ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೭ ಯುದ್ಧೋಪಕ್ರಮ ಮರುದಿವಸ ಬೆಳಗಿನಲ್ಲಿಯೇ ಯುದ್ಧವು ಆರ೦ಭವಾಗತಕ್ಕದ್ದಾದ್ದರಿ೦ದ, ಯಾವ ಕೆಲಸಕ್ಕೂ ಹೆಚ್ಚು ಅವಕಾಶವು ದೊರೆಯುವಂತೆಇದ್ದಿಲ್ಲ. ಶ್ರೀಮಂತರ ಸಂಧಾವಂದನದ ಕೆಲಸವು ತೀರಿದ ಕೂಡಲೆ ದರ್ಬಾರದ ಕಾರ್ಯಕ್ಕೆ ಆರಂಭ ವಾಯಿತು. ದಂಡಿನ ಛಾವಣಿ ಯಲ್ಲ ಯುದೆ ಈಕವಾಗಿತ್ತು ; ಯಾಕಂದರೆ, ಅನ್ನ ದ ದುರ್ಭಿಕ್ಷದ ಮೂಲಕ ಉಪವಾಸದ ಕಷ್ಟವು ಎಲ್ಲರಿಗೂ ದುಸ್ಸಹವಾಗಿ ತು, ಯಾವತ್ತು ಸರ, ಗರು ದರ್ಬಾರಕ್ಕೆ ಬಂದು ತಮ್ಮ ತಮ್ಮ ಸ್ಥಳಗಳಲ್ಲಿ ಕುಳಿತುಕೊಂಡರು. ಶ್ರೀಮಂತರ ಸವಾರಿಗಳೂ ತಮ್ಮ ಗಾದಿಗ ನ್ನ ಲಂಕರಿಸಿ ದವು. ದರ್ಬಾರದ ಗದ್ದಲವಡಗಿ "ಬ್ಬ ತೆಯಾಗಲು, ಭಾವುಸಾಹೇಬನು ಎದ್ದು ನಿಂತು ಊರ್ದ್ವದೃಷ್ಟಿಯಿಂದ “ರಣದೇವತೆಗಳಿರಾ, ನಿಮ್ಮ ಕೃಪಾಛತ್ರವೂ ಅನುಗ್ರಹವೂ ನಮ್ಮ ಮೇಲಿದ್ದರೆ ಮರಾಟರ ಯಶೋದುಂದುಭಿ ಯು ಭರತಖಂಡ ದಲ್ಲಿಯೇ ಏಕೆ, ಖುರಾಸಾಣದ ಪರ್ವತ ಶಿಖರಗಳಮೇಲೆಯೂ ದಿಮಿಗುಟ್ಟಬಹು ದು” ಎಂದು ನುಡಿಯಲು ಅದನ್ನೆ ೯ ದರ್ಬಾರದ ವೀರರೆಲ್ಲ ಪುನಃ ಉಚ್ಚರಿಸಿ ಜ ಯಘೋಷ ಮಾಡಿದರು. ಆ ಘೋಷದ ಅನುಕರಣವನ್ನು ದರ್ಬಾರದ 8 ರಗಿನ ಪ್ರಚಂಡ ವಿರಸನಹವು ಮಾಡಲು, ಜಯನಾದದ ಧ್ವನಿ ಪ್ರತಿಧ್ವನಿಗಳಿಂದ ದಶದಿಕ್ಕು ಗಳು ತುಂಬಿದವು. ಸೈನಿಕರು ಇನ್ನು ಕೇಶರಿಯ ಪೋಷಾಕು ಕೊಟ್ಟು ನಮ್ಮನ್ನು ಸಮರಭೂಮಿಗೆ ಕಳಿಸಿರಿ. ಬರ್ಚ-ಭಾಲೆಗಳಿ೦ದ ಚುಚ್ಚಿಸಿಕೊಳ್ಳುವ ಕ್ಕಿಂತ ಕಸಿವೆಯ ತೀವ್ರವಾದ ವೇದನೆಯು ನಮಗೆ ಅಸಹ್ಯವಾ ದೆ. ಬೇಗನೆ ನಮ್ಮನ್ನು