ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಪರೀತಕಲ್ಪನೆ. ೧೧ ಆದಾನು ಹೊರಗೆ ದಂಡೆತ್ತಿ ಹೋಗುತ್ತಿದ್ದನು. ಆ ರಣರೂರರಾಫೋಬನು ಉತ್ತ ಆಕೆ ದಂಡೆತ್ತಿ ಹೋಗಿ ಅಬದಾಲಿಯ ಮಗನ ಮೂರರಹನನ್ನು ಸೋಲಿಸಿ, ಆತ ನನ್ನು ಅಟಕಪಟ್ಟಣದ ಗಡಿದಾಟಿಸಿ ಅದೇ ಪುಣೆಗೆ ಬಂದಿದ್ದನು. " ಹೀಗೆ ಎಲ್ಲ ಕಡೆಯಿಂದ ತನಗೆ ಜಯಪ್ರಾಪ್ತಿಯಾಗುತ್ತ ಬಂದರಿಂದಲೂ, ತನ್ನ ಸೇನಾಬಲವು ಮಿತಿಮೀರಿ ಹೆಚ್ಚಿದ್ದರಿಂದಲೂ, ತನ್ನ ಯಶೋದುಂದುಭಿಯು ದಿಕ್ಕುದಿಕ್ಕಿಗೆ ಕಬ್ಬಿ, ಅದರ ಪ್ರತಿಧ್ವನಿಯು ಕಿವಿ ನುರಗುಟ್ಟುವಹಾಗೆ ತನಗೆ ಕೇಳಹತ್ತಿದರಿಂದಲೂ ಮನುಷ್ಯರಚಿತವಾದ ಪೇಸರಕಾರಕ್ಕೆ ಮನುಷ್ಯ ಸ್ವಭಾವಕ್ಕನುಸರಿಸಿ ಒಂದುಪ್ರಕಾರದ ಹೆಮ್ಮೆಯ ಬಂದಿತು. ಅದರಿಂದ ಆ ಸರಕಾರದ ಕಾರ್ಯದಕ್ಷತೆಯೂ, ದೂರದರ್ಶಿತವೂ, ವಿವೇಕಬುದ್ದಿಯೂ ಸಡಲಹದ ರೆ ಆಶ್ಚರ್ಯವೇನು? ಈ ಜಗತ್ತಿನಲ್ಲಿ ಇಂದಿನ ವರೆಗೆ ಯಾರಹೆಮ್ಮೆಯ ಮಜಲುಗಂಡಿಲ್ಲ. ಸೇರಿಗೆ ಸನ್ಮಾನರೆಂಬಂತೆ, ಒಬ್ಬರ ಹೆಮ್ಮೆ ಯನ್ನು ಮುರಿಯಲಿಕ್ಕೆ ಮತ್ತೊಬ್ಬರ ನಿರ್ಮಾಣವು ಆಗೇ ಆಗುವದು. ಅದರಂತೆ, ಮರಾಟರ ಹೆಮ್ಮೆಯನ್ನು ಮುರಿಯಲಿಕ್ಕೆ ಈಗ ಹಿಂದುಸ್ಥಾನದ ವಾಯವ್ಯಮೂಲೆಯಲ್ಲಿ ಒಬ್ಬರನು ಉತ್ಪನ್ನನಾಗಿದ್ದನು. ಅವನೇ ಅಹಮ್ಮದಶಹಾ ಅಬದಾಲಿಯು, ಅಬ ದಾಲಿಯು ಸಾಮಾನ್ಯಕೋಟಿಯೊಳಗಿನ ಮನುಷ್ಯನಿದ್ದಿಲ್ಲ; ಶಿವಾಜಿ ಮಹಾರಾಜ, ಮೊದಲನೇ ಬಾಜೀರ -ರಂತೆ ಹುಟ್ಟಾ ಬುದ್ದಿಶಾಲಿಯೂ, ದೂರದರ್ಶಿಯೂ ಆದ ಪುರುಷನಾಗಿದ್ದನು. ನಮ್ಮ ಕಡೆಯ ಮೊಗಲಸರದಾರರಂತೆ ಆತನು ವಿಷಯಾಸಕ ನಿದ್ದಿಲ್ಲ. ಮಂದಿಯಬೊಗಸೆಯಿಂದ ನೀರು ಕುಡಿಯುವದಂತು ಆತನಿಗೆ ಗೊತ್ತೇಇದ್ದಿಲ್ಲ. ಆತನ ಶೌರ್ಯ, ಚಟವಟಿಕೆ, ಶಿಸ್ತು, ದೂರದೃಷ್ಟಿ, ಧೈರ್ಯ, ದರ್ಪ ಈ ಗುಣಗಳು ಹೊಗಳತಕ್ಕವಾಗಿದ್ದವು. ಆತನು ಪ್ರಸಿದ್ಧ ನಾದಿರಶಹನ ಕೈಯಲ್ಲಿ ನುರಿತವನಾಗಿ ದನು, ಅಂದಬಳಿಕ ಕೇಳುವದೇನು? ಗುರುವಿನಂತೆ ಶಿಷ! ಅದಾಲಿಯು ಈ ಮೊದಲೆ ತನ್ನ ರಾಜ್ಯವಾದ ಅಫಗಾಣಿಸ್ತಾನದಿಂದ ಹೊರಟು ಹಿಂದುಸ್ಥಾನದಲ್ಲಿ ನುಗ್ಗಿ ಪಂಜಾಬ ಪ್ರಾಂತವನ್ನು ಕೈವಶಮಾಡಿಕೊಂಡು ಅದಕ್ಕೆ ತನ್ನ ಮಗನಾದ ತೈಮೂರಶಹನನ್ನು, ಸುಬೇದಾರನಾಗಿ ನಿಯಮಿಸಿದನು. ಮೇಲೆ ಹೇಳಿದಂತೆ ರಾಘೋಬಾದಾದಾನು ಆ ಮೂರಶಹನನ್ನು ಓಡಿಸಿ ಮಜಾಲವನ್ನು ಸ್ವಾಧೀನಪಡಿಸಿಕೊಂಡದ್ದರಿಂದ, ಅಲದಾ ಲಿಯು ಸಿಬ್ಬಾಗಿ ಈಗ ಮತ್ತೆ ಹಿಂದುಸ್ಥಾನದ ಮೇಲೆ ದಂಡೆತ್ತಿ ಬಂದಿದ್ದನು. ಅಬದಾಲಿಯ ಅಬಕ್ಕೆ ಶಿಂದೆ ಹೋಳಕರ ಮಾದಲಾದ ಉತ್ತರದಕಡೆಯ ಮರಾಟಾ ಸರದಾರರು ಈಡಾಗಲಿಲ್ಲ. ರಘೋಬಾದಾದಾಸಿಂದ ಪಂಜಾಬದ ಸುಬೇದಾರನಾಗಿ ನಿಯಮಿಸಲ್ಪಟ್ಟಿದ್ದ ಶಾಬಾಜಿರಾವ ನಿಂದೆಯವರನ್ನು ಅಬದಾಲಿಯು ಹೊಡೆದೋಡಿಸಿ, ನೆಟ್ಟಗೆ ದಿಲ್ಲಿಯಮೇಲೆ ಸಾಗಿಬಂದನು; ಯಾಕಂದರೆ, ಆಗಿನ ದಿಲ್ಲಿಯ ಬಾದಶಹನಾದ ಎರಡನೇ ಅಲಮುಗೀರನಾ, ಆತನ ವಜೀರನಾದ ಗಾಜುದ್ದೀನಖಾನನೂ ಮರಾಟರ ಪಕ್ಷ ದವರಾಗಿದ್ದರು. ಹೀಗೆ ಅಬದಾಲಿದು ಅಬ್ಬರಿಸಿ ಉತ್ತರಹಿಂದುಸ್ಥಾನದ ಮರಾಟರ ಅಧಿಕಾರಕ್ಷೇತ್ರದ ಸೆಲಗಟ್ಟನ್ನು ಅದರಿಸಹತ್ತಿದ ಯುಇಗೆ ಮುತು;ಆದರೆ