ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯d ಕುರುಕ್ಷೇತ್ರೆ? ರಿತನವೇಕೆ ? ಒಡಂಬಡಿಕೆಯಾಗುವಹಾಗಿಲ್ಲವೆ ? ಮುಸಲಾನರ ಒಲವು ಅಧಿಕವಾಗಿ ತಮ್ಮ ಗೇನಾದರೂ ಅಪಾಯವಾದರೆ ಪುಣಮವೇನಾದೀತು ? ಒರಿಯ ವ್ಯವಹೈ ಹೊ ಗುವಹಾಗಿಲ್ಲ, ಕೂಸಾದ ವಿಶ್ವಾಸವನ್ನೂ, ಆತನ ಹೆಂಡತಿಯನ್ನೂ ಸಂಗಡ ಕರಕೊಂಡು ಬಂದಿದ್ದೇವೆ. ಅತ್ತಿಗೆಯವರು ಮಗನನ್ನು ಕಳಿಸಲಾರದಾಗಿದ್ದರು; ಆದರೆ ನಿಮ್ಮ ಮಾತು ಮುರಿಯಲಾರದೆ ಕಳಿಸಿದರು. ಈ ಪ್ರಸಂಗದಲ್ಲಿ ದೇವರು ಮುನಿದರೆ ಎಂಥ ಅಪಕೀರ್ತಿಗೆ 'ಗುರಿಯಾಗಬೇಕಾದೀತಲ್ಲ ! ಅಪಕೀರ್ತಿಯ ಮಾತೂ ಹೋಗಲಿ, ಅಂಥ ದುರ್ಧರಪ್ರಸಂಗ ಒದಗಿದರೆ ಅಬಲೆಯರಾದ ನಮ್ಮ ಮರ್ಯಾದಾರಕ್ಷಣವು ಹ್ಯಾಗಾಗಬೇಕು ? ನೀವು ನಾಳೆ ಯುದ್ಧಕ್ಕೆ ಹೊರಡುವದೇ ನಿಶ್ಚಯವಿದ್ದರೆ, ಕೈಮುಟ್ಟಿ ನಮ್ಮನ್ನು ಸಂಹರಿಸಿ ಹೋಗಿಬಿ ಡಿರಿ. ನನ್ನ ಹಿಂದೆ ಅಳುವವರು ಯಾರಿರುವರು ? ನನ್ನ ಹೊಟ್ಟೆಯಲ್ಲಿ ಮಕ್ಕಳಿಲ್ಲ-ಮ" ಯಿಲ್ಲ, ನಿಮ್ಮದೊಂದು ಜೀವದಸಲುವಾಗಿ ನನ್ನ ಜೀವನವು; ಅಂದಬಳಿಕ ನಿಮ್ಮನ್ನು ದುರ್ಧರ ಸಂಕಟಕ್ಕೆ ಗುರಿಮಾಡಿ ನಾನು ಬದುಕಿ ಹ್ಯಾಗೆ ಉಳಯಲಿ ? ಭಾವುಸಾಹೇಬ-(ಗದ್ದವಹಿಡಿದುರಮಿಸುತ್ತ) ದೇವರ ದಯದಿಂದ ಅಂಥ ದುರ್ಧರ ಪ್ರಸಂಗವು ನಿಮ್ಮ ಪಾಲಿಗೆ ಬರಲೇಬೇಡ; ಆದರೆ ಪ್ರಿಯೇ, ಒಡಂಬಡಿಕೆ ಮಾಡಿಕೊಳ್ಳುವ ಹಾಗಿದ್ದರೆ ಇಷ್ಟು ಹೊತ್ತಿಗೆ ಮಾಡಿಕೊಳ್ಳುತ್ತಿದ್ದೆನು. ಅಣ್ಣನಮುಂದೆ ನಾನು ಆಡಿರುವ ಪೌರುಷದ ಮಾತುಗಳನ್ನು ನೆನಿಸಿಕೊಂಡರೆ, ನನ್ನ ಅಭಿಮಾನದ ಸ್ವಭಾವಕ್ಕೆ ಒಡಂಬಡಿಕೆ ಮಾಡಿಕೊಳ್ಳುವದು ಸೇರುವದಿಲ್ಲ. ಮೇಲಾಗಿ ಒಡಂಬಡಿಕೆ ಮಾಡಿಕೊಳ್ಳುವ ಕಾವ್ಯ ಮೀರಿಹೋಗಿದೆ. ಇನ್ನು, ವಿಶ್ವಾಸನ ಸಂಬಂಧದಿಂದ ನೀನಾಡುವ ಮಾತು ನಮ್ಮ ಬ್ರಹ್ಮ ಹೃದಯಕ್ಕೆ ಒಪ್ಪತಕ್ಕದ್ದೇ ಸರಿ; ಆದರೆ ಬ್ರಾಹ್ಮಣರಾದ ನಾವು ಕ್ಷಾತ್ರಧರ್ಮವನ್ನು ಕೈ ಕೊಂಡಿರುವೆವಲ್ಲವೆ ? ಈ ಯುದ್ಧದಲ್ಲಿ ಜಯವಾದರೆ ವಿಶ್ವಾಸನು ಆಸೇತು ಹಿಮಾಚಲ ಭರತಖಂಡದ ಸಾರ್ವಭೌಮ ಪದವಿ ಪಡೆಯಬಹುದಲ್ಲ ! ಅಂದಬಳಿಕ ಸಾರ್ವಭೌಮನಾ ಗುವವನು ಸಮರದಲ್ಲಿ ಒದಗಬಹುದಾಗಿರುವ ಮರಣಕ್ಕೆ ಸಿದ್ಧನಾಗಿರಲೇ ಬೇಕಲ್ಲವೆ ? ನೀನು ಪಾಂಡವಪ್ರತಾಪವನ್ನು ದಿನಾಲು ಓದುವೆಯಲ್ಲ ? ಅಭಿಮನ್ಯುವಿನ ಕಥೆಯು ಗೊ ತಿಲ್ಲವೆ ? ಸಾಕ್ಷಾತ್ ಭಗವದವತಾರವಾದ ಶ್ರೀ ಕೃಷ್ಣ ಪರಮಾತ್ಮನು ಅಭಿಮನ್ಯುವಿನ ಸೋದರಮಾವನು. ಮೂರುಲೋಕದ ಗಂಡನೆನಿಸುವ ಅರ್ಜುನನು ಅಭಿಮನ್ಯುವಿನ ತಂದೆ ಯು, ಹದಿನಾರು ಸಹಸ್ರ ಆನೆಗಳ ಬಲದ ಭೀಮಸೇನನು ಅಭಿಮನ್ಯುವಿನ ದೊಡ್ಡಪ್ಪ ನು; ಅಜಾತಶತ್ರುವನಿಸುವ ಧರ್ಮರಾಜನು ಅಭಿಮನ್ಯುವಿನ ಹಿತಚಿಂತಕನು, ಹೀಗಿದ್ದರೂ ಅಭಿಮನ್ಯುವಿಗೆ ಯುದ್ಧದಲ್ಲಿ ಮರಣವು ಯಾಕ ಒದಗಿತು ? ಕ್ಷಾತ್ರಧರ್ಮದ ಸ್ವರೂ ಪವೇ ಹಾಗಿರುವದು; ಆದ್ದರಿಂದ ನೀನು ಸಾಮಾನ್ಯ ಸ್ತ್ರೀಯಂತೆ ಶೋಕಿಸಲಾಗದು. ಈಗ ಒಡಂಬಡಿಕೆ ಮಾಡಿಕೊಂಡು ಕಳ್ಳತನದಿಂದ ಜೀವಉಳಿಸಿಕೊಂಡರೆ, ನಮಗೆ ಚಿರಂಜೀವಿ ಪದವಿಯು ದೊರೆಯುವದೋ ?' ಈ ನಾಶವಂತ ಜಗತ್ತಿನಲ್ಲಿ ಯಾವದು ಶಾಶ್ವತವು? ಈಗ ಸಂತವರೂ ಹೋಗಿರುವರು, ಕೌರವರೂ ಹೋಗಿರುವರು; ಅವರ ಕೀರ್ತಿಯು ಮಾತ್ರ ಉಳಿದಿರುವದು. ಅದರಂತೆ, ನಮ್ಮ ಮಹಾರಾಷ್ಟ್ರ ರಾಜ್ಯ ಸ್ಥಾಪಕರಾದ ಶಿವಾಜಿ