ಚಂಡ ಶೇಖರ. ನನ್ನಿಂದ ಸಾಧ್ಯವಾದೀತೆ ? ವ್ಯರ್ಥವಾಗಿ ಕಳಂಕವನ್ನು ತಂದುಕೊಂಡೆನು, ಜಾತಿಯನ್ನು ಕಳೆದುಕೊಂಡೆನು. ಮುಂದಿನಗತಿಯನ್ನು ನಮ್ಮಮಾಡಿಕೊಂಡೆನು ಎಂದು ತನ್ನೊಳು ತಾನೇ ಹೇಳಿಕೊಂಡಳು. ಪಾಪಿಷ್ಠೆಯಾದ ಕೈವಲಿನಿಯು ಪಾಪಕ್ಕೆ ಪ್ರತ್ಯೇಕಪ್ರತ್ಯೇ ಕವಾಗಿ ಅನರ್ಥಕತೆ ಮತ್ತು ಸಾರ್ಥಕತೆ ಉಂಟೆ ? ಎಂಬುದನ್ನು ತಿಳಿದು ಯೋಚಿಸ ಲಾರದೆ ಹೋದಳು, ಅದಕ್ಕೆ ಅನರ್ಥಕತೆಯುಂಟಾಗುವುದೇ ಒಳ್ಳೆಯದು, ಆದರೆ ಅವಳು ಇದನ್ನು ಒಂದು ದಿನವಿಲ್ಲದಿದ್ದರೆ ಮತ್ತೊಂದು ದಿನ ತಿಳಿಯುವಳು. ಆಗವಳು ಅದರ ಪ್ರಾಯಶ್ಚಿತ್ತಕೊಸ್ಕರ ತನ್ನ ದೇಹದ ರಕ್ತವನ್ನೂ ಒಪ್ಪಿಸಲು ಸಿದ್ದ ವಾ ಗುವಳು. ಆಯೊಂದು ಕಡೆ ಆಶೆಯಿಲ್ಲದಿದ್ದರೆ ನಾವು ಈ ಪಾಪಚರಿತ್ರೆಯ ಅವತಾ ರಣೆಯನ್ನು ಬರೆಯುತ್ತಿರಲಿಲ್ಲ. ಅವಳು ಪ್ರನಃ ಯೋಚನೆಗೆ ಬಿದ್ದಳು :- « ಮುಂ ದಿನ ಗತಿಯೇ ? ದಾವದಿನ ಪ್ರತಾಪನನ್ನು ನೋಡಿದೆನೊ ಆದಿನವೇ ಅದು ಹೋಯಿತು. ದಾವನು ಅಂತ ಕರ್ರಾಮಿಯಾಗಿದ್ದಾನೆ ಅವನು ಅಂದೇ ನನ್ನ ಹಣೆಯಲ್ಲಿ ನರಕ ವನ್ನು ಬರೆದಿಟ್ಟಿದ್ದಾನೆ. ಸರಕಾಲದಲ್ಲಿ ಹೇಗೆ ನರಕವೋ ಹಾಗೆಯೇ ಇಹಕಾಲದಲ್ಲಿದ ನನಗೆ ನರಕವುಂಟಾಗಿದೆ. ನನ್ನ ಮನಸ್ಸೇ ನರಕ, ಹಾಗಿಲ್ಲದಿದ್ದರೆ ನನಗೆ ಇಷ್ಟು ದುಃಖ ವುಂಟಾಗುತಲಿದ್ದು ದೇತಕ್ಕೆ ? ಹಾಗಿಲ್ಲದಿದ್ದರೆ ಈ ಎರಡು ಕಣ್ಣುಗಳಿಗೂ ವಿಪಸ್ಸರೂಪ ವಾದ ಫಿರಂಗಿಯವನ ಸಂಗಡ ಇಷ್ಟು ದಿನ ಅಲೆಯುತ್ತಿದ್ದೆ ನೇತಕ್ಕೆ ? ಅಷ್ಟೇ ಅಲ್ಲನನಗೆ ಸ್ವಲ್ಪ ಒಳ್ಳೆಯದೆಂದು ಇದ್ಭುದಕ್ಕೂ ಬೆಂಕಿಬಿದ್ದು ಹೋಯಿತು. ನನಗೋಸ್ಕ ರವೇ ಪ್ರತಾಪನಿಗೆ ಈ ವಿಪತ್ಯುಂಟಾಯಿತೆಂದು ತೋರುತ್ತದೆ.