ಈ ಪುಟವನ್ನು ಪರಿಶೀಲಿಸಲಾಗಿದೆ

{[center]}/{(xxx-larger)}

            ವಿಪರೀತಕಲ್ಪನೆ
            ೧೨  
ಮರಾಠಾಸೇನಾಸಮುದ್ರ ದ  ಪ್ರವಾಹವು ದಕ್ಷಿಣದಿಂದ ಉತ್ತರಕ್ಕೆ ಸಾಗಿ, ಅದರ ತ್ರಿಶೂಲ ಲಾಂತ ಜರಿಪಟಕಾನಿರಾನೆಯ ಉತ್ತರಒಂದುಸ್ಥಾನದಲ್ಲಿ ಮೆರೆಯಹತ್ತಿತು. ಅದಕ್ಕೆ ಎದುರಾಗಿ ದುರಾಣಿಬಾದಶಹನ ಅರ್ಧಚಂದ್ರಲಾಂಛನದ ಹಸರುಬಣ್ಣದ ನಿಶಾನೆಯು ಮಹಮ್ಮದೀಧರ್ಮದವರನ್ನು ಉತ್ತೇಜನಗೊಳಿಸುತ್ತ ರೋಹಿಲಖಂಡದತುಂಬ ಸಂಚಾರಿಸುತ್ತಲಿತ್ತು. ಹೀಗೆ ಮರಾಟರ ತ್ರಿಶೂಲವೂ, ಮುಸಲಮಾನರ ಅರ್ಧಚಂದ್ರವೂ ಕಾದಲಿಕ್ಕೆ ಸಿದವಾದವು.ಆಗ ಮಳೆಗಾಲವಾದದ್ದರಿಂದ ಕಾಳಾ-ಯಮುನಾ ನದಿಗಳೆರದೂ ತುಂಬಿ ಹಯುತ್ತಿದ್ದವು. ದಿಲ್ಲಿಗೆ ಹೊಗುವ ಹಾದಿಯು ಪೂರ್ಣವಾಗಿ ಕಟ್ಟಿಹೋಗಿತ್ತು. ಭಾವೂಸಾಹೇಬನು ಮಾರ್ಗವನ್ನು ಕ್ರಮಿಸುತ್ತ ಗಂಭೀರಾನದಿಯನ್ನು ದಾಟಿ ಆಗ್ರಾಪಟ್ಟಣದ ಕೆಡೆಗೆ ತಿರುಗಿದನು. ಈ ಕಾಲದಲ್ಲಿ ಆತನಿಗೆ ಸ್ವರ್ಗವು ಎರಡೇ ಬೆರಳು 'ಉಳಿ ದಿತ್ತು, ವಾಚಕರೇ . ಯಾಕೆ ಉಳಿಯಬಾರದು ? ಶ್ರೀಮಂತ ಪೇಶ್ವೇಯ ಕುಲದಲ್ಲಿ ಜನ್ಮ. ತಂದೆಯ ವಿಖ್ಯಾತಕೀರ್ತಿ, ಸ್ವಂತದ ಪರಾಕ್ರಮ , ಅತುಲವೈಭವ, ಅಮರ್ಯಾದಿತವಾದ ಸೈನ್ಯ, ಅರಸೊತ್ತಿಗೆ, ದಿವ್ಯವಾದ ಶರೀರಸಂಪತ್ತು , ತಾರುಣ್ಯದಭರ ಇವೆಲ್ಲವುಗಳ ಪ್ರಾಪ್ತಿಯಾದಬಳಿಕ, ಮನುಷ್ಯನು ಗರ್ವಿಷ್ಠ ನಾದರೇನಾಶ್ಚರ್ಯ ? ಆಗದಿದ್ದರೆ ಮಾತ್ರ  ಆಶ್ಚರ್ಯವೆಂದು ಹೇಳಬಹುದು.

ಹೀಗೆ ಭಾವುಸಾದೆನು ಸ್ವತಃ ನೈನನಸಾಗಿಸಿಕೊಂಡು ಮುಂದಕ್ಕೆ ಬರುವ ವರ್ತಮಾನವನ್ನು ಕೇಳಿ ಮಲ್ಹಾರರಾಹೋಳಕರನು - “ಸಾಹೇಬ, ನೀವು ಹೀಗೆ ಮೊದಲೇ ಮುಂದಕ್ಕೆ ಬರತಕ್ಕದ್ದಲ್ಲ; ವೈರಿಗಳು ಯೋಗ್ಯತಾಸಂಪನ್ನರಿರುವರು, ನಜೀಬಉದ್ದವಲಾ, ಸುಜಾಉದ್ದವಲಾ, ಅಹಮ್ಮದಖಾನಲುಗಡಾ, ಅಹಮ್ಮದಶಹಾ ಅಬದುಲ್ಲಾ ಇವರೇನು ಸಾಮಾನ್ಯ ಪುರುಷರಲ್ಲ! ತಮ್ಮಂಥ ಶ್ರೇಷ್ಠ ಪುರುಷರು ಈರ್ಷೆಗೆ ಬಿದ್ದು ಮುಂದಕ್ಕೆ ಬರವದು ಹಿತವಲ್ಲ. ಆದ್ದರಿಂದ, ಸಾಹೇಬರವರು ಮಾಳವಾಪ್ರಾಂತ ದಲ್ಲಿ ತಳಊರಿ ನಿಂತುಕೊಂಡು, ಹಿರಿಯ ನೈನ್ಯವನ್ನಷ್ಟು ಮುಂದಕ್ಕೆ ಕಳಿಸಿಕೊಡಬೇಕು. ಸಾಹೇಬರವರ ಒಗರಿನಿಂದಲೇ ನಾವು ಕಾರ್ಯವನ್ನು ಸಾಧಿಸುವೆವು." ಎಂದು ಸ್ಪಷ್ಟ ವಾಗಿ ಹೇಳಿಕಳಿಸಿದನು. ಅದಕ್ಕೆ ಒಳವಂತರಾವ ಮೇವೇಂದಳೆ ಎಂಬ ತರುಣನು ಭಾವೂ ಸಾಹೇಬನಿಗೆ-ಸಾಹೇಬ, ಸಿಂದೆ-ಹೋಳಕರರು ಇತ್ತ ಕಡೆ ಬಹುದಿವಸ ಸ್ವತಂತ್ರವಾಗಿ ವ್ಯವಹರಿಸಿ ಅರಸರಾಗಿರುವರು: ಅಂದಬಳಿಕ ನಾವು ಬಂದದ್ದು ಅವರಿಗೆ ಹ್ಯಾಗೆ ಸಹನ ವಾಗಬೇಕು? ಅವರು ನಮ್ಮನ್ನು ಹೀಗೆ ತಡೆಯತಕ್ಕದ್ದೇ ಸರಿ. ಭಾವುಸಾಹೇಬ, ತಮ್ಮ ಯೋಗ್ಯತೆಯೇನು ಸಾಮಾನ್ಯವಾದದ್ದಲ್ಲ. ತಮ್ಮ ಪುಣ್ಯಪ್ರತಾಪದಮುಂದೆ ಅಂದಾ ಲಿಯ ಪಾಡೇನು? ತಮಗೆ ಎದುರಾಗುವ ಧೈರ್ಯವು ಅವನಿಗೆ ಸರ್ವಥಾ ಬರಲಾರದು. ಈಮಾತು ತಾವು ಸೆರಗಿಗೆ ಗಂಟುಹೊಡೆದು ನೆನಪಿಟ್ಟುಕೊಳ್ಳಬೇಕು; ಅಂದಬಳಿಕ ಹೋಳ ಕರನೇನು ಹೇಳುವನು ? ನಾವು ಹೀಗೆಯೇ ಸಾಗಿ ದಿಲ್ಲಿಯವರೆಗೆ ಹೋಗೋಣ,” ಎಂದುಹೇಳಿದನು. “ವಿನಾಶಕಾಲೇ ವಿಪರೀತ ಬುದ್ಧಿಃ” ಎನ್ನುವಂತೆ ಸದಾಶಿವರಾಯನು ಮೇಹೆಂದಳಯ ಮಾತನ್ನು ಕೇಳಿ ಹಾಗೆಯೇ ಮುಂದಕ್ಕೆ ಸಾಗಿಹೋಗಹತ್ತಿದನು. ಈ ಸುದ್ದಿ