ಈ ಪುಟವನ್ನು ಪ್ರಕಟಿಸಲಾಗಿದೆ
೧೦

ಕುರುಕ್ಷೇತ್ರ!

ಕಿದರು” ಎಂಬ ಸುದ್ದಿಗಳು ವಕೀಲರ ಮುಖಾಂತರ ಪುಣೆಗೆ ಬರುತ್ತಿದ್ದವು. ಶ್ರಿಮಂತರ ಸವಾರಿಯು ಇಂದು ಕರ್ನಾಟಕದಲ್ಲಿದರೆ, ನಾಳೆ ಗುಜರಾಥದಕಡೆಗೆ ಹೊರಳುವದು; ಈವರ್ಷ ಮಾಳವವನ್ನು ಹೊಕ್ಕು ಅಲ್ಲಿಯಒಂದೋಒಸ್ಫೂ ಮಾಡಿದರೆ, ಮುಂದಿನವರ್ಷ ಬರಗಾಲದ ಕಡೆ ಸಾಗುವದು.ಪ್ರಿಯವಾಚಾಕರೇ. ಎಲ್ಲಿಯ ಪಣೆಯು, ಎಲ್ಲಿಯ ದಿಲ್ಲಿಯು, ಎಲ್ಲಿಯ ಗ್ವಾಲಹೇರವು, ಎಲ್ಲಿಯ ಬಂಗಾಲವು? ಅಹಹ! ಪಂಜಾವು ಸಮೀಪವೇ?ಮೈಸೂರು ಹತ್ತರವೇ ? ಕಾಸಿಯು ಬಾಗಿಲ ಮುಂದಿನದೇ? ಅದೂ ಇರಲಿ. ಈಗಿನಂತೆ ಆಗ ಉಗಿಬಂಡಿಗಳಿದ್ದಿಲ್ಲ -ಲೈನಹಾದಿಗದ್ದಿಲ್ಲ ಪೂಲುಗಳಿದಿಲ್ಲ-ಗುಡ್ಡ ಕೊರೆದು; ಮಾಡಿದ ಹಾದಿಗಳಿದ್ದಿಲ್ಲ. ಇಂಥ ಸ್ಮಿತಿಯಲ್ಲಿ ದಕ್ಷಿಣರ ರಥ ಥಡಿ ಗಂಗಥಡಿ, ವರ್ಗ. ಮಾಣದೇಶೀ, ಮಾದವಾನೀ ಜಾತಿಯ ಗಿಡ್ಡ ತರದ ಚಪಲ ಕುದುರೆಗಳು ಭಾಗೀರಥಿಯಲ್ಲಿ ಮೈ ತೊಳೆದವು; ಅಟಕದ ಕಾಬೂಲನದಿಯ ನೀರು ಕುಡಿದವು!! ಅಂದಬಳಿಕ ನಮ್ಮ ಮರಾಟರು ಧನ್ಯರಲ್ಲವೆ? ಅವರ ಪರಾಕ್ರಮ ಸಫಲವಾದದ್ದಲ್ಲವೆ? ಅವರ ಸಾಹಸವು ಸಾರ್ಥಕವಾಯಿತಲ್ಲವೆ? ಮರಾಟಾವೀರರು ದಕ್ಷಿಣದ ನಮ್ಮ ಆ ಗಿಡ್ಡ ಕುದುರೆಗಳನ್ನು ಹತ್ತಿಕೊಂಡು ದೇಶದೇಶಗಳಲ್ಲಿ ನಾಲ್ಕೂ ಕಡೆಗೆ ತಿರುಗಹತ್ತಿದರೆಂದರೆ, ಗುಜರಾಥದಭಾಯಿ ಗಳು, ಕರ್ನಾಟಕದ ಅಪ್ರನವರು, ಬಂಗಾಲದ ಬಾಬುಗಳು, ಮುಸಲಮಾನಸಿಪಾಯಿಗಳು, ಪರದೀಪಸ್ಥ ಟೊಪ್ಪಿಗೆಯವರು ಗದಗುಟ್ಟ ನಡಗುತ್ತಿದ್ದರು!

