ಮೊದಲನೆಯ ಪರಿಚ್ಛೇದ ೧೦೪ WMwww MMwwwmyam ಅಕ್ಕ ! ನಾನು ಜತೆಯಲ್ಲಿರುವಾಗ ಭಯವೇನು ಬಂದದು ? ಅಕ್ಕ ! ನೀವೇನೋ ಒಂದು ವಿಧದವರಮ್ಮ ! ೨೨ ಎಂದು ಹೇಳಿದುದು ಕೇಳಿಸಿತು. ಕಮಲಾದೇವಿಯು ಕರ್ಣಾವತಿಯ ಕೈ ಹಿಡಿದುಕೊಂಡು ಒಳಗೆ ಬಂದು, “ ಮಹಾರಾಜರೆ ! ಇಷ್ಟರೊಳಗೆ ಇದೆಲ್ಲಾ ನಡೆದಿದೆ ! ನನಗೇನೂ ಗೊತ್ತಾಗಲಿಲ್ಲವಲ್ಲ ? ನೀವು ಹೇಳಬಾರದೆ, ಅಕ್ಕ !, ೨ ಎಂದಳು. ರಾಣಾ.ದೇವಿ! ವಿಜಯಪಾಲನ ಬಾಯಿಯಿಂದ ಎಲ್ಲಾ ಕೇಳಿದೆನು. ಅಭಿಮಾನವುಳ್ಳ ರಾಣಿಯು, “ ಅದೇನೋ ಕೇಳಿದೆವು. ಆದರೆ ಅದಕ್ಕೆ ಉಪಾಯವೇನು ಮಾಡಿದಿರಿ ? ಅದನ್ನು ಹೇಳಬೇಕು 39 ಎಂದಳು. (• ಯಾವುದಕ್ಕೆ ಉಪಾಯ ? 99 (• ಯಾವುದಕ್ಕೆ ಉಪಾಯವೆ ? ತಾವು ಅದನ್ನು ಇದುವರಿಗೂ ತಿಳಿದು ಕೊಳಲಾರದೆ ಹೋದಿರಾ ? ಅಕ್ಕ ! ಕೇಳಿದಿರಾ ! ನೀವು ಅವರನ್ನು ಬಹಳ ದೊಡ್ಡವರೆಂದು ಹೇಳಿದಿರಿ, ಅವರ ಬುದ್ದಿ ಯು ಮೊದಲು ಹೇಗೆ ಇದ್ದಿತೋ ಈಗಲೂ ಹಾಗೆಯೇ ಇದೆ ! ಮಹಾರಾಜರೆ ! ತಮ್ಮ ಅಂತಃಕರಣಗಳಲ್ಲಿ ಸ್ವಲ್ಪವೂ ಮಮತೆಯನ್ನು ವುದೇ ಬೇಡವೆ ? ನಮ್ಮ ಮಗು ಅಮರ, ಒಂದು ವರ್ಷಕಾಲ ಅನುಭವಿಸಿರುವ ಕಷ್ಟವನ್ನು ಹೇಳಿ ತೀರುವುದೆ ? ಇಷ್ಟು ಕಾಲದ ಮೇಲೆ ಕೈಬಿಟ್ಟು ಹೋಗಿದ್ದ ರತ್ನ ವು ಸಿಕ್ಕಿದ ಬಳಿಕ ಅವನ ಆಶೆಯನ್ನು ಪೂರ್ತಿ ಗೊಳಿಸಿಕೊಡಬಾರದೆ ? ಅಕ್ಕನವರು ಹೇಳುವ ಹಾಗೆ ಬ್ರಹ್ಮನು ಗಂಡಸರ ಮನಸ್ಸನ್ನು ಕಲ್ಲಲ್ಲಿ ಕಡೆದು ಮಾಡಿದ್ದಾನೆ, ಅದರ ಮಾತು ಹಾಗಿರಲಿ, ನಿಮಗೆ ಖಂಡಿತವಾಗಿ ಹೇಳುತ್ತೇನೆ. ಸಾಧ್ಯವಾದಷ್ಟು ಜಾಗ್ರತೆಯಾಗಿ ಅಮರನಿಗೆ ಅಂಬರದ ರಾಜಕುಮಾರಿ ಅ೦ಬಾಲಿಕೆಯನ್ನು ಕೊಟ್ಟು ಮದುವೆ ಮಾಡಿ ಬಿಡಬೇಕು, 99 ರಾಣಾ-ಹಾಗಾದರೆ ಒಂದು ಮದುವೆಯು ಸಾಂಗವಾಗಿ ಪೂರೈಸು ವುದಕ್ಕೆ ಮೊದಲು ಮತ್ತೊಂದು ಮದುವೆಗೆ ಪ್ರಯತ್ನ ಮಾಡುವುದು ನಿಮ್ಮ ಇಷ್ಟವೆ ? << ಅದು ನನ್ನ ತಪ್ಪು, ನಾನು ಬಲವಂತವಾಡಿ ವಿಕ್ರಮಸಿಂಹನ ಮಗಳನ್ನು ತಂದುಕೊಂಡು ಮದುವೆಮಾಡಿದೆ. ಆಗ ಅಮರನು ರಾಜಸಮುದ್ರದ ಕಟ್ಟೆಯಮೇಲೆ ಜಯಪುರದ ರಾಜಕುಮಾರಿಯನ್ನು ನೋಡಿದ್ದನೆಂದು, ಈ
ಪುಟ:ಕೋಹಿನೂರು.djvu/೧೧೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.