ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಾರ್ಥ ಸಾಧನ ೬೯ ಒಬ. ಮತೊಂದು ಕಡೆಯಲ್ಲಿ ಜಮಾಖರ್ಚಿನ ಪುಸ್ತಕಗಳು, ಬೇರೆ ಕೆಲವು ಪುಸ್ತಕ ಗಳು ಇದ್ದವು. ಕೀರ್ದಿ ಯನ್ನು ಕೈಯಲ್ಲಿ ತಕೊಂಡು ರಾವಜಿಮಹಾದೇವ ವಾರ ನೇಕರ ಫಡನವೀಸನೂ, ರಾಜಾರಾಮ ಮಹಾದೇವಕಾರಕೂನನೂ ಯಜಮಾ ನನಿಗೆ ಜಮಾಖರ್ಚನ್ನು ಓದಿತೊರಿಸುತ್ತಿದ್ದರು. ಗಂಗಾ ದಾಸನನ್ನು ನೋಡಿದ ಕಡಲೆ ಹೋಳಕರನು ಅವರಿಬ್ಬರಿಗೂ ಹೊರಗೆ ಹೋಗ ಹೇಳಿದನು. ಕೂಡಲೇ ಅವರು ಇದ್ದ ಪುಸ್ತಕಗಳನ್ನು “ ಇದ್ದ ಹಾಗೆ ಇಟ್ಟು, ತಮ್ಮ ಹೊರುವ ಧೋತರ ವನ್ನು ಕುಳಿತ ಸ್ಥಳದಲ್ಲಿಯೇ ಬಿಟ್ಟು ಹೊರಗೆ ಹೋದರು. ಗುಪ್ತಚಾರನ ಮಾ ತುಗಳನ್ನು ಯಾರೂ ಕೇಳಬಾರದೆಂದು, ಡೇರೆಯು೦ದ ಹತ್ತು ಮೊಳದ ಮೇಲೆ ವೈ-ಕುಶ : ಸಿಪಾಯಿಯನ್ನು ನಿಲ್ಲಿಸಿದ್ದನು. ಆ ಸಿಪಾಯಿ ಯು ಮಲಾರರಾಯನಿಗಿಂತ ವೃದ್ಧನಾಗಿದ್ದನು. ಆತನ ಮುಖಮುದ್ರೆಯು ಉಗ್ರವಿದ್ದು, ಧ್ವನಿಯು ಕರ್ಕಶವಾಗಿತ್ತು. ಆತನ ಮೈ ಕಟ್ಟು, ಹುರಿಕಟ್ಟಿನದು; ಉಡಿಗೆ-ತೊಡಿಗೆಗಳು ಉರುಟು ತರ, ಆತನ ಕೈಯಲ್ಲಿ ಉದ್ದ ವಾದದೊಂದು ಖಡ್ಡ ವಿತ್ತು. ಮಲಾರರಾಯನು ಪಲ್ಲಂಗದ ಕೆಳಗಿನ ತನ್ನ ಗಾದಿಯ ಮೇಲೆ ಕಾಲಮೇಲೆ ಕಾಲು ಹಾಕಿಕೊಂಡು ಕುಳಿತು, ಆಡ ಕಒ ೩ನಿಂದ ಅಡಿಕೆ ಒಡಿದು ಬಾಯಲ್ಲಿ ಹಾಕಿಕೊಳ್ಳು ತ್ಯದ ನು. ಅವನು ಕೆಂಡದೊ೦ದು ರಜೆ:ಯಿಯನು ಹೊದ್ದುಕೊಂಡಿದ್ದನು. ಹೀಗೆ ವೀರಶ್ರೇಷ್ಟನಾದ ಆ ಕುರುಬಸರದಾರನು ಒಳ್ಳೆ ಎಚ್ಚರದಿರದ ಕುಳಿತಿರಲು, ವೇಷಧಾರಿ ಬ್ರಾಹ್ಮಣನಾದ ಗಂಗದಾಸನು ಒಳಗೆ ಹೋದಕೂಡಲೆ ಹೆಣ : ಆರನಿಗೆ ಬಾಗಿ ಮುಜುರೆ ಮಾಡಿದನು. ಆಗ ಹೊಳಕ ರನು ಕುಳಿತ ಹಾಗೆಯೇ ಕುಳಿತುಕೊಂಡಿದ್ದು , ಕೈ ಯನ್ನು ಎತ್ತದೆ, ಬರಿದು ತಲೆ ಬಾಗಿ ಮುಜುರೆಯನ್ನು ತಕ್ಕೊಂಡನು. ಯಾಕಂದರೆ, ಚಾರನು ಆ ಶನ ಪೂರ್ಣ ಪರಿಚಯದವನಾಗಿದ್ದನು ಗಂಗಾದಾಸನ ವೇಷಧಾರಿ ಬ್ರಾಹ್ಮಣನಾಗಿರದೆ ನಿಜವಾದ ವೇದಶಾಸ್ತ್ರ ಪಾರಂಗತ ಬ್ರಾಹ್ಮಣನಾಗಿದ್ದರ, ಹೊಳಕೆನು ಎದ್ದು ನಿಂತು ಎರಡು ಹೆಜ್ಜೆ ಮುಂದಕ್ಕೆ ಹೋಗಿ ಬ್ರಾಹ್ಮಣನ ಚರಣಗಳ ಮೇಲೆ ಮಸ್ತ ಕವಿಡುತ್ತಿದ್ದನು. ಯಾಕಂದರೆ : ವರ್ಣಾನಾಂ ಬ್ರಾಹ್ಮಣ ಗುರು..." ಎಂಬ ಉಕ್ತಿಯಲ್ಲಿ ಆಗಿನ ಕಾಲದ ಜನರ ದೃಢ ವಿಶ್ವಾಸವಿತ್ತು. ಆಗಿನ ಅಧಿಕಾರಸಂಪ ನ ನಾದ ರಾಜನಿರಲಿ, ಶೂರಸರನಾರನಿರಲಿ, ಕೂರ ಸಿಪಾಯಿ ಯಿರಲಿ ಅವರು ವೇದಮೂರ್ತಿಗಳನ್ನು ಮನ್ನಿ ಸುತ್ತಲಿದ್ದರು. ಈ ಪದ್ಧತಿಯು ಋಷಿಕಾಲದಿಂದ ನಡೆದುಬಂದಿತ್ತು. ಇರಲಿ, ಹೋಳಕರನು ತನ್ನೆ ದುರಿಗೆ ನಿಂತಿದ್ದ ವೇಷಧಾರಿ ಯಾದ ಗಂಗಾದಾಸನೆಂಬ ಬಾಹ್ಮಣನಿಗೆ-1 ಬೀರಬಲ್, ಈಗ ನೀನು ಬಂದ ದು ಬಹಳ ನೆಟ್ಟ ಗಾಯಿತು. ನನ್ನ ಗೆಳೆಯ ನಜೀಬರವರ ಕಡೆಯ ವಿಶೇಷ ವರ್ತಮಾನವೇನು? ” ಎಂದು ಕೇಳಲು, ಆ ಜಾಟಜಾತಿಯ ರಜಪೂತನಾದ ಬೀ ಕಬಲ್ಲನು ತನ್ನ ಬಗಲಕಸಿಯ ಹರಕಅ೦ಗಿಯ ಕಿಸೆಯೊಳಗಿಂದ ಒಂದು ಲಕ್ಷೆ ಟೆಯನ್ನು ತೆಗೆದು-- ಈ ಲಕೋಟಿಯನ್ನು ನಜೀಬ ಸಾಹೇಬರು ಕೊಟ,ದಾ ರೆ” ಎಂದು ಹೇಳಿ, ಅದನ್ನು ಹೋಳಕರನ ಕೈಯಲ್ಲಿ ಕೊಟ್ಟನು. ಕೂ.. ತಲೆ ಹೋಳ ಕರನು ಹುಬ್ಬು ಗಂಟಿಕ್ಕಿ ಅದನ್ನು ತಕ್ಕೊಂಡು ಬಳಿಯಲ್ಲಿದ್ದ ಅಗ್ಗಿಷ್ಟಿಗೆಯಲ್ಲಿ ಚಲ್ಲಲು, ಅದು ಸುಟ್ಟು ಬೂದಿಯಾಗಿ ಹೋಯಿತು !