ದಕ್ಷಯಾಗವು ೧೫೩ ಬರುವನೆಂಬ ಸುದ್ದಿಯನ್ನು ಕೇಳಿ, ಬಹು ಸಂತೋಷದಿಂದ ತಮ್ಮ ತಮ್ಮ ಪಟ್ಟಣವನ್ನೆಲ್ಲ ಗುಡಿ ತೋರಣ ಮೊದಲಾದುವುಗಳಿಂದಲಂಕರಿಸಿ, ಕಲಶ ಕನ್ನಡಿಗಳನ್ನು ಹಿಡಿದ ಮುತ್ತೈದೆಯರೊಡಗೂಡಿ ಬಂದು ಇದಿರೊಂಡು, ಬಹು ಸಂಭ್ರಮದಿಂದ ಮನೆಗೆ ಕರೆದುಕೊಂಡು ಹೋಗಿ ಉಚಿತಾಸನ ದಲ್ಲಿ ಕುಳ್ಳಿರಿಸಿ, ಅತ್ಯಂತ ಭಕ್ತಿಯಿಂದ ಅರ್ಘಪಾದ್ಯಾಚಮನಗಳನ್ನಿತ್ತು ಸತ್ಕರಿಸಿದರು, ಹೆಣ್ಣು ಮಕ್ಕಳು ತಮ್ಮ ತಂದೆಯು ಬಹುದಿನಕ್ಕೆ ಬಂದ ನೆಂಬ ಆನಂದದಿಂದ ಉಬ್ಬಿ ಸಂತೋಷಾಶ್ರುಗಳನ್ನು ಕಣ್ಣಿನಲ್ಲಿ ತಂದು ಪಿತೃವಿನ ಬಳಿಗೆ ಬಂದು ಪಾದಕ್ಕೆ ನಮಸ್ಕರಿಸಿದರು. ದಕ್ಷನು ಅವರಿಗೆ ಆಶಿರ ದಿಸಿ, ವಾತ್ಸಲ್ಯದಿಂದ ಎತ್ತಿ ತಬ್ಬಿ, ಅವರಿಗಾಗಿ ತಂದಿದ್ದ ವಸ್ತು ಭವಣಾದಿಗಳನ್ನು ಕೊಟ್ಟು, ಕೆಲ ಕೆಲ ದಿನ ಅವರ ಮನೆಯಲ್ಲಿದ್ದು ಆತನ ಉಡುಗೊರೆಗಳನ್ನು ಮಾಡಿಸಿಕೊಂಡು, ಸಂತೋಷಪಟ್ಟು, ಬಳಕ (ಈ ಅಳಿಯಂದಿರ ಮನೆಯಲ್ಲೆಲ್ಲ ಸತ್ಕಾರಗೊಂಡುದಾಯಿತು. ಇನ್ನೊಬ್ಬ ಮಗಳ (ಶಿವನ ಹೆಂಡತಿ ದ್ರಾ ಯಣಿಯ) ಮನೆ ಯಿರುವುದು, ಅಲ್ಲಿಗೂ ಹೋದರೆ ಇವೆಲ್ಲಕ್ಕಿಂತಲೂ ಅತಿಶಯವಾದ ಮರಾದೆಯು ನಡೆಯಬಹು ದು ” ಎಂದು ಯೋಚಿಸಿ, ಅಲ್ಲಿಂದ ಹೊರಟು ಕೈಲಾಸದ ಕಡೆಗೆ ತೆರಳಿ ದನು. ಸಕಲ ವಿಧವಾದ ಪುಣ್ಣದ ಬೆಳಕಿನ ಕೊಟ್ಟಾರವೋ, ವೇದಾಗಮ ಪುರಾಣಾರ್ಥಗಳ ಮಂದಿರವೋ, ಶಿವಯೋಗಾನಂದ ಸಮುದ್ರವೋ, ಸರ ಮುನಿಶ್ರೇಷ್ಟರ ತಪಃಫಲದ ಆವಾಸಭೂಮಿಯೂ, ಸಕಲ ಗ್ರಹನಕ್ಷತಾ ದಿಗಳ ತೆಜೋಮಂದಿರವೋ, ಸಕಂ ನಿಪ್ಪಲವಾದ ಪರತತ್ವದ ರಾಜ ಗೃಹವೋ ಎಂಬಂತಿರುವ ಶಿವಲೋಕವು ದಕ್ಷನ ಕಣ್ಣಿಗೆ ಕಾಣಿಸಿತು. ಇಂದ್ರಾದಿದಿಕ್ಕಾಕರ ಮತ್ತೂ ಅನಂತಬ್ರಹ್ಮ ವಿಷ್ಣಾದಿಗಳ ವಾಹನಗ ಳಾದ ಬಿಇಯಾನ ತಗರು ಕೊಣ ಮೊದಲಾದವೂ, ಹಂಸಗರುಡಗಳೂ, ಲೆಕ್ಕವಿಲ್ಲದಷ್ಟು ಸಾಲುಸಾಲಾಗಿ ಪಟ್ಟಣದ ಹೊರಗೆ ಕಟ್ಟಿರುವುದನ್ನು ನೋ ಡಿ, ಅಳೆಯನ ಅಪರಿಮಿತೈಶ್ವರಕ್ಕೆ ಬೆರಗಾದನು. ಆ ಪಟ್ಟಣದ ಕೋ ಟೆಬಾಗಿಲಿಂದ ಹೋಗಿಬರುತ್ತಿರುವವರಲ್ಲಿ ಎತ್ತನೋಡಿದರೂ ಐದುವೆ ಗದವರು ಹತ್ತು ತೋ೪ನವರು ಹಣೆಗಣ್ಣಿನವರು ಸದ್ಘಾಭರಣರು ಚಂ ದಶೇಖವರುಗಳು ಅನಂತವಾಗಿ ಕಾಣಿಸುತ್ತಿದ್ದ ರು. 20
ಪುಟ:ಚೆನ್ನ ಬಸವೇಶವಿಜಯಂ.djvu/೧೬೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.