ನಾನಾಸಾಹೇಬ ಪೇಶವೆಗೆ ಅವನ ತಮ್ಮನಾದ ರಘುನಾಥರಾಯನೂ, ಅಕ್ಕನಮಗ ನಾದ ಸದಾಶಿವರಾವಭಾವವೂ ಸಹಾಯಕರಾಗಿದ್ದರು. ರಘುನಾಥರಾಯನು ಅನುಭವಿಕ ಸುಪ್ರಸಿದ್ದವೀರನು. ಸಿಂದೆ, ಹೋಳಕರ, ಗಾಯಕವಾದ, ಭೋಸಲೆಯೆಂಬವರು ಮಹಾ ರಾಷ್ಟ್ರಮಂಡಲದ ಪ್ರಸಿದ್ದ ಸರದಾರರಾಗಿ, ಒಂದೊಂದು ನಿಟ್ಟಿನ ವ್ಯವಸ್ಥೆಯನ್ನು ಒಬ್ಬೊಬ್ಬರು ಕೈಕೊಂಡಿದ್ದರು. ಸದ್ಯಕ್ಕೆ ಪೇಶೆ ಸರಕಾರದಲ್ಲಿ ತರುಣನಾದ ಸದಾಶಿ ವರಾವಭಾವುವಿನ ವರ್ಚಸ್ವವೇ ವಿಶೇಷವಾಗಿತ್ತೆಂದು ಹೇಳಬಹುದು.ಆತನು ಪ್ರಸಿದ್ದ ವೀರನಾದ ಚಿಮಣಾಜಿಅಪ್ಪಾನ ಮಗನು. ಈತನು ಸ್ವಲ್ಪ ದಿನಗಳ ಹಿಂದೆ ಉದಗಿರಿಯಲ್ಲಿ ನಿಜಾಮನನ್ನು ಪೂರ್ಣವಾಗಿ ಸೋಲಿಸಿದ್ದರಿಂದ, ಆತನ ವರ್ಚಸ್ಸಿಗೆ ವಿಶೇಷ ಕಳೆಯೇರಿ ದಂತಾಗಿತ್ತು; ಜನರಲ್ಲಿ ಆತನ ಸ್ತುತಿ- ಸ್ತೋತ್ರಗಳು ವಿಶೇಷವಾಗಿ ನಡೆದಿದ್ದವು; ಆದ್ದ ರಿಂದ, ಸದಾಶಿವರಾಯನಿಗೆ ಸ್ವರ್ಗವು ಮೂರೇ ಗೇಣು ಉಳಿದಿತ್ತೆಂದು ಹೇಳಬಹುದು. ಆತನನ್ನು ಗರ್ವವು ಬಾಧಿಸಹತ್ತಿತ್ತು. ತನಗೆ ಸುಯಾದವರು ಯಾರೂಇಲ್ಲವೆಂತಲೂ, ಹೆಸರು ಎತ್ತುವಂಥ ವೀರನು ತಾನು ಒಬ್ಬನೇ ಎಂತಲೂ, ತಾನು ಬೇಕಾದದ್ದನ್ನು ಮಾಡ ಬಲ್ಲವನೆಂತಲೂ 'ಆತನು ತಿಳಿದುಕೊಳ್ಳಹತ್ತಿದ್ದನು. ಆತನು ಯುರೊಪದ ಪದ್ಧತಿ ಯಂತೆ ಇಬ್ರಾಹಿಮಖಾನಗಾರದಿಯ ಕೈಯಿಂದ ಕೆಲವು ಕವಾಯತಿಯ ದಂಡನ್ನು ಸಿದ್ದ ಪಡಿಸಿಕೊಂಡಿದ್ದನು . ಇಬ್ರಾಹಿಮಖಾನನು ಪ್ರಸಿದ್ದ ಫ್ರೆಂಚಸರದಾರನಾದ ಬುಸಿಯ ಕೈಯಲ್ಲಿ ಕಲಿತವನಾಗಿದ್ದನು. ಹೀಗೆ ಸ್ವತ್ವದ ವಿಷಯವಾಗಿ ಹೆಮ್ಮೆಪಡುತ್ತಿದ್ದ ಸದಾ ಶಿವರಾಯನು ಪುಣೆಯಲ್ಟಿ ನಿಂತು ರಾಜಕಾರಭಾರ ನಡಿಸುತ್ತಿದ್ದನು. ರಾಘೋಬಾ