ಎರಡನೆಯ ಪರಿಚ್ಛೇಜ wwwnh ಸನ್ನು ರಾಜಮಹಿಷಿ ಅರುಂಧತಿದೇವಿಯ ಬಳಿ ಹೋಗಿ, ಇದ್ದ ವಿದ್ಯಮಾನಗಳ ನೈಲಾ ಅರುಹಿದನು. ರಾಜಕುಮಾರಿ ಆಂಬಾಲಿಕೆಯ ಅಲ್ಲಿದ್ದಳು. ರಾಜ ಮಹಿಷಿಯು “ ಎಲ್ಲರಿಗಿಂತ ಶ್ರೇಷ್ಟ ನೀರನಾರೋ ಅಂತಹವನಲ್ಲಿ ನಮ್ಮನ್ನೆಲ್ಲಾ ರಕ್ಷಿಸುವ ಭಾರವನ್ನಿಡಬೇಕು ೨೨ ಎಂದು ಹೇಳಿದಳು, ಆದರೆ ಶ್ರೇಷ್ಠ ವೀರನಾ ರೆಂಬುವುದನ್ನು ನಿರ್ಧರಿಸುವ ಬಗೆ ಹೇಗೆ ? - ಪ್ರಭಾತದಲ್ಲಿ ದುರ್ಗದಿಂದ ಅರ್ಧ ಹರಿದಾರಿಯ ದೂರ ಕೆಳಗೆ ನದಿಗೆ ಅತ್ತ ಕಡೆಯ ಪಾರ್ಶ್ವದಲ್ಲಿ ಶಿಬಿರವು ಸ್ಥಾಪಿತವಾಗಿದೆ. ದುರ್ಗದ ಮಧ್ಯದಲ್ಲಿ ಎತ್ತರವಾದ ಶೈಲಶೃಂಗದಮೇಲೆ ರಕ್ತ ಬಣ್ಣದ ಬಾವಬೆಯು ಹಾರುತ್ತಿದೆ. ಶಿಬಿ ರಕ್ಕೆ ಸಮೀಪ ಒಹು ಜನರ ಗುಂಪು ಸೇರಿದೆ. ಎಲ್ಲರೂ ಉತ್ಸುಕನಯನರಾಗಿ, ದೂರದಲ್ಲಿ ಬೆಟ್ಟದ ತಿಖರದ ಮೇಲೆ ಪಕ್ಷಿಯಹಾಗೆ ಗಾಳಿಗೆ ಹಾರುತಿದ್ದಾ ರಕ್ತ ಬಣ್ಣದ ಬಾವಟೆಯನ್ನು ನೀಡುತ್ತಾರೆ. ಎಲ್ಲರೆದುರಿಗೆ ರಾಠೋರಸೇನಾಪತಿ ದುರ್ಗಾದಾಸನು ನಿಂತಿದ್ದಾನೆ. ದುರ್ಗದ ಮೇಲುಗತೆ ರಮಣೀಯರೆಲ್ಲರೂ ನಿಂತು ಕುತೂಹಲದಿಂದ ಶಿಬಿರವನ್ನು ನೋಡುತಿದ್ದಾರೆ. ವಿಜಯಪಾಲನು ಅಶ್ವಾರೋಹಿಯಾಗಿ ದುರ್ಗಾದಾಸನ ಬಳಿ ಬಂದು ಅಫೀಮಿನ ಸೇವನೆಯಿಂದ ಕೆಂಪಾಗಿದ್ದ ಕಣ್ಣುಗಳಿಂದ ನಾಲ್ಕು ಕಡೆಯ ನೋಡಿದನು. ದುರ್ಗಾದಾಸನು ಉಡ್ಡಗಂಭೀರ ಸ್ವರದಿಂದ ಹೀಗೆಂದು ಹೇಳಿದನು. * ಕೇಳಿರಿ-ರಾಜಸ್ಥಾ ನದ ರಾಜವಂಶದಲ್ಲಿ ಹುಟ್ಟಿರುವ ವೀರಶ್ರೇಷ್ಟರುಗಳಿರಾ ! ನಾನು ದುರ್ಗದಲ್ಲಿಲ್ಲ ದಿರುವಾಗ ರಮಣಿಯರನ್ನೂ ರಾಜಮಹಿಷಿಯರನ್ನೂ ರಾಜಕುಮಾರಿಗಳನ್ನೂ ನೋಡಿಕೊಂಡಿರುವ ಭಾರವನ್ನು ವೀರಶ್ರೇಷ್ಠನಾದ ವಿಜಯಪಾಲನ ಮೇಲೊಪ್ಪಿಸಿ ಹೋಗಬೇಕೆಂದು ಯೋಚಿಸಿದ್ದೆನು, ಆದರೆ ಅದಕ್ಕೆ ಆಕ್ಷೇಪವುಂಟಾದುದರಿಂದ ತಾವುಗಳು ಇಂದಿನ ಈ ವೀರಪ್ರದರ್ಶಿನಿಗೆ ಬರಬೇಕೆಂದು ಕೇಳಿಕೊಂಡೆನು. ಪರ್ವತದ ಶೃಂಗದಮೇಲೆ ಕಾಣುವ ರಕ್ತ ಬಣ್ಣದ ಪತಾಕವನ್ನು ಎಲ್ಲರಗಿಂತ ಮೊದಲು, ರಾಚಾ ವಿಜಯಪಾಲನಿಗೆ ಮೊದಲು, ಯಾರು ಹೋಗಿ ಸ್ವಹಸ್ಯ ದಿಂದೆತ್ತಿ ಹಿಡಿಯುವರೋ ಅಂತಹವರು ಈ ವೀರಪ್ರದರ್ಶನಿಯಲ್ಲಿ ಸರ್ವಾಪೇ ಕ್ಷಯ ವೀರಶ್ರೇಷ್ಟರೆಂದು ಪರಿಗಣಿತರಾಗಿ, ಕುಮಾರ ವಿಜಯಪಾಲನು ದುರ್ಗದ ರಕ್ಷಣೆಯ ಅಧಿಕಾರದಿಂದ ತಪ್ಪಿಸಲ್ಪಡುವನು, ನಿಮ್ಮಲ್ಲಾರಾದರೂ ಅಂತಹ ವೀರರು ವಿಜಯಶಾಲನಿಗೆ ಪ್ರತಿಯೋಗಿಗಳಾಗಿ ಜಯವನ್ನು ಹೊಂದಲಿಷ್ಟವುಳ್ಳ
ಪುಟ:ಕೋಹಿನೂರು.djvu/೬೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.