________________
-[೨೨ ]ವಾಂತಿ, ದಾಹ ಮತ್ತು ಜ್ವರಗಳಿದ್ದರೆ:- ಕಲ್ಲುಸಕ್ಕರೆ, ಕರೇದ್ರಾಕ್ಷಿ, ಬಾರಿ ಹಣ್ಣು, ಕಬಂಟ, ಜೆಕಿನ ಗಡ್ಡೆ, ರಕ್ತಚಂದನ ಇವಗಳ ಕಷಾಯದಿಂದ ಸಿದ್ಧ ಮಾಡ ಲ್ಪಟ್ಟ ಅಕ್ಕಿ ಗಂಜಿಯನ್ನು ಆರಿಸಿ, ಅದರಲ್ಲಿ ಜೇನುತುಪ್ಪ ಕಡಿಸಿ ಕೊಡಬೇಕು. (೧೦) ಸೆರೆ ಇಲ್ಲವೆ ಮಾದಕ ಪದಾರ್ಥಗಳಿಂದ ಉಂಟಾದ ಜ್ವರಗಳಿಗೆ ರೋಗಿಯು ನೀರಡಿಕೆ, ಓಕುಳಿ, ಹಾಗು ದಾಹ ಇವುಗಳಿಂದ ಪೀಡಿತನಾಗಿದ್ದರೆ ಮತ್ತು ಊರ್ಧ್ವಗಾಮಿಡಿ ರಕ್ತಪಿತವಾಗಿದ್ದರೆ ಗಂಜಿಯನ್ನು ಕೊಡಬಾರದು. ಅ೦ತ ಕಾಲಕ್ಕೆ ಜ್ವರನಾಶಕಗಳಾದ ದಾಳಿಂಬ ಕಿತ್ತಳೆ ಮೊದಲಾದ ಹಣ ಗಳ ರಸ ತೆಗೆದು ಕಾಡಬೆಕು; ಇಲ್ಲವೆ ನೀ ಒಳಗೆ ಬೇನುತುಪ್ಪ, ಸಕ್ಕರೆ ಬೆರಿಸಿ, ಅದನ್ನು ಭತ್ತದ ಅರಳಿನ ಗಂಜಿಯೊಡನೆ ಕಂಡಬೇಕು. ಅನಂತರ ಭತ್ತದ ಅರ ಳಿನ ಕಾಟ ಇಲ್ಲವೆ ಜಂಗೊಂದಿಯ ಕಟಿ ಅಥವಾ ರೋಗಿಗೆ ದಕ್ಕುತ್ತಿದ್ದರೆ, ಧಾನ್ಯದ ಯುವ ಅಧವಾ ಕಾಟಿ=ಧಾನ್ಯದ ಎಂಟ ಪಟ್ಟು ನೀರು ಬೆರಿಸಿ ಬೇಯಿ ಸಿದ ಸಾರು ಇಲ್ಲವೆ ಹೆಸರಿನ ಸಾಲು ಹರಿದ ಅಕ್ಕಿಯ ಅನ್ನ ಅಥವಾ ಗಂಜಿ ಇವು ಗಳನ್ನು ಕೊಡಬೇಕು, ಔಷಧವು ಜೀರ್ಣಿಸುವ ಮೊದಲು ಆಹಾರ ತಕೊ೦ಡರೆ ಇಲ್ಲವೆ ಆಹಾ ರವು ಜೀರ್ಣಿಸುವ ಪೂರ್ವದಲ್ಲಿ ಔಷಧ ತಕೊಂಡರೆ ಅದರಿಂದ ರೋಗ ಪರಿಹಾರ ವಾಗುವದಂಶ ಬೃಗೇ ಉಳಿದು, ಬೇರೆ ಹೊಸ ರೋಗವೇ ಉಂಟಾಗುತ್ತದೆ. ಈ ಬಗ್ಗೆ ಚಿಕಿತ್ಸಕರೂ ರೋಗಿಯ ಎರಡಬೇಕು. - ೩ ