ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 3 ದಿ ಸಕ್ಕತಾದ ! ಅ5 ದಿವಾನನ ಸೈನ್ಯವನ್ನು ನೋಡಿ, ಹೋಳಕರನ ಸೈನ್ಯದ ತನಗೆ ಸಹಾಯವಾದ ದಕ್ಕಾಗಿ ಬರುವುದು ತಿಳಿದುಕೊಂದು ನಿರ್ಭೀತರಾಗಿ, ಸ್ವಲ್ಪ ಆದ ರು. ಅಷ್ಟರಲ್ಲಿ ಅತಾಯಿಖಾನನ ಸೈನ್ಯವು ಗೋವಿಂದಪಂತನ ಸೈನ್ಯದಮೇಲೆ ಬಿದ್ದು ಕೈಗೆ ಸಿಕ್ಕಮನ್ನು ತುಂಡರಿಸಹತ್ತಿತು. ಮೊದಲನ?? ರೋಹಿಲರು ಮರಾಟ ಹದಿನೈರ್ಮರು ಜನರ ಶಿರಚ್ಛೇದಮಾಡಿದರು. ಈ ಆಕಸ್ಮಿಕ ಮುತ್ತಿಗೆಯಿಂದ ಮರಾಟರು ಕಂಗೆಟ್ಟರು. ಅವರಿಗೆ ವ್ಯವಸ್ಥೆಯಿಂದ ಓಡಿಸಲಿಕ ಬಾರದಾಯಿತು. ಅವರು ವಾರಿಸಿ ಓಡತೊಡಗಿದರು. ಈ ಘೋರಪ್ರಸಂಗದಲ್ಲಿ ಗೋವಿಂದಪಂತನು ಮುಂದುಗೆ ಇದೆ ಕುದುರೆಯನ್ನು ಹತ್ತಿ ಹಿಡಹತ್ತಿದರು. ಒಂದೆರಡು ಹರದಾರಿ ಓಜದೆತಾಗುತ್ತಿರಲು, ಆತನ ಕುದುರೆಯ ಮೇಲಿಂದ ಬಿದ್ದವು. ಪುನಃ ಆತನು ಕುದುರೆಯನ್ನು ಹತ್ತಿ ಮತ್ತೆ ಒಂದೆರಡು ಹರದಾರಿ ಓಡಿದನು. ವುನ ಕುದುರೆಯ ಮೇಲಿಂದ ಬಿದ್ದನು. ಆ ಸಿಲ್ಲದಾಗ ನೆಲವೆದ್ದು ಬಡಿಯಿತೆ” ನ್ನುವಂತೆ, ಆಗ ಗೋವಿಂದಪಂತನ ಕಲಮುರಿದು, ಆತನಿಗೆ ಎದ್ದು ನಿಲ್ಲಲಿಕ್ಕೆ ಬಾರದಾಯಿತು, ಆ ಸ್ಥಿತಿಯಲ್ಲಿ, ತಮ್ಮ ಕುದುರೆಯಮೇಲಿಂದ ಈ ಆತನನ್ನು ಕುದುರೆಯ ಮೇಲೆ ಕುಳ್ಳಿರಿಸಲಿಕ್ಕೆಯಾರಿಗೂ ಅವಕಾಶವು ದೊರೆಯ ಅಲ್ಲ, ಗೋವಿಂದಪಂತನ ಮಗನೂ ನೆಲಕ್ಕೆ ಬಿದ್ದ ತನ್ನ ತಂದೆಯನ್ನು ಬಿಟ್ಟು ಓಡಿಹೋದನು. ಹೀಗೆ ಪರಾಧೀನನಾಗಿ ಬಿದ್ದಿದ್ದ ಗೋವಿಂದಪತನನ್ನು ಶತ್ರುಗಳು ಸೆರೆಹಿಡಿದರು. ಗೊಂದಮಂತನು