ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂತ:ಪುರವರ್ತಯು! ಮಹಾರಾಜರು ಈಗ ಉಳಿದಿರುವ ಅವರ ರಾಜ್ಯವನ್ನು ಬೆಳಿಸಿದ ನಮ್ಮ ಪ್ರತಾಪಾಲಿ, ಪಿತೃವರಾದ ಬಾಜಿರಾವಸಾಹೇಬರು ಬದುಕಿರುವ ? ಅದರಂತೆ, ಕಾತ್ರವತಿಯಿಂದ ಮೆರೆಯುತ್ತಿರುವ ನಿನ್ನ ಪತಿಯಾದ ಛಾವುವು ತನ್ನ ಅಣ್ಣನ ಮುಂದೆ ನುಡಿದಂತೆ ಕಾರ್ಯ ಮಾಡಿಯಾನು, ಇಲ್ಲವೆ ರಣಭೂಮಿಯಲ್ಲಿ ದೇಹವಿಟ್ಟು ಕೀರ್ತಿಶೇಷನಾದಾನು ? ಕ್ರಿಯೇ ನೀನು ಆ ಭಾವುವಿನ ಅರ್ಧಾಂಗಿಯಲ್ಲವೆ ? ಅಂದಬಳಿಕ ನಿನ್ನ ಯೋಗ್ಯತೆಗೆ ತಕ್ಕಂತೆ ಈಗ ನೀನು ಆಚರಿಸತಕ್ಕದ್ದು. ಇದು ಕಣ್ಣೀರು ಹಾಕುವ ಸಮಯವಲ್ಲ. ಭಾರತದೊಳಗಿನ ವೀರಪತ್ನಿಯರ ಉದ್ಧಾರಗಳನ್ನೂ, ಅವರ ಉಜ್ವಲಾಚರಣೆಗಳನ್ನೂ ನೆನಪಿಗೆ ತಂದುಕೊ ಳ್ಳು. “ ಮೇಲಾಗಿ ನೀನು ಯುದ್ದ ಕಲೆಯನ್ನು ಬಲ್ಲವಳಿರುವೆ. ಅಂಥ ಪ್ರಸಂಗವು ಒದಗಿ ದರೆ ನಮ್ಮ ಕಾಕಾಸಾಹೇಬರವರಾದ ಮಲ್ಲಾರರಾವ ಹೋಳಕರರವರು ನಿಮ್ಮ ಸಂರಕ್ಷಣ ದ ಜವಾಬುದಾರಿಯನ್ನು ಹೊತ್ತಿರುತ್ತಾರೆ; ಅಂದಬಳಿಕ ಅದರ ಚಿಂತೆಯೇಕೆ ? ವೈರಿಗಳ ಬಲಿಷ್ಟರಿದ್ದರೆ ನಾವೇನು ಬಲಹೀನರಿರುವೆವೇನು ? ಆ ಯವನರೊಡನೆ ಒಡಂಬಡಿಕೆ ಮಾಡಿ ಕೊಂಡು ಹಿಂದಿರುಗಿದರೆ ಅಣ್ಣನೇನು ಅಂದಾನು ? ಜನರೇನು ಅಂದಾರು ? ಅಕಸ್ಮಾತ್ ವಿಪರೀತ ಪ್ರಸಂಗವು ಒದಗಿದರೆ ನೆಟ್ಟಗೇ ಆಯಿತು. ಅದರಲ್ಲಿಯೇ ಮಹತ್ವವಿರು ವದು. ನಾವು ಹೋದರೆ ನಮ್ಮ ಪೇಶವೆಯವರ ವೀರವಂಶವೇನು ನಷ್ಟವಾದಂತಾಗಲಿಲ್ಲ! ನಮ್ಮ ತಲೆಮಟ್ಟ ಕಾರುವ ವೀರರು ನಮ್ಮಲ್ಲಿ ಈಗ ಇರುವರು, ಮುಂದೆ ಉತ್ಪನ್ನ ವಾಗಬಹುದು, ಈಮೇರೆಗೆ ಭಾವುಸಾಹೇಬನು ಆಡಿದ ಆವೇಶದ ಮಾತುಗಳನ್ನು ಕೇಳಿ, ವೀರಪತಿ. ಯಾದ ಪಾರ್ವತೀಬಾಯಿಯು ಸಮಾಧಾನತಾಳಿ ಪತಿಯನ್ನು ಕುರಿತು-ಅವಯ್ಯ ? ನಾನು ಮೋಹದ ಬಲೆಗೆ ಬಿದ್ದು ತಪ್ಪಿದನು, ಈ ಕಾತ್ರತೇಜಸ್ಸಿನ ಮಾತುಗಳಿಂದ ದುರ್ಬ ಲರೂ ಸಬಲರಾಗಬಹುದು ! ಮಹಾಮಹಾ ವೀರರೂ ಚರಣಗಳ ಪ್ರತಾಪಕ್ಕೆ ಅಂಜಿ ನಡೆ ಯುತ್ತಿರುವದೇನು ವ್ಯರ್ಥವೆ ? ನಾನು ಪರಮ ಧನ್ಯಳು. ನಾನು ಅಬಲೆಯಾದರೂ ತಮ್ಮ ಪಾಣಿಗ್ರಹಣದ ಪುಣ್ಯದಿಂದ ರಣಭೂಮಿಯಲ್ಲಿ ಸ್ವತಃ ಕಾದಲು ಉತ್ಸಾಹಗೊಂ ಡಿದ್ದೇನೆ. ಆದ್ದರಿಂದ ಹೋಳಕರನಿಗೆ ನಮ್ಮನ್ನು ಒಪ್ಪಿಸದೆ, ಸ್ವತಃ ನಿಮ್ಮ ಆನೆಗಳ ಹಿಂದಿನಿಂದಲೇ ನಮ್ಮ ಆನೆಗಳನ್ನು ಸಾಗಿಸಿಕೊಂಡು ನಾಳಿನ ಸಮರಭೂಮಿಯ ಪಯಣ ವನ್ನು ಬೆಳೆಸಬೇಕು. ಸತ್ಯಭಾಮೆಯು ಶ್ರೀ ಕೃಷ್ಣನಿಗೂ, ಕೈಕೇಯಿಯು ದಶರಥನಿಗೂ ರಣದಲ್ಲಿ ಸಹಾಯಮಾಡಿದಂತೆ ನಾನು ತಮಗೆ ಸಹಾಯಮಾಡುವ ಉತ್ಸಾಹವುಳ್ಳವಳಾ hರುವೆನು. ನನ್ನದಿಷ್ಟು ಮನೋದಯವನ್ನು ಸಫಲಗೊಳಿಸಬೇಕೆಂದು ಪ್ರಾರ್ಥಿಸುವನು. ಎಂದು ನುಡಿಯಲು, ಭಾವುಸಾಹೇಬನು-ಪ್ರಿಯೇ, ನಿನ್ನ ಮಾತು ಕೇಳಿ ಬಹಳ ಸಮಾ ಧಾನವಾಯಿತು, ಆದರೆ, ಸ್ತ್ರೀಯರಿಂದ ಸಹಾಯ ಪಡೆಯುವ ಪ್ರಸಂಗವು ನಮಗೆ ಬರಲೇ ಬೇಡ; ಆದರೂ ನಿನ್ನ ಇಚ್ಛೆಯಂತೆ ಮಾಡಬಹುದು,”ಎಂದು ಅಭಯವಿತ್ತನು, ಬಳಿಕ ಆ ವೀರದಂಪತಿಗಳು ಸಮಾಧಾನದಿಂದ ನಿದ್ದೆಹೋದರು ಇತ್ಯ ವಿಶ್ವಾಸರಾಯನೂ ತನ್ನ ಹೆಂಡತಿಯನ್ನು ಹೀಗೆಯೇ ವಿರೋಚಿತಭಾಷಣಗಳಿಂದ ಸಮಾಧಾನಗೊಳಿಸಿದನು. ಸಿಂಹದ