ಚಂದ್ರಿಕಾ ಏಹಾರವು 81 ಅಮೃತದ ಮಳೆಯನ್ನು ಕರೆದನೋ ಎಂಬಂತೆಯೂ, ಕ್ಷೀರಸಮುದ್ರವೇ ಉಕ್ಕಿ ಬಂದಂತೆಯೂ ಬೆಳ್ತಂಗಳು ಲೋಕವನ್ನೆಲ್ಲ ಆವರಿಸಿತು. ಚಂದ್ರ ಪ್ರಭೆಯಿಂದ ಗಿರಿ ತರು ಗುಲ್ಕ ನದೀನದಾದಿಗಳೆಲ್ಲವೂ ಬಿಳಿಯ ಬಣ್ಣವ ವೈ ದಿ ರಂಜಿಸಿದುವು. ಈ ಬ್ರಹ್ಮಾಂಡವೆಲ್ಲವೂ ಸ್ಪಟಿಕದಿಂದ ಮಾಡಿದ ಭರಣಿಯಂತೆಯೂ, ಚಂದ್ರಮಂಡಲವು ಅದರ ಬಾಯ್ ಮುಜ್ಜಿದ ಕರ್ಪೂ ರದ ಹಲ್ಲೆಯಂತೆಯೂ ತೋರಿದವು, ಚಂದ್ರನೆಂಬ ಗುಂಡಾದ ಬೀಳ್ಕಾ 'ವದ ಮೇಲೆ ಮನ್ಮಥನು ಕಸ್ತೂರಿಯಿಂದ ಬರೆದ ಮೋಹಶಾಸ್ತಾಂತ ರ್ಗತವಾದ ಓಂಕಾರವೋ ! ಕತ್ತಲೆಯು ಹೆದರಿ ಚಂದ್ರನ ಗರ್ಭದಲ್ಲಿ ಹು ೬ ಬರಬೇಕೆಂದು ಯೋಚಿಸಿ ಓಡಿಬಂದು ಚಂದ್ರನ ದೇಹವನ್ನು ಹೊ ತೋ ! ಇಂದ್ರನು ಚಂದ್ರನೆಂಬ ಅಮೃತಕುಂಭವನ್ನು ಆಸೆಯಿಂದ ಇಟ್ಟುಕೊಂಡು ಅದಕ್ಕೆ ಅರಗಿನ ಮುದ್ರೆಯನ್ನೊತ್ತಿರುವನೋ ! ಎಂ ಬಂತೆ ಚಂದ್ರಮಂಡಲದ ಮಧ್ಯದಲ್ಲಿರುವ ಕಳಂಕವು ತೋರುತ್ತಿದ್ದಿತು. ಹಿಗೆ ಚಂದ್ರೋದಯವು ಲೋಕಾಹ್ಲಾದಕವಾಗಿ ತೋರುತ್ತಿರ ಲು, ಭೂಕಾಂತನಾದ ಬಿಜ್ಜಳನು ಆ ಬೆಣ್ಣಂಗಳಿನಲ್ಲಿ ಪಟ್ಟಣದೊಳಗೆ ವಿ ಹುಸಿ ಬರಬೇಕೆಂದು ಯೋಚಿಸಿ, ಭೋಜನಾನಂತರ ಅರಮನೆಯಿಂದ ಹೊರಟನು. ಒಡನೆ ವಿಟ ವಿದೂಷಕ ನಾಗರಿಕ ನೀಠಮರ್ದನರೆಂಒ ಚತು ರ್ವಿಧದ ನರ್ಮಸಚಿವರುಗಳು ಹೊರಟರು. ಸೂಳೆಗೇರಿಗೆ ನುಗ್ಗು ವಾಗ ಮುಂಗತೆಯಲ್ಲಿ ಹೂವಿನ ಸಂತೆಯು ಕಾಣಿಸಿತು, ಅಲ್ಲಿ ಹೂವಾಡಗಿತ್ತಿ ಯರು ಮೊಲ್ಲೆ ಮಲ್ಲಿಗೆ ಜಾಜಿ ಸಂಪಗೆ ತಾಳೆ ಮಾದರಿ ಮೊದಲಾದ ಹೂ ವುಗಳ ಸರಗಳನ್ನು ಹಿಡಿದು ಮಾರುತ್ತಿದ್ದರು. ಅದರಮುಂದೆ ಪರಿಮಳ ದ್ರ ವ್ಯಗಳನ್ನು ಮಾರುವ ಆಲಗಡಿಯಸಾಲುಗಳು ಘಮಘಮಿಸುತ್ತಿದ್ದು ವು. ಅಲ್ಲಿ ಹಲವು ಬೆಡಗಿನ ಸುಂದರಿಯರು ಕುಳಿತು ಕಸ್ತೂರಿ ಕುಂಕು ಮಕೇಸರಿ ಪಞ್ಚಕರ್ಪೂರ ಪುನುಗು ಜಪ್ಪಾಜಿ ಪನ್ನೀರು ಶ್ರೀಗಂಧ ಲಾ ವಂಚ ಮೊದಲಾದುವುಗಳನ್ನು ಮಾರುತ್ತಿದ್ದರು. ಆ ಬೀದಿಯನ್ನು ನು fದವರೆಲ್ಲ ಪರಿಮಳ ಸಮುದ್ರದಲ್ಲಿ ಮುಳುಗಾಡಿದವರಂತೆ ಗಂಧಮಯ ರಾಗುತ್ತಿದ್ದರು. ಪರಿಮಳ ಸಮೇತವಾದ ತಂಗಾಳಿಯು ಹಿತಕರವಾಗಿ ಬಿಸುತ್ತಿದ್ದಿತು. ಅವರ ಮುಂದಿರುವ ಸೂಳೆಗೇರಿಯು ಮನ್ಮಥನ ಆಯುಧ
ಪುಟ:ಚೆನ್ನ ಬಸವೇಶವಿಜಯಂ.djvu/೬೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.