ಲೋಕಸಕುಗರ! ($೬ ರೇಚ್ಛೆಯ ಮುಂದೆ ಯಾರ ಆಟವೂ ನಡೆಯದು. ಸರಕಾರ, ಒಟ್ಟಿನಮೇಲೆ ನನ್ನ ಅಭಿ ಪ್ರಾಯವೇನಂದರೆ, ಯಾವ ಮರಾಠಾ ಸರದಾರನೂ ತಪ್ಪುಗಾರನಿರುವದಿಲ್ಲ. ಹೀಗೆ ಕುರುಕ್ಷೇತ್ರದ ಅನರ್ಥಪ್ರಸಂಗದ ಸುದ್ದಿಗಳನ್ನು ಕುರಿತು ಮಾತಾಡುತ್ತ ನಾನಾಸಾಹೇಬನು ಪುಣೆಗೆ ಬಂದನು. ಪುತ್ರವಿಯೋಗ-ಬಂಧುವಿಯೋಗಗಳ ಮರವು ಆತನಿಗಾಗಲೊಲ್ಲದು. ದಿನದಿನಕ್ಕೆ ಆ ದುಃಖಭಾರವನ್ನು ಸಹಿಸುವಶಕ್ತಿಯೂ ಆತನಲ್ಲಿ ಉಳಿಯದಾಯಿತು. ಅತನ್ನು ಶನಿವಾರವಾಡೆಯಲ್ಲಿ ಇರದೆ ಶ್ರೀಪರ್ವತಿಯಗುಡ್ಡದಮೇಲೆ ಇರತೊಡಗಿದನು. ಶ್ರೀರಾಮಚಂದ್ರನು ವನವಾಸಕ್ಕೆ ಹೋದಾಗ ದಶರಥನು-ರಾಮಾ! ರಾಮಾ! ಎಂದು ದುಃಖಿಸುತ್ತ ಮರಣಹೊಂದಿದಂತೆ, ನಾನಾಸಾಹೇಬನು ಮುಂದೆ ಐದೇ ತಿಂಗಳಿಭಾವೂ! ಭಾವೂ! ವಿಶ್ವಾಸಾ! ವಿಶ್ವಾಸಾ! ಎಂದು ದುಃಖಿಸುತ್ತ, ಶಕೆ ೧೬೮೩ ವಿಷುನಾಮಸಂವತ್ಸರದ ಜೈಷ್ಣವದ್ಯ ೭ ಮಂಗಳವಾರದದಿವಸ ಪರ್ವತಿಯಮೇಲೆ ಕೈಲಾಸ ವಾಸಿಯಾದನು. ಈ ಕುರುಕ್ಷೇತ್ರದ ಸಂಗ್ರಾಮದ ವಾರ್ತೆಯಿಂದ ಪುಣೆಯೊಳಗಿನ ಯಾ ವತ' ಜನರು ಶೋಕಸಾಗರದಲ್ಲಿ ಮುಣುಗಿಹೋದರು. ಶ್ರೀಮಂತ ಬಾಳಾಜಿಬಾಜಿರಾವ ಉರ್ಘನಾನಾಸಾಹೇಬ ಪೇಶವೆಯ ಇಪ್ಪತ್ತು ವರ್ಷದ ಆಳಿಕೆಯಲ್ಲಿ ಮಹಾರಾಷ್ಟ್ರವು ಆ ನಂದಗಿರಿಯನ್ನೇರಿ ಮೆರೆಯುತ್ತಲಿತ್ತು; ಆದರೆ ಈ ಕುರುಕ್ಷೇತ್ರದ ದುಷ್ಟವಾರ್ತೆಯಿಂದ ಆ ಆನಂದಗಿರಿಯಮೇಲೆ ವಜ್ರಪ್ರಹಾರವಾಗಿ ಅದು ಚೂರುಚೂರಾಯಿತು! ಈ ಮಹಾ ಭಯಂಕರದ ಪ್ರಸಂಗದಿಂದ ದಕ್ಷಿಣದೊಳಗಿನ ಸುಮಾರು ಒಂದುವರೆಲಕ್ಷ ಸಧವೆಯರಾದ ಸ್ತ್ರೀಯರು ವಿಧವೆಯರಾದರು ! ಈ ಘೋರಪ್ರಸಂಗದಿಂದ ಒಬ್ಬಳಾದರೂ ವಿಧವೆಯಾಗದೆ `ದ ನಾಲ್ಕಾರುಗುಡಿಸಲುಗಳಿದ್ದ ಸೆಟ್ಟಹಳ್ಳಿಯನ್ನು ಸಹ ಮಹಾರಾಷ್ಟ್ರದಲ್ಲಿ ಕಾಣು 4. ಗಿದ್ದಿಲ್ಲ! ಯಾಕಂದರೆ, ಪ್ರತಿಒಂದು ಸಣ್ಣ ಪುಟ್ಟ ಹಳ್ಳಿಯಿಂದಲೂ ಯುದ್ದಕ್ಕೋಸ್ಕರ ಯಾವನ ದರೊಬ್ಬನು ಹೋಗಿಯೇ ಇದ್ದನು. ಅಂದಬಳಿಕ ದೊಡ್ಡ ದೊಡ್ಡ ಊರುಗಳಲ್ಲಿ ಹಾಹಾಕಾರವಾಗಿಸಬಹುದೆಂಬದನ್ನು ವಾಚಕರೇ ತರ್ಕಿಸಬೇಕು! “ಪಾನಿಪತದ ರಣಭೂಮಿಯಲ್ಲಿ ಸಾವಿರಾರುಖಂಡಗ ರಕ್ತವು ಸುರಿಯಿತು! ಸಂಸಾರವು ಒಳ್ಳೆಯ ಭರಕ್ಕೆ ಬಂದ ಎಷ್ಟೋ ಢಿಯರೂ, ಅದೇ ಸಂಸಾರಸುಖವನ್ನನುಭವಿಸಹತ್ತಿದ ಎಷ್ಟೋ ಮುಗೆಯರೂ, ಸಂಸಾರಸುಖವನ್ನು ಎದುರುನೋಡುತ್ತಿರುವ ಎಷ್ಟೋ ಬಾಲೆಯರೂ ಪತಿವಿಯೋಗಹೊಂದಿ ಶೋಕಸಾಗರದಲ್ಲಿ ಮುಣುಗಿದರು! ಎಷ್ಟೋ ಹುಡುಗರು ಪರದೇಶಿ ಗಳಾದರು ; ಎಷ್ಟೋ ಮುಪ್ಪಿನ ತಾಯಿ-ತಂದೆಗಳು ಮಕ್ಕಳ ಹೊಟ್ಟೆಬೇನೆಹಚಿಕೊ ಡರು! ಹೀಗೆ ಸಾವಿರಾರು ಕುಟುಂಬಗಳ ಘಾತವಾಗಿಹೋಯಿತು ! ಈ ದುಃಖಪ್ರಸ ಗವನ್ನು ವರ್ಣಿಸುವ ಸಾಮರ್ಥ್ಯವು ನಮ್ಮ ಲೇಖಣಿಯಲ್ಲಿರುವದಿಲ್ಲ ! ಅಲ್ಲಲ್ಲಿ ಅದು ಮುಗ್ಗರಿಸುತ್ತಿರುವದರಿಂದ, ಈ ಶೋಕಸಾಗರದ ಸಹವಾಸವನ್ನು ಇಲ್ಲಿಗೆ ಸಾಕುಮಾಡು ವೆವು! ಯಾವಾಚಕರೇ, ವಿಭಕಕನಾದ ಕಾಲನಿಗೆ ದಯವೆಲಿ ಯದು? ಆತನಿಗೆ ಹಸಿವೆ ಯಾದರೆ ತೀರಿತು, ಪೇಶೈಯರಿರಲಿ, ದುರಾಣಿಗಳಿರಲಿ, ಬೇರೆಮತ್ತೆ ಯಾರಾದರೂಇರಲಿ ಬೇಕಾ ಧವರನ್ನು ಬೇಕಾದಾಗ ಆತನು ಬಾಯಿಯಲ್ಲಿ ಹಾಕಿಕೊಳ್ಳುವನು! ಅದಕ್ಕೆ ಕಾರಣರಣ.
ಪುಟ:ಕುರುಕ್ಷೇತ್ರ ಗ್ರಂಥ.djvu/೧೩೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.