ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಶೇಷಾಚಲಸದ್ಗುರವೇ ನಮಃ ಕುರುಕ್ಷೇತ್ರ! ೧ನೆಯಪ್ರಕರಣ-ದುರುಳತನ, ಉಷಃಕಾಲವು ನಕ್ಷತ್ರಗಳು ಕಾಂತಿಹೀನವಾಗತೊಡಗಿವೆ. ಚಂದ್ರಮನು ಕತ ಲೆಯನ್ನು ಓಡಿಸಿ ದಣಿದವನಂತೆ ತೇಜೋಹೀನನಾಗುತಿರಲು, ಆತನಿಗೆ ಬೆಂಬಲವಾಗಿ ಭರ ದಿಂದ ಬರುವ ದಿನಮಣಿಯಿಂದ ಮೂಡಲು ಬೆಳಗತೊಡಗಿದೆ. “ಏಳಿರಿ ಏಳಿರಿ, ಬೆಳಗಾ ಯಿತು, ಮಲಗಬೇಡಿರಿ” ಎಂದು ಕೂಗಿ ಕೂಗಿ ಜನರನ್ನು ಎಬ್ಬಿಸುವಂತೆ, ಪಕ್ಷಿಗಳು ಕಿಲಿ ಕಿಲಿ ಧ್ವನಿಮಾಡತೊಡಗಿವೆ. ಬೆಳಗಿನ ತುಗಾಳಿಯು ಸುತ್ತಿ ಸುಗಂಧವನ್ನು ಬೀರುತ್ತ, ಸುಳ್ಳನೆ ಸುಳಿಯತೊಡಗಿದೆ, ಧನುಸ್ಸಂಕ್ರಮಣದ ಕೊನೆಯ ಕಾಲವಾದದ್ದರಿಂದ, ಚಳಿಯು ಜಗತ್ತನ್ನು ಗದಗದ ನಡುಗಿಸುತ್ತಲಿದೆ; ಆದರೂ ನಸಿನಲ್ಲಿ ಎದ್ದು ವೀರರು ಧನುರ್ಮಾಸದ ಊಟವನ್ನು ತೀರಿಸಿಕೊಂಡು ದಿನದಂತೆ ದ್ವಂದ್ವಯುದ್ಧಕ್ಕಾಗಿ ರಣಸ್ತಂ ಭದಕಡೆಗೆ ಸಾಗಿಬರುತ್ತಲಿದ್ದಾರೆ. ಹಾದಿಕಾರರು ಬೆಳಗಿನ ಕೆಲಸಗಳನ್ನು ತೀರಿಸಿಕೊಂಡು ಉಲ್ಲಾಸದಿಂದ ಹಾದಿಯ ಹಿಡಿಯತೊಡಗಿದ್ದಾರೆ, ಯಾತ್ರಿಕರು ತಮ್ಮ ಪದ್ಧತಿಯಂತೆ ಕೆಲವರು ಪ್ರಾತಃಸ್ಮರಣದ ಶ್ಲೋಕಗಳನ್ನು, ಕೆಲವರು ಶಿವನಾಮವನ್ನು, ಕೆಲ ವರು ರಾಮನಾಮವನ್ನು ಉಚ್ಚರಿಸುತ್ತ, ಕೆಲವರು ವಿಷ್ಣು ಸಹಸ್ರದ ಪಾರಾಯಣಮಾ ಡುತ್ತ, ಕೆಲವರು ಗೀತೆಯನ್ನು ಪಠಿಸುತ್ತ ಉಲ್ಲಾಸದಿಂದ ತಮ್ಮ ತಮ್ಮ ಕ್ಷೇತ್ರಾಧಿ ಮುಖವಾಗಿ ಸಾಗಿರುತ್ತಾರೆ, ಶ್ರೀ ಕುರುಕ್ಷೇತ್ರದೊಳಗಿನ ಪುರಾಣಪ್ರಸಿದ್ದವಾದ ಭೀಷ್ಮ ಕುಂಡ, ಸೈನಹುಂಡ, ಸಾನೆತನಕುಂಡ, ಬಾಣಗಂಗಾ, ಕುರುಧಜತೀರ್ಥ, ಚಕ್ರ ಹತೀರ್ಥ ಮೊದಲಾದ ಭಾರತೀಯ ತೀರ್ಥಗಳಲ್ಲಿ ಸ್ನಾನಮಾಡಿ, ಕರ್ಮಠಬ್ರಾಹ್ಮ ಣರು ಅಧ೯ಜಲವನ್ನು ಬೊಗಸೆಯಲ್ಲಿ ತುಂಬಿಕೊಂಡು ಸೂರ್ಯಮಂಡಲದಕಡೆಗೆ ದೃಷ್ಟಿ ಯನಿಟ್ಟು ನಿಂತುಕೊಂಡಿದ್ದಾರೆ. ಅಷ್ಟರಲ್ಲಿ ಸೂರ್ಯಬಿಂಬವು ಹೊರಹೊರಟು ಎಳೆ ಬಿಸಿಲು ವಸರಿಸತೊಡಗಿತು, ಇಂಥ ಪ್ರಸಂಗದಲ್ಲಿ ಒಬ್ಬ ತರುಣ ಬೈರಾಗಿಣಿಯು ಕುರು ಕ್ಷೇತ್ರದೊಳಗಿನ ದಂಡಿನ ಪಾಳಯದಕಡೆಗೆ ಅಡ್ಡದಾರಿಯಿಂದ ಒಬ್ಬಳೆ ಸಾಗಿದ್ದಳು. ಆ ತರುಣಿಯ ವಯಸ್ಸು ಹದಿನಾರು ಹದಿನೇಳು ವರ್ಷದಿರಬಹುದು. ಆಕೆಯ ಬಣ್ಣ ಸಾದಗಪ್ಪು, ಮೈಕಟ್ಟು ತೆಳ್ಳಗೆ, ನಿಲುವಿಕೆ ಗಿಡ ತರ. ಆಕೆಯ ಹಣೆಯು ವಿಶಾಲ ವಾಗಿದ್ದು, ಅಚ್ಚ ಕರಗಿನ ಉದ್ದ ತಲೆಗೂದಲು ಆಕೆಯ ಬೆನ್ನನ್ನು ಮುಚ್ಚುಹಾಕಿ ತಿಗಗೆ ಛನ್ನು ಅತಿಕ್ರಮಿಸಿ ಅಲೆದಾಡುತ್ತಿದ್ದವು. ಆಕೆಯ ಮನೋಹರವಾದ ಕಣ್ಣುಗಳು ಅಷ್ಟು ದೊಡ್ಡ ವಿಲ್ಲದಿದ್ದರೂ ತೇಜಃಪುಂಜವಾಗಿದ್ದವು. ಆಕೆಯು ಧನುಷ್ಯಾಕೃತಿಯ ಹುಬ್ಬುಗಳು