ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುರುಕ್ಷೇತ್ರ ! ಮಾತು ಅವರಿಗೆ ತಿಳಿಯುವಹಾಗಿಲ್ಲ, ಅವರಮಾತು ಬೈರಾಗಿಣಿಗೆ ತಿಳಿಯುವಹಾಗಿ ದಿಲ್ಲ; ಆದ್ದರಿಂದ ಅವರು ಬೈರಾಗಿಣಿಯ ಮಾತು ಕಿವಿಯಮೇಲೆ ಹಾಕಿಕೊಳ್ಳದೆ, ಆಕೆ ಯನ್ನು ಮಾತಾಡಿಸುವಗೊಡವಿಗೆ ಹೋಗದೆ, ಆಕೆಯ ರಟ್ಟಿಯ ಹಿಡಿದು ಎಳೆಯುತ್ತ, ಸುಮ್ಮನೆ ಪಾಳಯದಕಡೆಗೆ ನಡೆದರು, ಮೂಲತಃ ಬೈರಾಗಿಣಿಯು ಒಳ್ಳೇ ದಿಟ್ಕಳಿದ್ದಳು. ಹಾಗಿಲ್ಲದಿದ್ದರೆ ಒಬ್ಬಳೇ ದಂಡಿನ ಪಾಳಯದಕಡೆಗೆ ಸಾಗಿಹೋಗುವ ಸಾಹಸ ಮಾಡಬಹುದೇ ? ಆದರೆ ಆಕೆಯ ಲಾಗತ ಆಕೆಯು ಮುಸಲಮಾನ ಸಿಪಾಯಿಗಳ ಕೈಗೆ ಹತ್ತಿದಳು, ತಮ್ಮವರ ಪಾಳಯ ಸನಿ ಯಕ್ಕೆ ಬಂತೆಂಬ ತಪ್ಪು ತಿಳುವಳಿಕೆಯಿಂದ ಆಕೆಯ ಘಾತವಾಯಿತು. ಯಮದೂತರಂತೆ ಇದ್ದ ಯವನರ ಜಗ್ಗಾಟದಲ್ಲಿ ಆ ಕೋಮಲಾಂಗಿಯು ಬಹಳವಾಗಿ ಗಾಸಿಯಾದಳು. ಆ ಬಲಿಷ್ಠ ಸಿಪಾಯಿಗಳ ಉಗ್ರಸ್ವರೂಪ, ಅಂಜಿಕೆ ಬರುವ ಅವನ ಒರಟತನ, ಮೂಗು ಮುಚ್ಚಿಕೊಳ್ಳುವಂಥ ಅವರ ಹೊಲಸುತನ ಇವುಗಳಿಂದ ಬೈರಾಗಿಣಿಯ ಜೀವವು ತೇಲು ಮೇಲಾಗಹತ್ತಿತ್ತು. ದಾಶೂನ್ಯರಾದ ಆ ಸಿಪಾಯಿಗಳು ಇದನ್ಯಾವದನ್ನೂ ಲಕ್ಷಿಸದೆ, ಒಂದೇ ಸವನೆ ಆಕೆಯನ್ನು ಎಳೆದುಕೊಂಡು ಪಾಳಯದ ಬಾಗಿಲಿಗೆ ಹೋದರು. ಅಲ್ಲಿ ದೊಡ್ಡ ದೊಡ್ಡ ಗಿಡಗಳನ್ನು ಕಡಿದು ಅವು ಗೋಡೆಯಹಾಗೆ ಛಾವಣಿಯು ಸುತ್ತುಮುತ್ತು ಒಟ್ಟಿದ್ದರು. ಅವುಗಳ ಹರಿಗಳು ಹೊರವಯ್ಯಲಾಗಿ, ಬೇರುಗಳು ಒಳಮಳ್ಳಲಾಗುವ ಗೊಡೆಯನ್ನು ರಚಿಸಿದ್ದರು. ಆ ಗೊಡೆಯ ಒಳನುಗ್ಗಲಲ್ಲಿ ಎಲ್ಲ ತತೆಲ್ಲಿ ತಂಬುಗ. ಳನ್ನೂ, ಡೇರೆಗಳನ್ನೂ ನಿಲ್ಲಿಸಿದ್ದರು. ಕೆಂಪು, ಕಪ್ಪು, ಬಿಳಿದು ಮಾದಲಾದ ಹಲವು ಬಣ್ಣ ಗಳ ಆ ಡೇರೆ-ರಾವುಟಗಳು, ಗೋಡೆಗಳಿಗಿಂತ ಬಹಳ ಎತ್ತರವಾಗಿದ್ದವು. ಅವುಗಳ ಕಳಸ ಗಳಿಗೆ ಬಂಗಾರದ ಮುಲಾಮು ಮಾಡಿದ್ದರು. ಆ ಸಿಪಾಯಿಗಳು ಬೈರಾಗಿಣಿಯನ್ನು ಎಳ ಕೊಂಡು ಪಾಳಯದ ಬಾಗಿಲಿಗೆ ಹೋದರು. ಅಲ್ಲಿಯ ಕಾವಲುಗಾರರು ಗುರುತಿನವರಾ ದದ್ದರಿಂದ, ಒಳಗೆ ಹೋಗಲಿಕ್ಕೆ ಅವರಿಗೆ ತೊಂದರೆಯಾಗಲಿಲ್ಲ; ಆದರೆ ಅವರು ಅಜು ಮುಂದಕ್ಕೆ ಸಾಗಿಸಲು, ಕೆಲವು ಗುರುತಿಲ್ಲದ ಸಿಪಾಯಿಗಳು ಹೀಗೆ ಪಾಳಯದಲ್ಲಿ ಹೆಂಗಸನ್ನು ಎಳೆದೊಯುತ್ತಿರುವದನ್ನು ನೋಡಿ ಗದ್ದರಿಸಿ- ಯಾರವರು ? ಶಹಾನಅಪ್ಪಣೆಯ ಎಚ್ಚ ರವಿಲ್ಲವೆ ? ಈ ಹೆಂಗಸನ್ನು ಎತ್ತ ಎಳೆದೊಯುವಿರಿ ? ನಿಲ್ಲಿಂ, ಮುಂದಕ್ಕೆ ಹೆಜ್ಜೆಯಿಟ್ಟರೆ ಪರಿಣಾಮವಾಗಲಿಕ್ಕಿಲ್ಲ. ಇಂಥ ಮರೆಮಾಸಗಳು ಎಂದೂ ನಡೆಯಲಿಲ್ಲ.”ಎಂದು ನಿರ್ಬಂಧಿಸಿದರು. ಆ ಹೊಸ ಸಿಪಾಯಿಗಳಾದರೂ ಬೈರಾಗಿಣಿಗೆ ಮರುಳಾಗಿ ಹೀಗೆ ಮಾತಾ ಡುತ್ತಲಿದ್ದರು. ಆಗ ಅವರಿಗೂ ಖುದಾಯಾರ, ದಾವುದ ಇವರಿಗೂ ಜಗಳಹುಟ್ಟಿತು. ಅವರು ಒದರಿ ಒದರಿ ಮಾತಾಡುತ್ತ ಒಬ್ಬರಮೇಲೊಬ್ಬರು ಶಸ್ತ್ರ ಹಿರಿದು ದುಮುಕಹತ್ತಿ ದರು, ಬೈರಾಗಿಣಿಯನ್ನು ದಾವುದನು ತನ್ನ ಕಡೆಗೆ ಎಳೆಯಹತ್ತಿದನು; ಖುದಾಯಾರನು ತನ್ನ ಕಡೆಗೆ ಎಳೆಯಹತ್ತಿದನು. ಬೇರೆ ಸಿಪಾಯಿಗಳಲ್ಲಿ ಕೆಲವರು ಆಕೆಯನ್ನು ತಮ್ಮ ಕಡೆಗೆ ಎಳೆಯಹತ್ತಿದರು. ಹೀಗೆ ಗೊಂದಲವೆದ್ದು ಹೊಡೆದಾಟಕ್ಕೆ ಆರಂಭವಾಯಿತು. ಇನ್ನು ಸ್ವಲ್ಪ ತಡವಾಗಿದ್ದರೆ ಕೆಲವು ಹೆಣಗಳು ಬಿದ್ದು ರಕ್ತವು ಹರಿಯಬಹುದಾಗಿತ್ತು. ಅಷ್ಟರಲ್ಲಿ