ದುರಾಣಿ ಯ ಮೇಲೆ ಯುದ್ಧಕ್ಕೆ ಕಳಿಸಿರಿ. ಇನ್ನು ನಾವು ತಡೆಯಲಾರೆ ವು.” ಎಂದು ನುಡಿಯುತ್ತಿರಲು, ಭಾವುಸಾಹೇಬನ ಅಪ್ಪಣೆಯಂತೆ ಸೇವಕರು ಈ ಶರಿಯ ಪೋಷಾಕುಗಳನೂ, ವೀಳಯಗಳಿ೦ದ ತು೦ಬಿದ ತಬಕಗಳ ನೂ ತ೦ದಿ ಟ್ಟರು. ಬಳಿಕ ಭಾವುಸಾಹೇಬನು ಯಾವತ್ತು ನೀರನ್ನು ಕುರಿತು..... ವೀರರೇ, ನಮ್ಮ ಪರಾಕ್ರಮವನ್ನು ಪ್ರಕಟಿಸುವ ಸಮಯವು ಸವಿಾಪಿಸಿರುವದರಿಂದ, ಮಾತಾಡುತ್ತ ಕಾಲಕಳೆಯುವದು ವ್ಯರ್ಥವೇ ಸರಿ, ನಾಳೆ ಬೆಳಗಾಗುತ್ತಲೇ ರಣಭೂಮಿಗೆ ತೆರಳತಕ್ಕದ್ದು, ನಾಳಿನ ಯುದ್ಧದಲ್ಲಿ ನಾವು ಯಶಾಲಿಗಳಾಗೊ ಣ, ಇಲ್ಲವೆ ರಣಭೂಮಿಯಲ್ಲಿ ದೇಹವನ್ನಿ ಡೋಣ. ಇವೆರಡರಲ್ಲಿ ಒಂದು ನಿರ್ಣ ಯಕ್ಕೆ ಇನ್ನು ಇಪ್ಪತ್ತುನಾಲ್ಕು ತಾಸುಗಳ ಅವಕಾಶವು ಮಾತ್ರ ಉಳಿದಿರುವದು. ಸರಕಾರಿಯ ಉಗಾಣದೊಳಗಿನ ಕಾಳು-ಕಡಿಯಮೇಲೆ, ಹಾಗು ಮೇವು- ಮುಡಚಿ ಯಮೇಲೆ ಇದು ಎಲ್ಲ ಛಾವಣಿಯ ವರ ಅಧಿಕಾರವಿರುತ್ತದೆ. ಇಂದು ಛಾವಣಿ ಯಲ್ಲಿ ಉಪವಾಸವೆಂಬ ಶಬ್ದವು ಕಿವಿಗೆ ಬೀಳಲಾಗದು. ಎಲ್ಲರಿಗೂ ಸುಗ್ರಾಸ ಭೋಜನದ ವ್ಯವಸ್ಥೆ ಯಿಡಿಸುವದಕ್ಕಾಗಿ ಉಗ್ರಾಣದ ಅಧಿಕಾರಿಗಳಿಗೆ ಅಪ್ಪಣೆ ಯಾಗಿದೆ. ವೀರರೇ, ಇನ್ನು ಸ್ವತಃ ನಾನು ನಾಳೆ ಯುದ್ಧ ಮಾಡುವ ಸಂಬ :ಧ ದಿಂದ ಹೆಚ್ಚಿಗೆ ಮಾತಾಡುವದಿಲ್ಲ. ನಾಳಿನ ಸಂಗರದಲ್ಲಿ ನನ್ನ ಕೃತಿಯಿಂದ ಅದು ವ್ಯಕ್ತವಾಗುವದು. ನಿಮಗಾದರೂ ಕೃತಿಯಿಂದ ಪೌರುಷವನ್ನು ವ್ಯಕ್ತ ಮಾಡುವ ಸದ್ಭುದ್ಧಿಯನ್ನು ಪರಮೇಶ್ವರನು ಕೊಡಲಿ ! ನಳಿನ ಯುದ್ದದಲ್ಲಿ 'ಅರ್ಥ೦ವಾ ಸಾಧಯೇಶ್, ದೇಹಂವಾ ಪಾತಯೇತ್' ಎಂಬದು ನನ್ನ ದೃಢಸಂಕಲ್ಪವಾಗಿ