೬೯ ಎರಡನೆದು ಭಾಗ. ಅವನು ಶೈವಲಿನಿಯೆಂಬ ಪತಂಗಕ್ಕೆ ಜ್ವಲಂತವಾದ ವ ಸ್ವರೂಪನಾಗಿದ್ದಾನೆ -ಅವನು ಈ ಸಂಸಾರವೆಂಬ ಪಂತರದಲ್ಲಿ ನನ್ನ ಪಕ್ಷಕ್ಕೆ ಪ್ರಥಮವಿದ್ಯುತ್ತಿನ ಸ್ವರೂಪನು ಅವನು ನನಗೆ ಮೃತ್ಯು, ನಾನು ಗೃಹವನ್ನು ತ್ಯಾಗಮಾಡಿದೆನೇತಕ್ಕೆ ? ಮೇಚ್ಛನ ಸಂಗಡ ಬಂದೆನೇತಕ್ಕೆ ? ಸುಂದರಿಯ ಸಂಗಡ ಹಿಂದಿರುಗಿ ಹೋಗಲಿಲ್ಲವೇತಕ್ಕೆ ? ಎಂದು ಭಾವಿಸಿಕೊಳ್ಳುತ್ತಿದ್ದಳು. ಶೈವಲಿನಿದು ಕೈಯಿಂದ ತಲೆಯನ್ನು ಹೊಡೆದುಕೊಂಡು ಕಣ್ಣೀರು ಬಿಡಲಾರಂಭಿ ಸಿದಳು, ವೇದಗಾಮದಲ್ಲಿ ತನ್ನ ಸ್ವಂತ ಮನೆಯು ಜ್ಞಾಪಕವು ಬಂದಿತು, ಅಲ್ಲಿ ಮನೆಯ ಗೋಡೆಯ ಬತ್ತಿಗೆ ತಾನೇ ಸ್ವಂತವಾಗಿ ಬಂದು ಕಬರೀವೃಕ್ಷವನ್ನು ಹಾಕಿ ಬೆಳೆಯಿಸಿ ದಳು. ಆ ಕಬರೀವೃಕ್ಷವು ಬಹಳ ದೊಡ್ಡದಾಗಿ, ಗೋಡೆಗಿಂತಲೂ ಎತ್ತರವಾಗಿ, ರಕ್ತವ ರ್ಣವುಳ್ಳ ಪುಪ್ಪಗಳನ್ನು ಧರಿಸಿ ನೀಲಾಕಾಶವನ್ನು ಆಕಾಂಕ್ಷಿಸುತ್ತಿರುವಾಗ ಭ್ರಮರ ಗಳ ಚಿಕ್ಕ ಚಿಕ್ಕ ಪಕ್ಷಿಗಳ ಬಂದು ಕೂಡುತಲಿದ್ದುದು ಜ್ಞಾಪಕಕ್ಕೆ ಬಂದಿತು, ತುಲ ನಿಯಕಟ್ಟೆ-ಅದರ ನಾಲ್ಕು ಪಾರ್ಶ್ವಗಳಲ್ಲಿ ಸಾರಿಸಿ, ಗುಡಿಸಿ, ರಂಗವಲ್ಲಿಯಿಂದಲಂಕೃತ ವಾದ ಪರಿಷ್ಕಾರವಾದ ನೆಲ, ಮನೆಯಲ್ಲಿ ಸಾಕಿದ ಮಾರ್ಜಾಲ, ಏಂಜರದಲ್ಲಿ ಸ್ಪುಟವಾದ ವಾಕ್ಕುಳ ಪಕ್ಷಿ; ಗೃಹದ ಪಾರ್ಶ್ವದಲ್ಲಿಯೆ ದೊಡ್ಡದಾದ ಶೀಮಾವಿನ ಮರ-ಇವೆಲ್ಲಾ ಸ್ಮರ ಣಪಟದಲ್ಲಿ ಚಿತ್ರಿತವಾಗಲಾರಂಭಿಸಿದವು. ಎಷ್ಟೆಷ್ಟೊ ಏನೇನೋ ಜ್ಞಾಪಕಕ್ಕೆ ಬಂದಿತು ! ಎಂತಹ ಸುಂದರವಾದ ಸುನೀಲವಾದ ಮೇಘಶೂನ್ಯವಾಗಿ ನಿರ್ಮಲವಾದ ಆಕಾಶವನ್ನು ಕೈವಲಿನಿಯು ಅಂಗಳದಲ್ಲಿ ಕುಳಿತುಕೊಂಡು ನೋಡುತಲಿದ್ದಳು ! ಎಂತಹ ಸುಗಂಧ ವುಳ ಪ್ರಸ್ಸುಟತವಾದ ಧವಳ ಕುಸುಮಗಳನ್ನು ಪರಿಷ್ಕಾರವಾಗಿ ನೀರು ತಳಿದು ಚಂದ್ರ ಶೇಖರನ ಪೂಜೆಗೋಸ್ಕರ ಪುಷ್ಪಪಾತದಲ್ಲಿ ತುಂಬಿ ಸಿದ್ಧಪಡಿಸುತಲಿದ್ದಳು ! ಎಂತಹ ೩ಗ್ಗ ಕರವಾದ ಸುಗಂಧವಾಹಿಯಾದ ಮಂದಮಾರುತವನ್ನು ಭೀಮಾಪುಷ್ಕರಿಣಿಯ ತಟ ದಲ್ಲಿ ಸೇವನೆಮಾಡುತಲಿದ್ದಳು ! ಜಲದಲ್ಲಿ ಚಿಕ್ಕಚಿಕ್ಕ ಅಲೆಗಳು ಹೇಗೆ ಸ್ಪಟಿಕದಹಾಗೆ ಒಡೆದು ಬಿದ್ದು ಏಳುತಲಿದ್ದವು ! ಆ ಪುಷ್ಕರಿಣಿಯ ತೀರದಲ್ಲಿ ಎಷ್ಟು ಕೋಕಿಲೆ ಗಳು ಕೂಗುತಲಿದ್ದವು ! -ಇವೆಲ್ಲಾ ಸ್ಮರಣೆಗೆ ಬಂದು ಪುನಃ ಶೈವಲಿನಿಯು ಯೋಚ ನೆಯ ಪ್ರವಾಹದಲ್ಲಿ ಬಿದ್ದವಳು, ನಾನು ಮನೆಯನ್ನು ಬಿಟ್ಟು ಹೊರಗೆ ಹೋದರೆ ಪ್ರತಾಪನನ್ನು ಕಾಣುವೆನೆಂದು ತಿಳಿದಿದ್ದೆನು; ಪುನಃ ಪ್ರತಾಪನ ಮನೆಗೆ ಸವಿಾಪವಾಗಿ. ರುವ ಪುರಂದರಪುರದ ಕೋಣೆಗೆ ಹೋಗಿ, ಅಲ್ಲಿ ಕೋಠಿಯ ಗವಾಕ್ಷದಲ್ಲಿ ಕಟಾಕ್ಷಜಾಲ ವನ್ನು ಹರಡಿ ಪ್ರತಾಪಪಕ್ಷಿಯನ್ನು ಹಿಡಿಯುವೆನೆಂದು ತಿಳಿದಿದ್ದೆನು. ಸಮಯ ನೋಡಿ ಕೊಂಡಿದ್ದು, ಕೋಠಿಯು ಫಿರಂಗಿದವನಿಗೆ ರಕ್ಕರುಕೊಟ್ಟು ಓಡಿಹೋಗಿ, ಪ್ರತಾಪನ ಪಾದಗಳ ಮೇಲೆ ಬಿದ್ದು ಹೊರಳಾಡುವೆನೆಂದು ತಿಳಿದಿದ್ದೆನು, ನಾನು ಪಂಜರದ ಪಕ್ಷಿ, ಪ್ರಪಂಚದ ರೀತಿಯನ್ನು ಸ್ವಲ್ಪವೂ ಕಂಡವಳಲ್ಲ. ಮನುಷ್ಯನ ಯೋಚನೆಯೇ ಬೇರೆ, ದೈವಘಟನೆಯೇ ಬೇರೆ ಎಂಬುದನ್ನು ನಾವೂ ಅರಿತಿರಲಿಲ್ಲ. ಇಂಗ್ಲೀಜರ ಸಂಜರವು ಲೋಹನಿರ್ಮಿತವಾದುದೆಂದು ನನಗೆ ಗೊತ್ತಿರಲಿಲ್ಲ. ಆ ಪಂಜರವನ್ನು ಒಡೆಯುವುದು
ಪುಟ:ಚಂದ್ರಶೇಖರ.djvu/೭೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.