ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೪. ಟ KJ ಕುರುಕ್ಷೇತ್ರ' ಹಿರಿಯರ ಕಾಲದಲ್ಲಿಯೂ ಗೌರಏರ್ಯದಿಂದ ನೀವು ರಣಪಾಂಡಿತ್ಯವನ್ನು ತೋರಿಸಿದವರು. ಅವರ ಅನ್ನದಿಂದ ಬೆಳೆದ ನಿಮ್ಮ ದೇಹಗಳನ್ನು ಸಾರ್ಥಕವಾಗುವ ಸಮಯವು ಈಗ ಒದಗಿರುತ್ತದೆ. ಸ್ವರ್ಗಲೋಕದಲ್ಲಿ ನಿಮ್ಮ ಆ ರಾವಸಾಹೇಬರೂ, ಅಪ್ಪಾಸಾಹೇ ಬರೂ ಮೆಟ್ಟಿ ನಿಮ್ಮ ಬೆನ್ನು ಚಪ್ಪರಿಸುವಹಾಗೆ ಕೆಲಸಮಾಡಿರಿ. ಅವರು ಯಾವತ್ತು ದೌಲತ್ತಿನಿಂದ ಸಹಿತವಾಗಿ ನಮ್ಮನು ನಿಮ್ಮ ಉದಿಯಲ್ಲಿ ಹಾಕಿರುವರು. ಇವನ್ನು ಮರೆ ಯದೆ ನೀವು ಯಶಸ್ಸನ್ನು ಇಮೇರೆಗೆ ಭಾವುಸಾಹೇಬನು ಸೆರಗೊಡ್ಡಿ ಬೇಡಿಕೊಳ್ಳಲು, ಸರದಾರರು ಆತ ನನ್ನು ಕುರಿತು... (ಭಾವೂಸಾಹೇಬ, ಇಂದಿನ ಕಾಳಗದಲ್ಲಿ ನಾವು ಸರ್ವಥಾ ಜೀವದ ಹಂಗು ಇಡುವದಿಲ್ಲ. ಗುರಾಣಿಯನ್ನು ಯಾರು ಹೇಳಬೇಕು? ಛತ್ರಪತಿಮಹಾರಾಜರ ಪುಣ್ಯದಿಂದ ಆತನನ್ನ ಮಣ್ಣುಗೂಡಿಸಿ ಬಿಡುವವು. ತಾವು ಚಿಂತಿಸಬಾರದು,” ಎಂದು ಹೇಳಿ, ಮುಜುರೆಮಾಡಿ ತಮ್ಮ ತಮ್ಮ ಸ್ಥಳಗಳಿಗೆ ಹೋಗಿ ನಿಂತುಕೊಂಡರು. ಅಷ್ಟರಲ್ಲಿ ಅಂಬಾರಿಹಾಕಿ ಅಲಂಕರಿಸಿ ಸಿದ್ಧ ಮಾಡಿದ್ದ ಹತಆನೆಗಳನ್ನು ಮಾವುತರು ಭಾವು ಸಾಹೇಬನ ಬಳಿಯಲ್ಲಿ ತಂದು ನಿಲ್ಲಿಸಿದರು. ಪೂರ್ವದಲ್ಲಿ ಇರಾಣದ ಬಾದಶಹನು ಪೇಳ್ವೆಯವರಿಗೆ ಕಾಣಿಕೆಯಾಗಿ ಕೊಟ್ಟಿದ್ದ ಬಿಳಿ ಆನೆಯ ಅದರೊಳಗೆ ಇತ್ತು. ಅದರ ಹೆಸರು ಗಜರಾಜನು, ಅದ ರಮೇಲೆ ಜರಿತಕಾನಿಶಾನೆ' ನಲ್ಲಿ ನಿಲ್ಲಿಸಿದ ಗು. ಶ್ಯಾಮಸುಂದರಬಕ ಎಂಬ ಹೆಸರಿನ ಆನೆಯ ಅಂಬಾರಿಯಲ್ಲಿ ಸ್ವತ: ಭಾವುಸಾಹೇಬನು ಕುಳಿತುಕೊಂಡನು, ಅದರ ಖನಾಸನೆಯಲ್ಲಿ ಖಾಸಗಿ ವೈರಾತಿಯ ಹುಜುರೆಗಳು ನಿಂತುಕೊಂಡರು. ಅದರ ಅಂಬಾರಿಯ ನಾಲ್ಲೂ ಕಂಬಗಳಿಗೆ ರತ್ನಖಚಿತಗಳಾದ ನಾಲ್ಕು ಚಪ್ಪಕೊಡಲೆಗಳನ್ನು ಕಟ್ಟಿದ್ದರು. ಇವು ಭಾವುಸಾಹೇಬನು ಪರಶುರಾಮಾವತಾರ ಎಂದು ಜನರು ತಿಳಿಯುತ್ತಿದ್ದದ್ದರ ಕು ರು ಹು ಗಳಾ ಗಿ ದ್ದ ವು. ಜಮದಗ್ನಿ ಪುತ್ರನಾದ ಆ ಪುರಾಣಪ್ರಸಿದ ಪರಶುರಾಮನು ಈ ಚಪ್ಪಕೊಡಲಿಯಿಂಗಿ ಇಪ್ಪತೊಂದು ಸಾರೆ ಕ್ಷತ್ರಿಯರನ್ನು ನಾಶಗೊಳಿಸಿದ್ದನು. ಆ ಶ್ಯಾಮಸುಂದರ ಗಜವು ಕಾಡಿಗೆಯ ಗುಡ್ಡದಂತೆ ಕಾಗೆ ಸುಣುಗುಟ್ಟುತ್ತಿತ್ತು. ಇನ್ನು ಮೂರನೆಯ ಆನೆಯು ಗಜಾ ನನ ಭಕ್ತನು, ಅದರಮೇಲಿನ ಅಂಬಾರಿಯಲ್ಲಿ ವಿಶ್ಯಾಸರಾಯನು ವಿರಾಜಮಾನನಾಗಿ ಧನು? ಆತನ ಖವಾಸಖಾನೆಯಲ್ಲಿ ಚವರಿಬಾರದಾರರೂ, ಮಾನಕರಿಗಳೂ ಕುಳಿತು ಕೊಂಡರು. ಬಿಲ್ಲು-ಬಾಣಗಳು, ಬಂದೂಕು, ಖಡ್ಯ ಮೊದಲಾದ ಆಯುಧಗಳು ಆತನ ಬಳಿಯಲ್ಲಿ ದ್ದವು. ಈ ಮೂರು ಆನೆಗಳ ಹಿಂದಿನಿಂದ ಫಗಜ ಮೊದಲಾದ ಮತ್ತೆ ಮೂರು ಅಂಬಾರೆಯ ಆನೆಗಳು ಸಾಗಿದ್ದವು. ಅವುಗಳಮೇಲೆ ಪಾರ್ವತೀಬಾಯಿ, ಲಕ್ಷ್ಮೀ ಬಾಯಿ, ನಾನಾಫಡಣವೀಸನ ತಾಯಿ:ಹೆಂಡತಿ ಮೊದಲಾದ ಹೆಂಗಸರು ಕುಳಿತುಕೊಂಡಿ ದ್ದರು. ಹೆಂಗಸರನ್ನು ರಣಭೂಮಿಗೆ ಕರಕೊಂಡು ಹೋಗಬಾರದೆಂದು ಭಾವುಸಾಹೇ ಬನು ಮಾಡಿದ್ದನು; ಆದರೆ ಸೈನ್ಯವು ಹೊರಡುವಾಗ ಅವರು ಬಹಳ ಆಕ್ರೋಶಮಾಡಿದ್ದ bದ ಅವರನ್ನು ಸಂಗಡ ಕರಕೊಂಡು ಹೋಗಬೇಕಾಯಿತು. ಪಾರ್ವತೀಬಾಯಿಯ