ನಾನು ಸಾಯಲಿಲ್ಲವೇ ತಕ್ಕೆ ? ಎಂದು ಯೋಚಿಸಿಕೊಂಡಳು. ಕೈವಲಿನಿಯು ಪುನಃ ಅಳುವುದಕ್ಕೆ ತೊಡಗಿದಳು. ಸ್ವಲ್ಪ ಹೊತ್ತಿನಮೇಲೆ ಕಣ್ಣೆ ರಿಸಿಕೊಂಡಳು. ಹುಬ್ಬು ಗಂಟುಹಾಕಿಕೊಂಡಳು. ಅಧರವನ್ನು ದಂಶನ ಮಾಡಿದಳು. ಸ್ವಲ್ಪ ಹೊತ್ತು ಅವಳ ಪ್ರಫುಲ್ಲವಾದ ರಾಜೇವಸದೃಶ ಮುಖವು ಕೋಪಗೊಂಡ ಸರ್ಪದ ಹೆಡೆಯಹಾಗೆ ಭಯಂಕರವಾದ ಕಾಂತಿಯನ್ನು ಧಾರಣಮಾಡಿತು-ಅವಳು ಪುನಃ, ನಾನು ಸಾದುಲಿಲ್ಲವೇತಕ್ಕೆ ? ಎಂದಂದುಕೊಂಡು ಇದ್ದಕ್ಕಿದ್ದಹಾಗೆ ಕಂಕುಳಲ್ಲಿದ್ದ ಜೋಳಿಗೆ ಯನ್ನು ತೆಗೆದು ಅದರಲ್ಲಿದ್ದ ಒಂದು ಹರತವಾದ ಚಿಕ್ಕ ಚೂರಿಯನ್ನು ತೆಗೆದುಕೊಂಡು ಅದರ ಅಲಗನ್ನು ತೆಗೆದು ಕೈಯಲ್ಲಿ ಹಿಡಿದು ಅಲಗನ್ನು ಬೆರಳಿನಿಂದ ಅರ್ಧವುಚ್ಚಿ ಪುನಃ ತೆಗೆಯುತ್ತ, ಈ ಚೂರಿಯನ್ನು ಏತಕ್ಕೆ ವ್ಯರ್ಥವಾಗಿ ಜೋಪಾನಮಾಡಿಟ್ಟು ಕೊಂಡೆನು ? ಇದುವರೆಗೂ ಇದರಿಂದ ಈ ಸುಡುವ ಎದೆಯನ್ನು ಇರಿದುಕೊಳ್ಳಲಿಲ್ಲವೇ ತಕ್ಕೆ ? ಕೇವಲ ಆಕೆಯಲ್ಲಿ ಮುಣುಗಿ ಹಾಗೆಮಾಡಲಿಲ್ಲವಲ್ಲವೆ ? ಈಗಲೋ ? ಹೀಗೆಂದು ಹೇ ಕೊಂಡು ಕೈವಲಿಗಿದು ಚೂರಿಯ ಅಲಗಿನ ಅಗ್ರಭಾಗವನ್ನು ಹೃದಯದಲಿ ಟ್ಟುಕೊಂಡಳು. ಅದು ಹಾಗೆಯೇ ಇರುತ್ತೆ ಪುನಃ, ಇನ್ನೊಂದು ದಿನವಾಗಲಿ, ಚೂರಿ ದುನ್ನು ಹೀಗೆಯೇ ನಿದ್ರೆ ಮಾಡುತ್ತಿದ್ದ ಫಾಸ್ಟರನ ಎದೆಗೆ ಹಿಡಿದಿದ್ದೆನು, ಆದಿನ ಅವೆ ನನ್ನು ಹೊಡೆದುಹಾಕಲಿಲ್ಲ-ಧೈರ್ಯವುಂಟಾಗಲಿಲ್ಲ. ಇಂದೂ ಆತ್ಮಹತ್ಯೆಯನ್ನು ಮಾಡಿ
ಪುಟ:ಚಂದ್ರಶೇಖರ.djvu/೭೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.