ಪ್ರಾಣದಾನಮಾಡುವದಕ್ಕಾಗಿ ಅತಾಯಿಖಾನನನ್ನು ಬೇಡಿಕೊಂಡನು. ತನ್ನನ್ನು ಜೀವದಿಂದ ಬಿಟ್ಟರೆ, ಒಂದು ಕೋಟಿರೂಪಾಯಿ ಕೊಡುವನೆಂದು ಹೇಳಿಕೊಂ ಡನು; ಆದರೆ ಆತತಾಯಿಯಾದ ಅತಾಯಿಖಾನನಿಗೆ ದಯಬರಲಿಲ್ಲ! ಆ ಯಮದೂತನು ಕೂಡಲೆ ಗೊವಿಂದಪಂತನ ಶಿರಚ್ಛೇದಮಾಡಿ, ಶಿರಸ್ಸನ್ನು ತಕ್ಕೊಂಡು ದಿಂಡವನ್ನು ಅಲ್ಲಿಯೇ ಚಲ್ಲಿ ಕೊಟ್ಟನು. ಅದು ಅಲ್ಪಕಾಲ ಚಟಪಟ ಒದ್ದಾಡಿ ತಣ್ಣಗಾಯಿತು. ಗೋವಿಂದಸಂತನ ಉಳಿದ ಸೈನ್ಯವು ದಿಕ್ಕುಪಾಲಾಗಿ ಓಡಿಹೋಯಿತು. ಬಳಿಕ ಅತಾಯಿ ಬಾನನು ಗೋವಿಂದಪಂತನ ತಿರಸ್ಸನ್ನು ತಕ್ಕೊಂಡು ಆನಂದದಭರದಿಂದ ಶಹಾನ ಛಾವನೆಯ ಕಡೆಗೆ ಸಾಗಿದನು. ಗೋವಿಂದನಂತರ ಶಿರಸ್ಸನ್ನು ನೋಡಿ ನಜೀಬಖಾನ ರೊಹಿಲೆಗಾದ ಆನಂದವು ಅವನ ಹೊಟ್ಟೆಯಲ್ಲಿ ಹಿಡಿಸದಾಯಿತು. ಅತನು ಆ ಶಿರಸ್ಸನ್ನು ಒಂದು ವಸ್ತ್ರದಲ್ಲಿ ಸುತ್ತಿಕೊಂಡು ಶಹಾನ ಬಳಿಗೆ ಹೋಗಿ, ಅದನ್ನು ಆತನಿಗೆ ಕಾಣಿಕೆಯಾಗಿ ಕೊಟ್ಟನು. ಅಹಮ್ಮದಶಹನು ಅದನ್ನು ಒಬ್ಬ ವಕೀಲನ ಕೈಯಿಂದ ಸದಾಶಿವರಾವ ಭಾವುವಿನ ಕಡೆಗೆ ಕಳಿಸಿ-6 ನಿನ್ನ ಸರದಾರನಾದ ಗೋವಿಂದಪಂತ ಬುಂದಲೆಯು ನಿಮ್ಮ ಸಲುವಾಗಿ ಸ್ವರ್ಗದಲ್ಲಿ ಸ್ಥಳನೊಡುವದಕ್ಕಾಗಿ ಮುಂದೆಹೋದನು.. ನಿಮಗೆ ತಕ್ಕ ಸ್ಥಳವು ತಟ್ಟನೆ ಗೊತ್ತಾದದ್ದರಿಂದ, ನಿಮ್ಮನ್ನು ಕರೆಯುವದಕ್ಕಾಗಿ ಈಗ ತನ್ನ ಶಿರಸ್ಸನ್ನು ನಿಮ್ಮ ಬಳಿಗೆ ಕಳಿಸಿದ್ದಾನೆ. ಇದು ನಿಮ್ಮ ಗೋವಿಂದಪಂತನ ಶಿರಸ್ಸು ಅಹುದೋ ಅಲ್ಲವೋ ನೋಡಿ ಕೊಳ್ಳಬೇಕು.” ಎಂಬರ್ಥದ ಪತ್ರವನ್ನೂ ಆ ವಕೀಲನ ಕೈಯಲ್ಲಿ ಕೊಟ್ಟಿದ್ದನು. ಭಾವು