ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೮ ಕುರುಕ್ಷೇತ್ರ! ಕಾದಿದನು. •x ವಿಖ್ಯಾಸರಾಯನ ಹೆಣವನ್ನು ಅಂಬಾರಿಯಿಂದ ಇಳಿಸಿ ಬಾದಶಹಸು ನೋಡಿದನು. ಆಗ ಆತನ ಸೌಂದರ್ಯದಿಂದ ಪ್ರತಿಒಬ್ಬನಿಗೆ ಕೌತುಕವಾಯಿತು. ಹೆಣವು ಕುರೂಪವಾಗಿರಣಿ ನಿದ್ದೆ ಹತ್ತಿದ ಮನುಷ್ಯನಂತೆ ತೋರುತ್ತಿತ್ತು. ಆತನ ಹೆಗ ಲಿಗೆ ಖಡದ, ಹಾಗು ಕಣ್ಣಿನ ಮೇಲುವಗ್ಲು ಬಾಣವ ಸಣ್ಣ ಗಾಯಗಳಾಗಿ ದ್ದವು. XXX ಸದಾಶಿವರಾವಭಾವುವು ಚಿಕ್ಕಂದಿನಿಂದ ರಾಜ್ಯವ್ಯವಸ್ಥೆಯ ಶಿಕ್ಷಣವನ್ನು ರಾಮಚಂದ್ರಬಾಬಾಣವಿ ಎಂಬದನಿಂದ ಪದೆ ದನು. ಬೆಳಗಿನಿಂದ ಮಧ್ಯರಾತ್ರಿಯ ವರೆಗೆ ಆತನು ಸರಕಾರಿಯ ಕೆಲಸವಾದುದನ್ನು, ತಾರತಮ್ಯ, ಅನುಭವ, ಸಾಮರ್ಥ್ಯ ಈ ಗುಣಗಳಿಂದ ಭಾವುವು ಜನರನ್ನು ತಮನಾಗಿ ಮಾಡಿಕೊಂಡಿದ್ದನು. ಆತನ ಸಾಮರ್ಥ್ಯದಲ್ಲಿಯೂ, ಚಾಣತನದಲ್ಲಿಯ ಜನರ ನಂಬಿಗೆಯಿತು. ದಕ್ಷಿಣದೊಳಗಿನ ಎಷ್ಟೊ ಮಹತ್ವದ ಕೆಲಸಗಳು ಆತನಿಂದ ಕೊನೆಗಂಡಿದ್ದವು. XX• ಈ ಪಾನಿಪತದ ಯುದ್ಧದ ಪೂರ್ವದಲ್ಲಿ ಭಾವೂಸಾಹೇಬನು ಯಾವಾಗಲೂ ಒಳ್ಳೆಯ ತಿಳುವಳಿಕೆಯವ ನಾಗಿಯೂ, ಹೆಜ್ಜೆ ಹೆಜ್ಜೆಗೆ ಕಾರ್ಯ ದಕ್ಷನಾಗಿಯೂ ಇದ್ದದ್ದು ಕಂಡುಬರುತ್ತಿತ್ತು. --qw, effe-~- ೧೮ನೆಯಪ್ರಕರಣ-ಕೂರತನದಪರಮಾವಧಿಯು! ->>* ** ~~- ಮರಾಟರ ಪರಾಜಯವಾದನಂತರ ಭಯಭೀತರಾಗಿ ಓಡಿಹೋದ ಕೆಲವರು ಕಾನಿಪ ತದೊಳಗಿನ ತಮ್ಮ ಛಾವಣಿಯನ್ನು ಪುನಃ ಹೊಕ್ಕರು. ಹಾಗೆ ಮಾಡದೆ ಅವರು ದಕ್ಷಿಣದ ಹಾದಿಯನ್ನು ಹಿಡಿದು ಹೋಗಿದ್ದರೆ, ಅವರಲ್ಲಿ ಕೆಲವರಾದರೂ ಜೀವದಿಂದ ಉಳಿಯಬಹು Cಗಿತ್ತು; ಆದರೆ ಹಾಗೆ ಮಾಡದೆ ಅವರು ಛಾವಣಿಯ ಹೊಕ್ಕದ್ದರಿಂದ ತೋಳಗಳ ಹಿಂಡಿಗೆ ಅನಾಯಾಸವಾಗಿಕುರಿಗಳನ್ನು ದಡ್ಡಿಯಲ್ಲಿ ತರುಬಿ ಇಟ್ಟಂತಾಯಿತು! ದುರಾಣಿಗಳು ಓಡುವ ಮರಾಟರನ್ನು ಬೆನ್ನಟ್ಟಿ ಹೋಗಿ ಛಾವಣಿಯನ್ನು ಮುತ್ತಿದರು. ಕಾದಿ ದಣಿದು ಹೆಣಬಾ ದದ ರಿಂದ ಆಗ ರಾತ್ರಿ ಅವರು ಮರಾಟರಗೊಡವಿಗೆ ಹೋಗಲಿಲ್ಲ, ಬೆಳತನಕ ಸುಮ್ಮನೆ ಬಿಟ್ಟರು. ಒಳಗಿನ ಮಾಟರು ಬೆದರಿ ಹೌಹಾರಿ ಹೋಗಿದ್ದರು. ಹೇಗಾದರೂ ರಾ ತ್ರಿಯು ಕಳೆದುಹೊಗಿ ಬೆಳಗಾಯಿತು. ಸೂರ್ಯೋದಯವಗುತ್ತಿರಲು, ಶತ್ರುಗಳು ಒಳಗಿನವರನ್ನು ಸೆರೆಹಿಡಿದರು. ಗುರಾಣಿಗಳಿಗೆ ಲಕ್ಷಾವಧಿರೂಪಾಯಿಗಳ ಸುಲಿಗೆಯು ಸಿಕ್ಕಿತು. ಶಸ್ತ್ರಗಳು, ವಸ್ತ್ರಗಳು, ವಾದ್ಯಗಳು, ಕುದುರೆಗಳು, ಆನೆಗಳು, ಅಮೌಲ್ಯ ವಾಹ ಅಲಂಕಾರಗಳು, ಬೆಳ್ಳಿ-ಬಂಗಾರದ ಪಾತ್ರೆಗಳು ಮೊದಲಾದವುಗಳನ್ನು ನೆಗಡಿ, ದುರಣಿಯ ' ದಂಡಾಳುಗಳು ಕುಬೇರರಾದರು. ಸೆರೆಸಿಕ್ಕವರಲ್ಲಿ ಸಾವಿರಾರುಜನರು ಸಿಪಾಯಿಗಳಿದ್ದರು. ಜಾರುಬುಣಗಿನವರ ಸಂಖ್ಯೆಯು ವಿಶೇಷವಾಗಿತ್ತು. ತನಗೆ ಬೇಕಂದ ದಾಸ-ದಾಸಿಯರನ್ನೂ, ಹೆಂಗಸರನ್ನೂ ತನ್ನೊಳಗೆ ಹಂಚಿಕೊಂಡು, ಉಳಿದ ಮರನ್ನು ದನಗಳಡಾವಣಿಯಂತೆ ಸಾಲಾಗಿ ಡಾವಣಿಹೊಡೆದು ನಿಲ್ಲಿಸಿದರು. ಡಾವಣಿಯ ಸಾಲು ಗ ಈ ಒಂದರಹಿಂದೊಂದರಂತೆ ನಿಂತಿದ್ದವು. ಆ ಬಳಿಕ ಕೇಳುವದೇನು?