಾಧ್ಯವಾಗುವ ವಿಷಯವಿದಲ್ಲ. ಆದರೂ ಈಗ ಸುಮಾರು ಮೂವತ್ತು ವರ್ಷಗಳ ಹಿಂದಿನಿಂದಲೇ ವಿದ್ವಾಂಸರಾದ ಸಂಗೀತಜ್ಞರ ಸಹಾಯದಿಂದಲೂ ನನಗಿರುವ ಸಂಗೀತದ ಮತ್ತು ಯಕ್ಷಗಾನದ ಲಕ್ಷ್ಯ ಲಕ್ಷಣಗಳ ಅಲ್ಪ ಅಭ್ಯಾಸ ಪರಿಚಯಗಳಿಂದಲೂ, ಯಕ್ಷಗಾನದ ಕೆಲವು ಹಳೆಯ ಓಲೆ ಪ್ರತಿಗಳ ಪರಿಶೀಲನೆಯಿಂದಲೂ, ಹೆಸರಾಂತ ಹಳೆಯ ಭಾಗವತರಲ್ಲಿ ಕೆಲಮಂದಿ ಹಾಡುವುದನ್ನು ಕೇಳಿ ಯಥಾಮತಿ ಪರಿಶೀಲಿಸಿದ ಈ ಕೆಲವು ಮುಖ್ಯ ವಿಚಾರಗಳನ್ನು ವಿದ್ವಾಂಸರ ಗಮನಕ್ಕೆ ಪ್ರಚೋದಕವಾಗಬಹುದೆಂಬ ದೃಷ್ಟಿಯಿಂದ ವಿಜ್ಞಾಪಿಸುತ್ತೇನೆ.
ಮೊದಲನೆಯದಾಗಿ, ನಮ್ಮ ಯಕ್ಷಗಾನದಲ್ಲಿ ವೆಂಕಟಮಖಿಯ ಮೇಳಕರ್ತ ರಾಗಗಳ ಪ್ರಯೋಗವಾಗಲಿ ಅವುಗಳ ಹೆಸರಾಗಲಿ ಇಲ್ಲ. ಅವುಗಳ ಜನ್ಮಗಳೆಂದು ಹೇಳುವ ರಾಗಗಳ ಹೆಸರಿರುವುದಾದರೂ ಸ್ವರ ಸ್ಥಾನಗಳಲ್ಲಿ ಆ ಮೇಳ ಕರ್ತರಾಗಗಳಿಗಿಂತ ಭಿನ್ನವಾಗಿರುವವೇ ಹೆಚ್ಚು. ರಾಮಸ್ವಾಮಿ ದೀಕ್ಷಿತರು ನಿರ್ಮಿಸಿದ 'ಹಂಸಧ್ವನಿ' ರಾಗವೂ ನಮ್ಮ ಯಕ್ಷಗಾನದ ಬಳಕೆಯಲ್ಲಿಲ್ಲ.
ಮಧ್ಯಮಾವತಿ ರಾಗಕ್ಕೆ ಮೊದಲಿದ್ದ ಮಧ್ಯಮಾದಿ ಎಂಬ ಹೆಸರೇ ಹಳೆಯ ಪ್ರತಿಗಳಲ್ಲಿರುವುದು ಕಂಡುಬರುತ್ತದೆ.
ನಮ್ಮ ಯಕ್ಷಗಾನದ ರಾಗಗಳ ಹೆಸರುಗಳೂ, ಸ್ವರಸಂಚಾರಗಳೂ, ಶುದ್ಧ ವಿಕೃತ ಸ್ವರಸ್ಥಾನಗಳೂ, ಷಾಡವ ಔಡವರಾಗಗಳ ವರ್ಜ್ಯಾವರ್ಜ್ಯ ಸ್ವರಗಳೂ, ವಿದ್ಯಾರಣ್ಯ ಪುಂಡರೀಕ ವಿಠಲ ಪ್ರಕೃತಿಗಳ ಲಕ್ಷಣಕ್ಕನುಸಾರವಾಗಿಯೇ ಇರುತ್ತವೆ.
ಪ್ರಚಲಿತ ಸಂಗೀತ ಸಂಪ್ರದಾಯದ ಲಕ್ಷ್ಯ ಲಕ್ಷಣಗಳನ್ನು ನಿರೂಪಿಸುವ 'ಸಂಗೀತ ಸಂಪ್ರದಾಯ ಪ್ರದರ್ಶಿನಿ'ಯೇ ಮೊದಲಾದ ಗ್ರಂಥಗಳಲ್ಲಿರುವ ಅನೇಕ ರಾಗಗಳ ಲಕ್ಷಣಗಳಿಗೂ ಯಕ್ಷಗಾನದ ಆ ರಾಗಗಳ ಲಕ್ಷಕ್ಕೂ ಬಹುಧಾ ಭಿನ್ನತ್ವವಿದೆ.

ಉದಾ :

೧. ಆಹೇರಿ ರಾಗದಲ್ಲಿ ಈಗ ಸಂಗೀತದ ರೂಢಿಯಲ್ಲಿರುವಂತೆ ಹನ್ನೆರಡೂ ಸ್ವರಗಳ ಪ್ರಯೋಗವು ಯಕ್ಷಗಾನದ ಆಹೇರಿಯಲ್ಲಿಲ್ಲ. ಅದು ಹಿಂದೆ ಹೇಳಿದ ಶಾಸ್ತ್ರಗ್ರಂಥಗಳಲ್ಲಿರುವಂತೆ ಪಂಚಶ್ರುತಿ (ಚತುಃಶ್ರುತಿ) ಋಷಭ, ಸಾಧಾರಣ ಗಾಂಧಾರ, ಶುದ್ಧ