ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ಕುರುಕ್ಷೇತ್ರ ! ಬಳಿಕ ನಾನಾಸಾಹೇಬನು ಕಣ್ಣೀರು ಸುರಿಸುತ್ತ ಪುಣೆಯಕಡೆಗೆ ಸಾಗಿದನು. ಗೋದಾವರಿಯ ತೀರದಲ್ಲಿ ಆತನ ಸೈನ್ಯದ ಬೀಡುಬಿಟ್ಟಿತು. ಅಲ್ಲಿ ವಿಠಲರಾವವಿಂಚೂ ರಕರನು ಮೊದಲು ಶ್ರೀಮಂತರನ್ನು ಕಂಡನು. ಆತನು ಶ್ರೀಮಂತರಿಗೆ ಸಾಷ್ಟಾಂಗ ವಾಗಿ ವಂದಿಸಿ ಕಣ್ಣೀರು ಸುರಿಸುತ್ತ ಕೈಜೋಡಿಸಿ ಪ್ರಾರ್ಥಿಸಿದನೇನಂದರೆ ನಮ್ಮ ದುರ್ದೈವದಿಂದ ಪಾನಿಪತದಲ್ಲಾದ ನಮ್ಮ ನಾಶದ ವರ್ತಮಾನವು ಸನ್ನಿಧಿಗೆ ಶ್ರುತವಾಗಿ ರಬಹುದು. ನಾನು ಮಹಾಪಾತಕಿಯಾದದ್ದರಿಂದಲೇ ಹಲವು ದುಃಖಗಳನ್ನೂ, ಸಂಕಟ ಗಳನೂ ಅನುಭವಿಸಿ ಬದುಕಿ ಉಳಿದಿರುತ್ತೇನೆ! ಈಶ್ವರೇಚೆಗೆ ಉಪಾಯವಿಲ್ಲ!” ಹೀಗೆ ಮಾತಾಡುತ್ತಿರುವಾಗ ಶ್ರೀಮಂತರಿಗೆ ಬಹಳ ವ್ಯಸನವಾಯಿತು. ಪುಣೆಗೆ ಹೋಗುವ ವರೆಗೆ ವಿಂಚ್ರಕರನು ಶ್ರೀಮಂತರ ಸವಾರಿಯ ಸಂಗಡಲೇ ಇದ್ದನು. ಪ್ರತಿದಿನ ಮಧ್ಯಾಹ್ನದ-ಸಂಜೆಯ ಊಟದ ಹೊತ್ತಿನಲ್ಲಿ ಕುರುಕ್ಷೇತ್ರದ ಸಂಗ್ರಾಮದ ಸುದ್ದಿಯು! ಯಾವ ಸರದಾರನು ಹ್ಯಾಗೆ ನಡೆದುಕೊಂಡನು, ಯಾವನು ಹಾಗೆ ಪರಾಕ್ರಮತೋರಿಸಿ ದನು, ಯುದ್ದದಲ್ಲಿ ಯಾವನು ಹಿಂದಿರುಗಿದನು ಮೊದಲಾದ ಸುದ್ದಿಗಳನ್ನು ನಾನಾಸಾ ಹೇಬನು ಯಾವಾಗಲೂ ವಿಂಚ್ರಕರನನ್ನು ಕೇಳುತ್ತಲಿದ್ದನು. ಅದಕ್ಕೆ ವಿಂಚೂರಕ ರನು ಸರಿಯಾಗಿ ಉತ್ತರಕೊಡುತ್ತಿದ್ದನು. ಹೀಗೆ ಹಾದಿಯಲ್ಲಿ ನಿತ್ಯಕಮವು ನಡೆ ದಿತ್ತು. ಒಮ್ಮೆ ಶ್ರೀಮಂತರು ವಿಠಲರಾಯನನ್ನು ಕುರಿತು- “ರಾವ, ಮಲ್ಲಾರ ರಾಮಹೋಳಕರರ ವಿಷಯವಾಗಿ ನಾನು ಎಷ್ಟೋ ವಿರುದ್ಧ ಸಂಗತಿಗಳನ್ನು ಕೇಳಿದ್ದೇನೆ; ಆದರೆ ಸತ್ಯವಿದ್ದದ್ದನ್ನು ಪ್ರಮಾಣಪೂರ್ವಕವಾಗಿ ಹೇಳಿರಿ” ಎಂದು ಕೇಳಿದರು. ಅದಕ್ಕೆ ವಿಂಚರಕರನು ಶ್ರೀಮಂತರ ಚರಣಗಳಮೇಲೆ ಕೈಯಿಟ್ಟು ಮಲ್ಲಾರರಾಯರ ವಿಷಯವಾಗಿ ಶ್ರೀಮಂತರಿಗೆ ಬೇಕಾದವರು ಬೇಕಾದದ್ದು ಹೇಳಿರಲಿ; ಆದರೆ ಮಲ್ಲಾರರಾ ಯರು ಯಾವ ಬಗೆಯ ಅಪರಾಧಕ್ಕೂ ಪಾತ್ರರಿರುವದಿಲ್ಲ. ಅವರು ಯುದ್ಧ ಪ್ರಸಂಗ ದಲ್ಲಿ ಬೇಸರವನ್ನಾಗಲಿ, ಮರೆಮೋಸವನ್ನಾಗಲಿ ಮಾಡಿರುವದಿಲ್ಲ. ಯಾವ ಬಗೆಯಿಂ ದಲೂ ಸರಕಾರದ ಅಹಿತವನ್ನು ಚಿಂತಿಸಿರುವದಿಲ್ಲ. ಅವರು ಭಾವುಸಾಹೇಬರಿಗೆ ಆಗಾಗ್ಗೆ ಹಿತದ ಮಾತುಗಳನ್ನು ಸೂಚಿಸಬೇಕು, ದುರ್ದೈವದಿಂದ ಅವನ್ನು ಭಾವುಸಾಹೇಬರು ನಿರಾಕರಿಸಬೇಕು, ಈ ಕ್ರಮವು ನಡೆದಿತ್ತು. ಭಾವುಸಾಹೇಬರು ಪುಣೆಯಲ್ಲಿ ಶ್ರೀಮಂ ತರ ಬಳಿಯಲ್ಲಿದ್ದು ರಾಜ್ಯಕಾರಭಾರವನ್ನು ಚನ್ನಾಗಿ ಮಾಡಿದರು. ಈ ಕುರುಕ್ಷೇತ್ರದ ಯುದ ಪ್ರಸಂಗದ ಹೊರತು ಉಳಿದ ಯುದ್ದ ಪ್ರಸಂಗಗಳಲ್ಲೆಲ್ಲ ಅವರಲ್ಲಿ ಯಾವಾಗಲೂ ಒಳ್ಳೆಯ ತಿಳುವಳಿಕೆಯೂ, ಕಾರ್ಯದಕ್ಷತೆಯೂ ಕಂಡುಬರುತ್ತಿದ್ದವು; ಆದರೆ ದುರ್ದೈವ ದಿಂದ ಈ ಪ್ರಸಂಗದಲ್ಲಿ ಮಾತ್ರ ಅವು ಭಾವುಸಾಹೇಬರಲ್ಲಿ ಕಂಡುಬರಲಿಲ್ಲ. ವಿಲಕ್ಷಣ ಗರ್ವವೂ, ಹಟಮಾರಿತನವೂ ಅವರನ್ನು ಮುಸುಕಿಬಿಟ್ಟಿದ್ದವು. ಅದನ್ನು ನೋಡಿ ಅನು ಚನಿಕರೂ, ಜಾಣರೂ ಆದವರು ಆಶ್ಚರ್ಯಪಡತೊಡಗಿದರು. ನಾನು ಎಷೋಸಾರ ಅವರಿಗೆ ಹಿತಕರವಾದ ಸೂಚನೆಗಳನ್ನು ಮಾಡಿದೆನು; ಆದರೆ ಈತನು ಹೋಳಕರನ ಮೇಲುಗಟ್ಟಬರುವನೆಂದು ತಿಳಿದುನನ ಸೂಚನೆಗಳನ್ನು ಅವರುನಿರಾಕರಿಸುತ್ತಿದ್ದರು, ಈಶ್ವ