೪v ಚನ್ನಬಸವೇಕವಿಜಯಂ (woಶ೫) [ಅಧ್ಯಾಯ ಭೂಮಿಯಲ್ಲಿ ಅವತರಿಸುವರು. ಅವರಲ್ಲಿ ಕರಸ್ಥಲದ ವೀರಡೆಯರೆಂ ಬುವರೊಬ್ಬರಿರುವರು. ಅವರಿಗೆ ಅಕ್ಕಸಾಲೆನಾಗಯ್ಯನೆಂಬ ಶಿಷ್ಯನಿರುವ ನು. ಅವನು ಒಂದುದಿನ ವ್ಯಭಿಚಾರಕ್ಕಾಗಿ ಒಂದು ಮನೆಗೆ ನುಗ್ಗುವನು. ಮನೆಯವರು ಎಚ್ಚತ್ತು ಅವನನ್ನು ಹಿಡಿದುಕೊಳ್ಳುವರು. ಆಗ ಅವನಿಗೆಜ್ಞಾ ನೋದಯವಾಗಲು, ಪರಮವೈರಾಗ್ಯವನ್ನು ತಾಳ ಸಂಸಾರವನ್ನು ಪರಿತ್ಯ ಜಿಸುವನು. ನೀಠವನ್ನು ಕರಡಿಗೆ ಕಳೆದುಬಿಸುಟು, ಲಿಂಗವನ್ನು ಕರಪೀಠದ ಈ ಸದಾ ಧರಿಸಿಕೊಳ್ಳುವನು. ಮಯ್ದೆ ಬೂದಿಯನ್ನು ಬಳಿದು ಬತ್ತಲೆ ಯಾಗಿ ಹುಚ್ಚನಂತೆ ತಿರುಗುತ್ತಿರಲು, ಊರಜನರೆಲ್ಲರೂ ನೋಡಿ ಆಶ್ಚರಸ ಡುತ್ತಿರುವರು. ಬಳಿಕಾ ನಾಗಯ್ಯನು ತನ್ನ ಗುರುವಿದ್ದ ಊರಿಗೆ ಬರಲು, ಅವರು ಇದೇನು ವೈಚಿತ್ರವೆಂದು ಕೇಳಲು, ತನಗೆ ಸಂಭವಿಸಿದ ವಿಷ ಯವನ್ನೆಲ್ಲ ಹೇಳ ಹಸ್ತಲಿಂಗವನ್ನು ತೋರಿಸುವನು. ಗುರುಗಳು ಆ ಲಿಂ ಗವನ್ನು ಮತ್ತೊಂದು ನೀಠದಲ್ಲಿ ನಿಯೋಜಿಸಿ, ಬಾಈಕ್ರಿಯೆಗಳು ಅಳವ ವರೆಗೂ ಈ ಲಿಂಗವನ್ನು ಪೀಠದಿಂದ ತೊಲಗಿಸಬೇಡವೆಂದು ಬೋಧಿಸಿ, ತನ್ನ ಪ್ರಸಾದವನ್ನು ಕೊಟ್ಟು, ಕಳುಹಿಕೊಡುವರು. ನಾಗಯ್ಯನು ದೇ ಶಾಂತರಗಳನ್ನೆಲ್ಲ ಸುತ್ತಿಕೊಂಡು ಮತ್ತೆ ವೀರಣ್ನೆಡೆಯರ ಮನೆಗೆ ಬರುವ ನು. ಆಗಲವರು ನಾಗಯ್ಯನನ್ನು ಶಿಷ್ಯನೆಂದು ಭಾವಿಸದೆ, ಅರ್ಘಮ ದ್ಯಾಚಮನಗಳನ್ನಿತ್ತು ಭಕ್ತಿಯಿಂದ ಅವನನ್ನು ಸತ್ಕರಿಸಿ, ಮಣಿಮಂಚದ ಲ್ಲಿ ಕುಳ್ಳಿರಿಸಿ, ತಾವು ಹೂವನ್ನೆತ್ತಿ ತರುವುದಕ್ಕೆ ಹೋಗುವರು. ಇತ್ತ ನಾ ಗಯ್ದನು ಮನೆಯೊಳಗೆ ಮೂರುತಾವಿನಲ್ಲಿ ಮಲವಿಸರ್ಜನೆಯನ್ನು ಮಾಡಿ, .ವೀರಣೆಡೆಯರ ಹೆಂಡತಿಯನ್ನು ಕುರಿತು... ಅಮ್ಮಾ ! ನಿನ್ನ ಗಂಡನು ಈ ಮಲಕ್ಕೆ ಒಳಗಾಗಿದ್ದರೆ ಇಲ್ಲಿ ಸಾಗಿರಲಿ, ಹಾಗಿಲ್ಲದಿದ್ದರೆ ನಮ್ಮೆ ಡನೆ ಬರಲಿ ; ಎಂದು ಹೇಳಿ ಹೊರಟು ಹೋಗುವನು. ಬಳಿಕ ವೀರ ಡೆಯನು ಬಂದು ಹೆಂಡತಿಯಿಂದ ಎಲ್ಲಸಂಗತಿಯನ್ನೂ ಕೇಳಿ, ಆತ್ಮ ಗೃಪಟ್ಟು, ತಾನೂ ಘನವಿರಕ್ಕಿಯಿಂದ ಎಲ್ಲವನ್ನೂ ತೊರೆದು, ಮನೆಯ ಬಿಟ್ಟು, ನಾಗಯ್ಯನನ್ನು ಅರಸಿಕೊಂಡು ಹೊರಡವನು. ದಾರಿಯಲ್ಲಿ ಒಂ ದುಮೆಳೆಗೆ ತಲೆಯ ಕೂದಲು ಸಿಕ್ಕಿ ಪರಮ ಶಿವಯೋಗದಿಂದ ನಾಗಯ್ಯ ನು ಅಲ್ಲೇ ನಿಂತಿರುವುದನ್ನು ವೀರಣ್ನೆಡೆಯರು ಕಾಣುವರು. ಅವನ
ಪುಟ:ಚೆನ್ನ ಬಸವೇಶವಿಜಯಂ.djvu/೪೩೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.