೯೫ ಸt 1ಮಗಮನ. ಲಕ್ಷ್ಮೀಬಾಯಿಯ ಪುಷವೇಷವನ್ನು ಧರಿಸಿದ್ದರು. ಅವರ ನಿವಾಸಖಾನೆಯಲ್ಲಿ ಢ ವಯಸ್ಸಿನ ದಾಸಿಯರೂ, ಬೇರೆ ಆಶ್ರಿತಯರೂ ಕುಳಿತುಕೊಂಡಿದ್ದರು. ಉಳಿದ ಆನೆಗಳಲ್ಲಿ ನಾನಾಘಡಣವೀಸ ಹರಿಪತಫಡಕೆ, ಜಾಮದಾರ ಮೊದಲಾದ ಮಾನಕ ಗಳು ಕುಳಿತಿದ್ದರು. ಅವರೆಲ್ಲರ ಶಸ್ತ್ರಧಾರಿಗಳಾಗಿದ್ದರು. ಈ ಎಲ್ಲ ಆನೆಗಳು ಬಹು ಬೆಲೆಯುಳ್ಳ ವಸ್ತ್ರಾಭರಣಗಳಿಂದ ಅಲಂಕೃತವಾಗಿದ್ದವು. ಅವುಗಳಲ್ಲಿ ಶ್ರೀಮಂತರು ಕುಳಿತ ಆನೆಗಳ ಐಶ್ವರ್ಯವನ್ನಂತು ವರ್ಣಿಸe: Cಸಾಧ್ಯವೇ ಸರಿ. ಜರದ ದೂಲ ಗಳು ಆನೆಗಳ ಕಾಲತನಕ ಛಳಿಬಿದ್ದಿದ್ದು, ಅವುಗಳ ಕೊರಳೊಳಗಿನ ಬೆಳ್ಳಿ-ಬಂಗಾರದ ಗಂಟೆಗಳ ಸರಗಳಿಂದ ಅವು ಮನೋಹರವಾಗಿ ಒಪ್ಪುತ್ತಿದ್ದವು, ಆನೆಗಳ ಆಲ' ದಲ್ಲಿ ಬೆಳ್ಳಿ-ಬಂಗಾರದ ಕಡಗ~ಸರವಳಿಗಳು ಒಮ್ಮತಿದ್ದವು. ಅಂಬಾರಿಗಳು ಬೆಳ್ಳಿ ಬಂಗಾ ರದ ತಗಡುಗಳಿಂದ ಮುಚ್ಚುಹಾಕಿದ್ದು, ನಡನಡುವೆ ಕಲಾಕುಸರಿನಲ್ಲಿ ರತ್ನಗಳನ್ನು ಕೂಡಿಸಿ, ಅಲ್ಲಿ ಮುತ್ತಿನ ಝಾಲರಗಳನ್ನೂ, ಗೊಂಚಲಗಳನ್ನೂ ಇಳಿಬಿಟ್ಟಿದ್ದರು ಮಾವುತರು ವಸ್ತ್ರಾಲಂಕಾರವಿಭೂಷಿತರಾಗಿ, ಶಸ್ತ್ರಾಸ್ತ್ರಗಳಿಂದ ಒಪ್ಪ, ಎರಡೂ ಕೈ ಗಳಲ್ಲಿ ಎರಡು ಅಂಕುಶಗಳನ್ನು ಹಿಡಿದು ಆನೆಗಳ ಕಿವಿಗಳಿಗೆ ಇರಿಯುತ್ತಿದ್ದರು. ಹೀಗೆ ಮರಾಟರ ದಂಡು ಪಾನಿಪತದ ಛಾವಣಿಯನ್ನು ಬಿಟ್ಟು ಹೊರಟು ಕಂದಕ ವನ್ನು ದಾಟಿಹೋದಾಗ, ಇನ್ನೂ ಎರಡು ಮೂರು ಗಳಿಗೆ ರಾತ್ರಿಯಿತ್ತು. ಆಗ ದಕ್ಷಿಣದಿಕ್ಕಿನಲ್ಲಿ ಬಹು ಉದ್ದವಾದ ಚಂಡಿಕೆಯು ಧೂಮಕೇತುವು ಮೂಡಿತ್ತು. ಈ ಆನಿ ಸೂಚಕ ನಕ್ಷತ್ರವು ಈಗ ಮರುತಿಂಗಳಿನಿಂದ ಬೆಳಗುಮುಂಜಾನೆ ಮೂಡುತ್ತಲಿತ್ತು, ಅದರಗತಿಯು ದಕ್ಷಿಣದಿಂದ ಉತ್ತರಕಡೆಗೆ ಇತ್ತು. ಆಗ ಮರಾಟರ ಸೈನ್ಯವು ಮುಂದಕ್ಕೆ ಸಾಗಿಹೋಗಿ ಸಾಲುಹಿಡಿದು ದುರಾಣಿಯ ಸೈನ್ಯಕ್ಕೆ ಎದುರಾಗಿ ನಿಂತಳಿಕ, ವುನಃ ಯಾವತ್ತು ಸರದಾರರು ಭಾವುಸಾಹೇಬನ ಅಂಬಾರಿಯ ಬಳಿಯಲ್ಲಿ ಬಂದು, ಆತನಿಗೆ ಮತ್ತೆ ಮುಜುರಮಾಡಿದರು. ಶ್ರೀಮಂತರ ಆನೆಗಳು ಸೈನ್ಯದ ಮಧ್ಯದಲ್ಲಿ ನಿಂತುಕೊಂಡಿ ದ್ದವು. ಅಲ್ಲಿಂದ ಭಾವುಸಾಹೇಬನು ಸರದಾರರ ಮುಜರೆಗಳನ್ನು ಸ್ವೀಕರಿಸಿ, ನಾಲ್ಕೂ ಕಡೆಗೆ ತನ್ನ ಸೈನ್ಯವನ್ನು ದೃಷ್ಟಿ ಹರಿಯುವವರೆಗೆ ನೋಡಿದನು; ಆದರೆ ಅದರ ಅಂತವು ಹತ್ತಲಿಲ್ಲ. ಎದುರಿಗೆ ತನ್ನ ದೃಷ್ಟಿಗೆ ಹರಿಯದಂತೆ ಅಮರ್ಯಾದಿತವಾಗಿ ನಿಂತುಕೊಂಡಿ ರಬಹುದಾದ ಶತ್ರುಸೈನ್ಯವನ್ನೂ ಆತನು ಮನಸ್ಸಿನಲ್ಲಿ ತಂದನು. ಆಗ ಕ್ಷಣಮಾತ್ರ ಆತನ ಚಿತ್ತವೃತ್ತಿಯು ಆಶ್ಚರ್ಯದಿಂದ ತಟಸ್ತವಾಯಿತು. ಈ ಎರಡೂ ಸೈನ್ಯಗಳನ್ನು ನೋಡಿ ಆತನಿಗೆ, ಇದೇ ಸ್ಥಳದಲ್ಲಿ ಒಂದಕ್ಕೆ ನಿಂತುಕೊಂಡಿದ್ದ ಕೌರವ-ಪಾಂಡವರ ಪ್ರ. ಚಂಡ ಸೈನ್ಯದ ಸ್ಮರಣವಾಯಿತು. ಉಭಯದಳದ ಸರದಾರರನ್ನೂ ಆತನ ಮನಸ್ಸಿನಲ್ಲಿ ತರಲು, ಧರ್ಮರಾಜ, ಭೀಮ, ಅರ್ಜುನ, ನಕುಲ, ಸಹದೇವ, ಅಭಿಮನ್ಯು, ಸಾತ್ಯಕಿ, ಘಟೋತ್ಕಜ-ಹಾಗು ಆತನ ಮಕ್ಕಳು, ದ್ರುಪದರಾಜ, ವಿರಾಟರಾಜ, ದೃಷ್ಟದ್ಯುಮ್ಮ, ಕಾಶೀರಾಜ, ದೃಷ್ಟಕೇತು, ಕುಂತಿಭೋಜ, ಶೈಬ್ಯ, ಯುಧಾಮನ್ಯು, ದುರ್ಯೊಧನ, ದುಶ್ಯಾಸನ, ದುರ್ಧಷ್ಯ್ರ, ದುರ್ಮುಖ, ಜಯದ್ರಡೆ, ಶಲ್ಯ, ಕರ್ಣ, ವಿಕರ್ಣ, ಅಲಂಬುಷ,
ಪುಟ:ಕುರುಕ್ಷೇತ್ರ ಗ್ರಂಥ.djvu/೧೦೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.