• ಕಥಾರಂಭವು. ಇದಾಗಿರುವುದು, ಇದರಲ್ಲಿರುವ ಏಳು ದೀಪಗಳನ್ನು & ಸಮುದ್ರಗ ಳು ಚಕ್ರಾಕಾರವಾಗಿ ಆವರಿಸಿಕೊಂಡಿರುವುವು, ಅವುಗಳಲ್ಲಿ ಲವಣಸಮು ದ್ರವು ಈ ಜಂಬೂದ್ವೀಪವನ್ನು ಸುತ್ತಿಕೊಂಡಿರುವುದು, ಆ ಸಮುದ್ರವಾ ದರೋ, ವಿಾನು, ಮೊಸಳೆ, ಹಾವು, ಆಮೆ, ಏಡಿ ಮೊದಲಾದ ನಾನಾಜಲಚ ರಪ್ರಾಣಿಗಳಿಂದಲೂ, ಮುತ್ತು ಹವಳ ಮೊದಲಾದ ನಾನಾರತ್ನಗಳಿಂದಲೂ ಸುಳ, ತೆರೆನೊರೆಗಳಿಂದಲೂ, ದೋಣಿಗಳಿಂದಲೂ ಹಡಗುಗಳಿಂದಲೂ ಕೂ ಡಿ ಅಪಾರವಾಗಿ ಮೆರೆಯುತ್ತಿರುವುದು.ಆಸಮುದ್ರದ ನೀರು ಒಂದೊಂದುವೇ ೪ ಹೆಜ್ಜಿ ಉಬ್ಬುತ್ತಲೂ ಒಂದೊಂದುವೇಳೆ ತಗ್ಗೆ ಸರಿಯುತ್ತಲೂ ಇರುವು ದನ್ನು ನೋಡಿದರೆ, “ ತನಗೆ ಮಹಾವಿಷ್ಣುವೇ ಅಳಿಯನು, ಬ್ರಹ್ಮನೇ ಮ ಮೃಗನು, ಲಕ್ಷ್ಮಿಯೇ ಮಗಳು, ದೇವಗಂಗೆಯೇ ಪತ್ನಿಯು, ದೇವತೆಗ ಳನ್ನು ತನ್ನ ಅಮೃತದಿಂದ ಸಲಹುವ ಚಂದ್ರನೇ ತನ್ನ ಮಗನು, ದೇವೇಂ ದ್ರನಿಗೆ ಕಾಮಧೇನು ಕಲ್ಪವೃಕ್ಷಾದಿಸಂಪತ್ತನ್ನು ಕೊಟ್ಟವನೇ ನಾನು, ಪಾರತಿಯ ತಮ್ಮನಾದ ಮೈನಾಕನು ಮರೆಹುಗಲು ಸಲಹಿದವನೇ ನಾನು, ಅದಕಾರಣ ನನಗೆ ಸಮಾನರಾರು? ”ಎಂಬ ಹಮ್ಮಿನಿಂದ ಸಮುದ್ರವು ಈ ಬ್ಲ್ಯುತ್ತಿರುವಂತೆಯೇ, 'ನನ್ನನ್ನು ಅಗಸ್ಯ ಮಹರ್ಷಿಯು ಕುಡಿದುಬಿಟ್ಟನು, ಬಡಬಾಗ್ನಿಯು ನನ್ನನ್ನು ಸದಾ ಹೀರುತ್ತಿರುವುದು,ನಾನು ಭಂಗವನ್ನು (ಹಾ ನಿ-ತೆರೆ) ಹೊಂದಿರುವೆನು ಎಂಬ ದುಃಖದಿಂದ ಕುಗ್ಗುತ್ತಿರುವಂತೆಯೂ ತೋರುತ್ತಿರುವುದು, ಇಂತಹ ಸಮುದ್ರವು ಸುತ್ತುವರಿದಿರುವ ಜಂಬೂ ದೀಪವು, ಕಾಶಿ ಕೇದಾರ ಹಂಪೆ ಗಯೆ ಶ್ರೀಶೈಲ ಮೊದಲಾದ ನಾನಾಪುಣ್ಯ ಕ್ಷೇತ್ರಗಳನ್ನು ಪಡೆದು, ಧರಾರ್ಥಕಾಮಮೋಕ್ಷ ಸಂಪಾದನಾರ್ಥವಾಗಿ ದುರ್ಧರತಪಸ್ಸನ್ನಾಚರಿಸುತ್ತಿರುವ ಮುನಿಗಳಿಂದಲೂ ದೇವತೆಗಳಿಂದಲೂ ಕೂಡಿ, ಅನೇಕ ದೇಶಗಳಿಂದಲೂ, ನದೀವನಪರತಾವಳಿಗಳಿಂದಲೂ, ಮ ನೋಹರವಾಗಿ ತೋರುತ್ತಿರುವುದು. ಆ ದೀಪದ ಮಧ್ಯದಲ್ಲಿ ಈಶ್ವರ ವಾಹನಾರ್ಥವಾಗಿ ಬ್ರಹ್ಮನಿಂದ ನಿರಿಸಿ ಸಿದ್ಧ ಮಾಡಲ್ಪಟ್ಟಿರುವ ಸಾಲಂಕಾ ರಮಹಾಗಜದಂತೆ ಮೇರುಪರತವು ಶೋಭಿಸುತ್ತಿರುವುದು, ಆ ಪರತ ದ ಮೇಲಣ ಒಂದೊಂದು ಶಿಖರಗಳಲ್ಲಿ ವಿಷ್ಣು ಬ್ರಹೇಂದ್ರಾದಿದೇವತೆಗಳ ಪಟ್ಟಣಗಳು ರಂಜಿಸುತ್ತಿರುವುವು, ದಕ್ಷಿಣಭಾಗದ ಶಿಖರದಲ್ಲಿ ಸಕಲ ದೇ
ಪುಟ:ಚೆನ್ನ ಬಸವೇಶವಿಜಯಂ.djvu/೨೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.