ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩ನೆಯ ಪ್ರಕರಣ ಆಧುನಿಕ ವೇಧಯಂತ್ರಗಳು ಸೂರ್ಯಕಾಂತಗಳೆಂಬ ಒಂದು ತರಹದ ಕಾಜಿನ ತುಂಡುಗಳನ್ನು ಅನೇಕರು ನೋಡಿರಬಹುದು. ಇವು ವರ್ತುಲಾಕಾರವಾಗಿದ್ದು ಎರಡೂ ಬದಿಗೆ ಗುಳ್ಳೆಯಂತೆ ಉಬ್ಬಿರುತ್ತವೆ. ಇವುಗಳೊಳಗಿಂದ ನೋಡಿದರೆ ಸಣ್ಣ ವಸ್ತುಗಳು ದೊಡ್ಡವಾಗಿ ಕಾಣುವುದರಿಂದ ಇವುಗಳಿಗೆ ಭೂತಗನ್ನಡಿ ಯೆನ್ನುವುದುಂಟು. ಸಣ್ಣ ಅಕ್ಷರದ ಪುಸ್ತಕವನ್ನೋದಲಿಕ್ಕೂ, ಇರಿವೆ, ನೊಣ ಮೊದಲಾದ ಸಣ್ಣ ಪ್ರಾಣಿಗಳನ್ನು ನಿರೀಕ್ಷಿಸಲಿಕ್ಕೂ ಇವುಗಳನ್ನು ಪ ಯೋಗಿಸುವರು. ಒಂದಕ್ಕಿಂತ ಹೆಚ್ಚು ಇಂಧವುಗಳನ್ನು ಒಂದು ಕೊಳವೆ ಯಲ್ಲಿ ಕೂಡಿಸಿ ನೋಡುವುದರಿಂದ ಒಡವೆಗಳು ಬಹಳ ದೊಡ್ಡವಾಗಿ ಕಾಣುತ್ತವೆ. ಇಂಧವುಗಳಿಗೆ ಸೂಕ್ಷ್ಮದರ್ಶಕ ಯಂತ್ರಗಳನ್ನು ವರು. ಈಗ ಪ್ರಚಾರದಲ್ಲಿರುವ ಇಂತಹ ಯಂತ್ರಗಳಲ್ಲಿ, ಒಡವೆಗಳು ತಮ್ಮ ೧೫ ಲಕ್ಷ ಪಟ್ಟು ದೊಡ್ಡವಾಗಿ ಸಹ ಕಾಣಿಸಬಲ್ಲವು. ಇವುಗಳಿಂದ ಅನೇಕ ರೋಗ ಗಳನ್ನು ಹುಟ್ಟಿಸುವ ಸೂಕ್ಷ್ಮಜಂತುಗಳನ್ನು ನಾವು ನೋಡಬಹುದು. ಒಂದು ನೀರಿನ ಹನಿಯಲ್ಲಿಯೆ ನಾನಾ ವಿಧದ ಪ್ರಾಣಿಗಳೂ ಉದ್ಭಜ ಗಳೂ ಕಾಣಿಸ ವವು. ಮನುಷ್ಯನ ಕಣ್ಣಿನಲ್ಲಿಯೂ ಇಂತಹ ಸೂರ್ಯ ಕಾಂತವಿರುವುದು. ಅದರ ಆಕಾರವು ಸರಿಯಾಗಿದ್ದರೆ ಒಡವೆಗಳೆಲ್ಲವೂ ನಮಗೆ ಸ್ಪಷ್ಟವಾಗಿ ಕಾಣುವವು. ಅದರಲ್ಲಿ ಏನಾದರೂ ದೋಷವಿದ್ದರೆ ಅಸ್ಪಷ್ಟವಾಗಿ ಕಾಣುವವು. ಈಗ ಆ ದೋಷವನ್ನು ಸರಿಪಡಿಸಲಿಕ್ಕೆ ಕನ್ನಡಕಗಳೆಂಬ ಕೃತ್ರಿಮ ಸೂರ್ಯಕಾಂತಗಳನ್ನು ಧರಿಸಬೇಕಾಗು ವುದು. ಇವೇ ಸೂರ್ಯಕಾಂತಗಳನ್ನು ಇನ್ನೊಂದು ರೀತಿಯಿಂದ ಉಪ ಯೋಗಿಸುವುದನ್ನು ಅನೇಕರು ನೋಡಿರಬಹುದು. ಇಂತಹದೊಂದನ್ನು ಸೂರ್ಯನೆದುರಿಗೆ ಹಿಡಿದರೆ ಇನ್ನೊಂದು ಕಡೆಗೆ ಕೆಲವಂತರದಮೇಲೆ ವಿಲಕ್ಷಣ ಶಕೆಯ ಬೆಳಕೂ ಉಂಟಾಗುವವು. ಅಲ್ಲಿ ನಮ್ಮ ಕೈಹಿಡಿದರೆ ಕೆಂಡವನ್ನು ಹಿಡಿದಂತಾಗುವುದು. ಹತ್ತಿಯನ್ನಾಗಲಿ ಕಟ್ಟಿಗೆಯನ್ನಾಗಲಿ