೧೦) ನೂರೊಂದು ವಿರತರವತರಣವು ಕೂದಲನ್ನು ಮೆಲ್ಲಗೆ ಬಿಡಿಸುವನು. ನಾಗಯ್ಯನು ಕಣ್ಣನ್ನು ಬಿಟ್ಟು ಒಡೆ ಯನನ್ನು ನೋಡಿ, ನೀನು ಸಂಸಾರವನ್ನು ಬಿಟ್ಟು ಬಂದೆಯಾ ? ಭಲಾ ! ಎಂದು ಹೊಗಳುವನು. ಅವರೀರರೂ ಕೂಡಿಕೊಂಡು ವಿದ್ಯಾನಗರಿಗೆ ಬರುವರು, ಅಲ್ಲಿ ಹುಚ್ಚುರಾವುತನ ಮನೆಯಲ್ಲಿ ಲಿಂಗಾರ್ಪಿತದ ಭಿಕ್ಷೆಯ ನ್ನು ಕೇಳಲು, ಮನೆಯಾಕೆಯು ಭಸ್ಮವನ್ನು ತಂದು ಮುಂದಿರಿಸಿ, ತನ್ನ « ಪರಿಗ್ರಹಿಸಬೇಕೆಂದು ಬೇಡುವಳು, ಇವರು ಆಕೆಯನ್ನು ಮನೆಯ ಮುಂದೆಯೇ ಸಂಭೋಗಮಾಡುತ್ತಿರಲು, ಯಜಮಾನನು ಬಂದು ಇದ ನ್ನು ಕಂಡು ಕಡುನಿಟ್ಟಿನಿಂದ ಕತ್ತಿಯನ್ನು ಹಿರಿದು ಇಬ್ಬರನ್ನೂ ಎಷ್ಟು ತಿವಿದರೂ ದೇಹದಲ್ಲಿ ಗಾಯವೂ ರಕ್ತವೂ ಕಾಣದಿರುವುದನ್ನು ನೋಡಿ, ಆ ಸ್ಥರ ಪಟ್ಟು, ಕಡೆಗೆ ತಾನು ಮಾಡಿದಪರಾಧದಿಂದ ಭಯಗೊಂಡು ನಡು ಗುತ್ತಿರುವನು. ಆಗ ಅವರಿಬ್ಬರೂ-ಎಲೆ ರಾವುತನೇ ! ಹೆದರಬೇಡ, ನೀ ನೊಂದು ವಿಧದ ಭಿಕ್ಷೆಯನ್ನು ಕೊಟ್ಟೆ, ನಿನ್ನ ಹೆಂಡತಿಯು ಒಂದು ತರದ ಭಿಕ್ಷೆಯನ್ನಿತ್ತಳು; ಇವೆರಡೂ ನಮಗೆ ಒಂದೇಸಮು, ಎಂದು ಹೇಳಿ ಅಭ ಯದಾನ ಮಾಡುವರು. ಬಳಿಕ ಆ ರಾವುತನು ಈ ಸಂಗತಿಯನ್ನೆಲ್ಲ ತನ್ನ ದೊರೆಯಾದ ಚಿಢದೇವೇಂದ್ರನಿಗೆ ಬಿತ್ಸೆಸುವನು, ಅವನು ಭಕ್ತಿಯಿರಿ ದ ಇವರಿಬ್ಬರನ್ನೂ ಬರಮಾಡಿ, ನಮಸ್ಕರಿಸಿ, ಗುರುಬಸವೇಶನರಮನೆಗೆ ಇವರನ್ನು ಶಿವಾರ್ಪಣಕ್ಕಾಗಿ ಕಳುಹಿಕೊಡುವನು, ಆ ಗುರುಬಸವದೇವ ರು ಪೂಜಾಸಾಮಗ್ರಿಗಳನ್ನು ಅನಂತವಾಗಿಟ್ಟುಕೊಂಡು ಶಿವಾರ್ಚನೆಯನ್ನು ಮಾಡುತ್ತಿರಲು, ನಾಗಿದೇವಯ್ಯನು ಅದೆಲ್ಲವನ್ನೂ ನೋಡಿ, ಎತ್ತಿ ಬಿಸು ಟು, ಚೆಲ್ಲಾಡಲು; ಬಸವದೇವರು ಅದೇಕೆಂದು ಕೇಳುವಲ್ಲಿ, ನಾಗಯ್ಯನುನಿನ್ನ ಮನೋಭಾವಗಳು ಲಿಂಗವನ್ನು ಬಿಟ್ಟು ಎಲ್ಲಿ ಹರಿದಾಡುತ್ತಿದ್ದುವು ? ಬಾಹ್ಯಾಡಂಬರಗಳಿಂದೆಲ್ಲ ಬರುವ ಫಲವೇನು ? ಅರ್ಪಣಾನುಸಂಧಾನ ಕ್ರಮವನ್ನರಿಯದೆ ಬರಿಯ ಡಾಂಭಿಕಪೂಜೆಯನ್ನು ಎಷ್ಟು ದಿನ ಮಾಡಿ ದರೂ ವ್ಯರ್ಥವು, ಎಂದು ಹೇಳುವನು. ಆಗ ಬಸವದೇವರು ಜ್ಞಾನೋ ದಯಗೊಂಡು, ನಾಗಿದೇವನಿಗೆ ನಮಿಸಿ, ವಿರಕ್ತಿಯಿಂದ ಅವರೊಡನೆಯೇ ಮಧುವನದ ಕಡೆಗೆ ಹೊರಡುವನು. ಅಲ್ಲಿ ಬಹುಮಂದಿ ವಿರಕ್ತರು ಸೇರಿ ತೆಂಗಿನಮರದಮೇಲಿರುವ ಎಳನೀರನ್ನು ನೋಡಿ, ತಮ್ಮ ಲಿಂಗಕ್ಕೆ
ಪುಟ:ಚೆನ್ನ ಬಸವೇಶವಿಜಯಂ.djvu/೪೩೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.