ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩ ವರಾನ. ಗಿನ ಸಿಂಹಾಸನವನ್ನು ಯಾರನನ ಹಸತನಾದ ಆಸಮಾನನು ಕಿತ್ತು ಒಗೆ. ದದ್ದು ನ್ಯಾಯವೆದು ಛತ್ರಪತಿಯ ಸೇವಕರು ನಾವು ತಿಳಿದುಕೊಳ್ಳೋಣವೆ? ಹಾಯ್ ಮಾಯ! ದುಷ್ಟಯವನರು ನಮ್ಮ ಗುಡಿ-ಗುಂಡಾರಗಳನ್ನು ಕೆಡವಿದರು; ಮೂರ್ತಿಗ ಇನ್ನು ಭ್ರಷ್ಟಗೊಳಿಸಿದರು; ಪತಿವ್ರತೆಯರ ಮಾನಭಂಗಮಾಡಿದರು: ಬಡಪ್ರಜೆಗಳ ರುಂಡಗಳನ್ನು ಕರಕರಕೊಯ್ದರು! ಮುಸಲ್ಮಾನರ ಈ ಕೂರತನವೆ ಹೋಯಿತು; ಆದರೆ, ನನ್ನ ದಂಡಯಾತ್ರೆಯ ಅನುಕೂಲತೆಗಾಗಿ ಹಿಂದಿನ ದುರ್ವ್ಯದ ಸ್ಮರಣದಿಂದ ಸುತಾಪವಾಗಲು, ಈಗ ನಮ್ಮಿಂದ ಅಲ್ಪಸ್ವಲ್ಪ ಪ್ರಚಾಪೀಡೆಯ, ಮುಸಲ್ಮಾನಧರ್ಮದ ಪಿಡಂಬನೆಯ ಆದದ್ದು ಕ್ಷಮ್ಯವಲ್ಲವೆ? ಈ ! ಸಾತ್ವಿಕಸಭಾವದ ಆರ್ಯಭೂಮಾ ತೆಯೆ? ನಿನಗೆ ದೊಷವಿಡುವದು ನಿನ್ನ ಪ್ರತ್ರರೆನಿಸುವ ನಮಗೆ ಭಾಷಣವಲ್ಲ, ನೀನು ಪರಮಸಾತ್ವಿಕೆಯು, ಧರ್ಮರಾಜನಂಥ ಅಚಾತಶತ್ರುಗಳನ್ನೇ ಪ್ರೇಮದಿಂದ ಅಪ್ಪಿ ಮುಂಡಾಡುವ ಕರುಣಾಶಾಲಿಯಾದ ಗಂಭೀರ ಸ್ವಭಾವದ-ಅಧ್ಯಾತ್ಮದಷ್ಟಿಯ ತಾಯಿಯು ನೀನು! ಅಂದಬಳಿಕ, ನಮ್ಮಂಥ ರಾಜಸತಾಮಸನ್ಮತಿಯ ಮಕ್ಕಳನ್ನು ಯಾಕೆ ಮಸಿ, ಸುವೆ? ಹಿಂದಕ್ಕೆ ನೀನು ನಿನ್ನ ಹೊಟ್ಟೆಯಮಗನಾದ ನರಕಾಸುರನ ದುರ್ವತ್ರನವನ್ನು ಕೂಡ ತಡೆಯಲಿಲ್ಲ; ಶ್ರೀಹರಿಯಕೈಯಿಂದ ಅವನ ಸಂಹಾರಮಾಡಿಸಿದ್ದು ಲೋಕವಿರುತವಾಗಿ ರುವದು. ಅದರಂತೆ, ಹಿರಣ್ಯಾಕ-ಹಿರಣ್ಯ ಕಸಿಪ, ರಾವಣ-ಕುಂಭಕರ್ಣ, ದುರ್ಯೋ ಧನ-ದುಶ್ಯಾಸನ ಮೊದಲಾದ ವೀರಪುತ್ರರಿಂದ ನೀನು ವೀರಮಾತೆಯಿಂದ ಹೊಗಳಿಸಿಕೊಂ ಡರೂ ಅಮಕ್ಕಳ ದುರ್ವತ್ರನಕ್ಕಾಗಿ ಅವರ ಸದ್ಗುಣಗಳಾವವನ್ನೂ ಣಿ ನದೆ, ಅನ `ರನ್ನು ನೀನು ದಂಡಿಸದೆ ಬಿಡಲಿಲ್ಲ! ಅಂದಬಳಿಕ ನನ್ನ ಪಾಡೇನು? ಆದರೆ ತಾಯಿ, ನಿನ ವೀರಪುತ್ರ ಚಿಮಣಾಜಿಯ ಮಗನೆನಿಸುವ ನಾನು, ಅಭಿಮಾನದಿಂದ ಈಗ ದಂಡಯಾತ್ರೆಯ ಉದ್ಯೋಗವನ್ನು ಕೈಕೊಂಡದ್ದು, ತಿ-ಹಿಪ್ರೊ, ನಾನರಿಯೆನು , ನಾನು ನಿನ್ನ ಕೋಭಕ್ಕೆ ಗುರಿಯಾಗಲಿ, ಅಥವಪ್ರಸಾದಕ್ಕೆ ಪಾತ್ರನಾಗಲಿ, ನಿನ್ನ ದೌಹಿತ್ರನೆನಿ ಸುವ ನಾನು, ವೀರರಿಗೆ ಸಲ್ಲದ ಕೆಲಸವನ್ನು ಮಾತ್ರ ಎಂದೂ ಮಾಡಲಿಕ್ಕಿಲ್ಲ! ಭಾವುವಿನ ಕೃತಿಯು ಲೋಕಕ್ಕೆ ಮಾನ್ಯವಾಗಲಿಕ್ಕೆ-ಅಥವಾ ಅಮಾನ್ಯ ನಾಗಲಿಕ್ಕೆ , ಮುಂದೆ ಆತನಿಗೆ ಒದಗಬೇಕಾಗಿರುವ ಜಯಾಪಜಯಗಳು ಕಾರಣವಾಗಿರುವವು : ಭಾವುವು ಜಯಶಾಲಿ ಯಾದರೆ ಆತನ ತದ್ರೂ ಒಟ್ಟಾಗಿ, ಆತನು ಲೋಕಾದರಕ್ಕೂ, ಜನರ ಸ್ತುತಿ- ಸ್ತೋತ್ರ ಗಳಿಗೂ ಪಾತ್ರನಾಗುವನು. ಆತನು ಸೋತರೆ, ಆತನ ಒಳ್ಳೆಯ ಕೆಲಸಗಳೂ ಕೆಟ್ಟ ವಾಗಿ ಆತನು ಲೋಕನಿಂದ್ಯನಾಗುವನು. ತಾಯಿ, ಆ ನಿಂದಾಸ್ತುತಿಗಳನ್ನು ಕಟ್ಟಿ ಕೊಂಡು ನಾನು ಮಾಡುವವೇನು? ಈಗ ನನ್ನ ಕೈಾರಿಹೋಗಿದೆ. ನಾನು ಹಿಂದಕ್ಕೆ ತಿರುಗಲಿಕ್ಕೆ ಬಾರದಷ್ಟು ದೂರ ಸಾಗಿರಗಿರುತ್ತೆನೆ , ಇನ್ನು ತೇಲಲಿ-ಮುಳುಗಲಿ, ಹೀಗೆಯೇ ನಾನು ಮುಂದಕ್ಕೆ ಸಾಗಿಹೋಗತೆಕ್ಕವನಸು ! - ಹೀಗೆ ಅಂದುಕೊಳ್ಳುವಾಗ ನೀರ ಭಾವುಸಾಹೇಬನ ನೇತ್ರಗಳು ದುಃಖಾಶ್ರು ಪೂರ್ಣವಾಗಿದ್ದವು. ಆತನು ಆಗ ಮನದಣಿಯಾಗಿ ಕಣ್ಣೀರು ಸುರಿಸಿದ್ದರೆ ಆತನ