ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ಹಗಲು ಇರುಳಲಿ ಗಳಿಗೆ ಚಣದಲಿ ಜಗವು ಸಂತತ ಚಲಿಸುತಿರ್ಪುದು ; ಬಗೆಯೊಳೆನ್ನಲಿ ಅಂತೆ ಸಂತತ ಒಗೆಯುತಿರ್ಪುದು ದೃಷ್ಟಿ ಭೇದವ. ಓಡುತಿರ್ಪ ತೇರಿಂದ ನೋಡುತ ಓಡುತಿರ್ಪ ಮುಗಿಲೊಡ್ಡ ನಭವನು ನೋಡಿದಾವುದನು ನಿಚ್ಚವೆಂಬೆನು ? ನೋಡದಾವುದನ್ನು ಇಲ್ಲವೆಂಬೆನು ? ಬಾಲ ನಿದ್ರಿಸುತಲಿರಲು ತಾಯಮ್ ಅವನ ಕೇಳಿಕೆಯನು ನೋಡೆಂದು ತಂದಳು ; ಎದ್ದು ನೋಡುತಿಹನಿನಿತ ಮಧ್ಯದಲಿ; ನಿದ್ದೆಯಾಳದಲಿ ಮರಳಿ ಇಳಿವನು. ಆಟ ಎಂತು ಮೊದಲಾಯಿತೆಂಬುದನು, ನೋಟ ಎಂತು ಕೊನೆಯಪ್ಪುದೆಂಬುದನು, ಎಳೆಯನರಿವನೇ ತಾನೆ ಊಹಿಸಿ? ತಿಳಿವೆನೆಂತು ನಾ ನಿನ್ನ ಲೀಲೆಯ ? ೬೩