ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೬ ಕುರುಕ್ಷೇತ್ರ ಆದರೆ, ನಾನು ಜೀವದಿಂದಿರುವವರೆಗೆ ಹುಡುಗರು ಹೆಂಗಸರ ಮರ್ಯಾದೆಗೂ, ಅವರ ಜೀವಕ್ಕೂ ಅಪಾಯವಾಗಗೊಡಲಿಕ್ಕಿಲ್ಲ. ಈ ವಿಷಯದಲ್ಲಿ ನಾನು ವನಃ ಪೂರ್ವಕವಾಗಿ ಯತ್ನಿ ಸುವನು. ಈ ಮಾತುಗಳು ಹೊಳಕಲನ ಮುಖದಿ೦ದ ಮನಃಪೂರ್ವಕವಾಗಿ ಹೊರ ಟದ್ದನ್ನು ಕೇಳಿ ಭಾವುಸಾಹೇಬನಿಗೆ ಸ್ವಲ್ಪ ಸಮಾಧಾನವಾದಂತಾಯಿತು. ಆತನು ಮಲ್ಲಾರರಾಯನಿಗೆ-“ ಸಾಕು, ಇಷ್ಟು ಮಾತು ತಮ್ಮ ಮುಖದಿಂದ ಹೊರಟ ಸಾಕು. ಇನ್ನು ಮುಂದಿನ ಚಿಂತೆ ನನಗಿಲ್ಲ ಈ ಕೃಚ್ಛೆಯ ಜೊರತು ಒಂದು ಆ ಡ್ಡಿಯೂ ಅಲ್ಲಾಡುವದಿಲ್ಲ. ಆತನ ಪ್ರೇರಣೆಯಿಂದಲೇ ನಾವು ನಾಳೆ ನಮ್ಮ ಶಿರಃ ಕಮಲಗಳನ್ನು ಕೈಯಲ್ಲಿ ಹಿಡಕೊಂಡು ಸನಕಾ೦ಗಣಕ್ಕೆ ಹೋಗುವವು. ಈ ಮಾ ತಿನ ವಿಚಾರಕ್ಕಾಗಿಯೇ ಇಂದು ರಾತ್ರಿ ದ ರ್ಬ ರು ನಡೆಯತಕೃದ್ದವೆ. ಆಗ ನಿಮ್ಮ ವಿಚಾರಗಳನ್ನು ತಿಳಿಸಬೇಕು. ನಿಮ್ಮಂಥ ಸಿಜ್ಯ ರೂ, ವಯೋವೃದ್ಧರೂ ಆದ ಸರದಾರರ ಆಲೋಚನೆಯು ಈ ಕಠಿಣ ಪ್ರಸಂಗದಲ್ಲಿ ಆತ ಲತ ಹಿತಕರವಾಗುವಲ್ಲಿ ಸಂಶಯವಿಲ್ಲ.' ಎಂದು ನುಡಿಯಲು, ನಗರ ----- ಸರಕಾರದ ಇಚ್ಛೆ ಯಂತೆ ನಡೆಯುವದು ನನ್ನ ಕೆಲಸವು, ಬಜೆಚ್ಚಿನದನ್ನು ನಾಟಿ ಬಯನು.' ಎಂದು ಹೇಳಿದನು. ಮುಂದೆ ಸ್ವಲ್ಪ ಮಾತು ಕಥೆಗಳು ನಡೆದು ಮಲ್ಲಾ ಗಾಯನು ಭಾವು ಸಾಹೇಬನ ಆ ಪ್ಪಣೆ: ಡೆದು ತನ್ನ ' ಫುಲ ಸು...' ಕುದುರೆಯನ್ನೆ ರಿ ಪರಿವಾರದೊ ಶನ ಡೇರೆಗೆ ಹೊರಟನು. ಗಹೋಗು ಆತನು ತನ್ನ ಮನಸ್ಸಿನಲ್ಲಿ... ಸ ಬ೮ ಜಗೈ ಸಾಪ ತೇಡಾಚಲೇ, ಲೆಕಿನ ಬಿಲಮೇ ಸೀದಾ ಘಸೆ' ಎಂಬಂತೆ ಈ ಬಾ ಹ್ಮಣನು ಈಗ ನನಗೆ ಬ್ರಹ್ಮಜ್ಞಾನವನ್ನು ಬೆf ಧಿಸುತ್ತಾನೆ. ಈಗೆಲ್ಲ ಸವಿಮಾ ಶು ಸುರಿಸುವನು. ಈತನ ತಾತಿಗೆ ಮರುಳಾಗಿ ನಾನು ನಾಳೆ ದುರಾಣಿಯ ಜನ ರನ್ನು ತುಂಡರಿಸಿ ಚಲ್ಲಿದ , ಈತನು ಡಾ ವಿನಹಾಗೆ ನನ್ನ ಮೇಲೆ ತಿರುಗಿ ಬೀ ಳುವದಿಲ್ಲೆಂದು ಹ್ಯಾಗೆ ಹೇಳಬೇಕು? ಇವರು ನಿನ್ನೆ ಮೊನ್ನಿನ ಹುಡುಗರು, ನನ್ನ ಮುಂದೆ ಬರಿಮೈ ಯಿ೦ದ ಓಡಾಡುತ್ತಿದ್ದರು, ಇನ್ನೂ ಇವರ ತಲೆಯ ಮೇಲಿನ ಮಾಂಸವಾರಿಲ್ಲ. ಇಂಥವರು ನನಗೆ ಬುದ್ಧಿ ಗಳಿಸ: ತಾರೆ! ನಾಳೆ ಇವರ ಸಮಸೇನ ಬಹದ್ದರ, ಪುರ೦ದರೆ, ಸಿಂದೆ, ಇಬ್ರಾಹಿಮಖಾನ ಇವರು ಜಯಶಾಲಿಗಳಾದರೆ ಇವರ ಕಣ್ಣು ತಿರುಗಿ ಹೋದಾವು. 'ಇವರ ನಂಬಿಕೆ ನನಗಿಲ್ಲ. ನಮ್ಮ ರಾವಸಾಹೇ ಬ, ಅಪ್ಪಾಸಾಹೇಬ, ನಾನಾ ಸಾಹೇಬ ಇವರು ಎಂಥ ದೊಡ್ಡ ಮನುಷ್ಯರು ? ಅವ ರು ಹೊಟ್ಟೆಯ ಮಕ್ಕಳಂತೆ ನಮ್ಮನ್ನು ರಕ್ಷಿಸಿದರು. ಅ೦ತೇ ಅವರ ಕಾಲೊಳಗಿನ ಜೋಡುಗಳಿದ್ದಲ್ಲಿ ನಮ್ಮ ತಲೆಗಳನ್ನಿಳಿಸಲಿಕ್ಕೆ ನಾವು ಸಿದ್ಧರಿರುತ್ತಿದ್ದೆವು.'ಎಂದು ಒಟಗುಟ್ಟುತ್ಯ, ತನ್ನ ಡೇರೆಯನ್ನು ಹೊಕ್ಕನು. ಇತ್ತ ಭಾವುಸಾಹೇಬನು ಮನಸ್ಸಿ ನಲ್ಲಿ- ಈತನು ನಮಗೆ ಘಾತಮಾಡುವನೋ ಏನೋ ಎಂಬ ಸಂಶಯವು ನನಗೆ ಬರಹತ್ತಿದೆ. ಈತನಲ್ಲಿ ವಿಶ್ವಾಸವಿಟ್ಟು ನಡೆಯುವದು ಶ್ರೇಯಸ್ಕರವಲ್ಲ. ದೇವರು ಈತನಿಗೆ ಸದ್ಭುದ್ಧಿಯನ್ನು ಕೊಡಲಿ' ಎಂದು ಅಂದುಕೊಳ್ಳುತ್ತಿರಲು, ಸೂರ್ಯಾ ಸ್ವಮಯವಾಗಿ ಸಾಯಂಸಂಧ್ಯಾಕಾಲವು ಪ್ರಾಪ್ತವಾಯಿತು; ಆದ್ದರಿಂದ ಅವನು ಅಲ್ಲಿಂದ ಎದ್ದು, ಸಂಧ್ಯಾವಂದನದ ಡೇರೆಯನ್ನು ಹೊಕ್ಕನು.