ಚನ್ನಬಸವೇಶವಿಜಯಂ [ಅಧ್ಯಾಯ ಶಾಲೆಯೊ !ಕಾಮನ ಪಟ್ಟದ ಆನೆಗಳ ಶಾಲೆಯೊ! ಮದನನ ನವನಿಧಿಗಳನ್ನು ತುಂಬಿದ ಬೊಕ್ಕಸವೋ ! ಸ್ಮರನ ಪುಣ್ಯಫಲದ ಉಸನನವೊ ! ಮೋಹದ ಜನ್ಮಸ್ಥ ಲವೋ ! ಚಾತುಗ್ಗದ ಮನೆಯೊ ! ಸಖ್ಯದ ಆವಾಸವೊ! ಸೊಬಗಿ ನವಿಹಾರಾಂಗಣವೊ ! ಮಾರನೃಪನ ರಾಜಧಾನಿಯೊ! ಎಂಬಂತೆ ಒಪ್ಪುತ್ರಿ ದ್ವಿತು, ಅಲ್ಲಿ ಸುಳ್ಳಿನಂಗಡಿ, ಸ್ಪರ್ಧೆಯ ನೆಲೆವನೆ, ಮಾಯೆಗಳ ವಾಸ, ಆಸೆ ಯುಆಶ್ರಮ, ದೊಪದ ಮಾರಕಟ್ಟು, ಪಂಥದ ಗೃಹ, ಜೂಜಿನ ಹೊಕ್ಕೆ, ಕಪಟದ ಸ್ಥಾನ, ನೆಪದ ಹಕ್ಕೆ, ಚದುರಿನ ತಾಣ, ಮೋಸದ ಇಕ್ಕೆ, ಬ ಲಾತ್ಕಾರದೆ ಅರಮನೆ, ತಪ್ಪುಗಳ ತವರ್ಮನೆಗಳೆನಿಸಿ ಮೆರೆಯುತ್ತಿರುವ ಸೂಳೆಯರ ಮನೆಗಳು ತೋರುತ್ತಿದ್ದುವು, ಸಂಪತ್ತಿನಿಂದ ಭರಿತವಾಗಿರುವ ಆ ಕೇರಿಯ ಮನೆಗಳು ಚಿನ್ನ ಬೆಳ್ಳಿಯ ಕೆಲಸದಿಂದಲೂ ರತ್ನಗಳ ಕೆತ್ತುವಿಕೆ ಯಿಂದಲೂ ಶೋಭಾಯಮಾನವಾಗಿದ್ದುವು. ಅವುಗಳಲ್ಲಿ ಸಾಕಿದ ೪೪ ನವಿ ಲು ಪಾರಿವಾಳ ಹಕ್ಕಿಗಳ ಶಬ್ದ ರೂ ವೆಚ್ಛೆಯರ ಪಾದಕಟಕಧ್ವನಿಯೂ ಉಪ್ಪರಿಗೆಗಳ ಮೇಲೆ ಕಟ್ಟಿರುವ ಚಿನ್ನ ಬೆಳ್ಳಿಯ ಗಂಟೆಗಳ ನಾಗವೂ ಸಹ ಕಿವಿಗಿಂಪಾಗಿ ಕೇಳಿಸುತ್ತಿದ್ದುವು. ಆಲ್ಲಿ ಮನ್ಮಥನ ಬಾಣಗಳಂತೆ ಮೋಹ ವನ್ನುಂಟುಮಾಡುತ್ತ, ಕಟಾಕ್ಷಪಾತದಿಂದ ಘನಜಿತೇಂದ್ರಿಯರ ಮನಸ್ಸ ನ್ಯೂ ಕೂಡ ಸೆಳೆಯುವ ಚದುರಿನ ತರುಣಿಯರಾದ ನಾರಾಂಗನೆಯರು ಪರಿ ಪರಿಯ ಶೃಂಗಾರಗಳಿಂದೊಪ್ಪಿ ಜಗತಿಯ ಮೇಲೂ ಬಾಗಿಲುಗಳಲ್ಲಿ ಈ ಸ್ಪರಿಗೆಗಳಲ್ಲಿ ಕಿಟಕಿಗಳಲ್ಲಿ ನಿಂತು ಶೃಂಗಾರರಸದ ಅಧಿದೇವತೆಗಳಂತೆ ತೊರುತ್ತಿದ್ದರು. ಕೆಲರು ಉಯ್ಯಾಲೆಯಲ್ಲಿ ಕುಳಿತು ತೂಗಿಸಿಕೊಳ್ಳುತ್ತ ಲ, ಕೆ೦ರ ಚಂಡ ರಾಡುತ್ತಲೂ, ಕೆಲರು ಹಾಡುತ್ತಲೂ, ಕೆಲವು ನ ರ್ತನವನ್ನಭ್ಯಸಿಸುತ್ತಲೂ, ಕೆಲರು ಕ್ರೀಡಾ ಶುಕಗಳನ್ನು ಮಾತನಾಡಿಸು ತಲೂ, ಕೆಲರು ಕಾನಶಾಸ್ತ್ರವನ್ನಭ್ಯಸಿಸುತ್ತಲೂ, ಕೆಲವು ಮುದಿಕಿಯ ರಿಂದ ವೆಶ್ಯಾವಿಯ ರಹಸ್ಯವನ್ನರಿಯುತ್ತಲೂ ಇದ್ದರು, ಅಲ್ಲೊಬ್ಬಳು ಕಮಲಮುಖ, ಪದ್ಮಗಂಧ, ಜೆಂಕೆಯ ನೋಟ, ಕೋಕಿಲೆಯ ಸ್ಪರ, ಕಪ್ಪು ಕೂದಲು, ಹಂಸಗಮನ, ಎಳೆಗಸೆಹೂವಿನಂತಹ ಮೂಗು, ತೊಂಡೆ ದುಟಿ ಗುಂಡುಮೊಲೆ, ನಾಚಿಕೆ, ಗಾಂಭೀರ, ಕೋಮಲಶರೀರ ಇವುಗಳು ಇವಳಾಗಿ ಬಿಳಿಸೀರೆಯನ್ನುಟ್ಟು ಒಳಬಾಗಿಲಲ್ಲಿ ನಿಂತಿರುವುದನ್ನು ನೋಡಿ
ಪುಟ:ಚೆನ್ನ ಬಸವೇಶವಿಜಯಂ.djvu/೬೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.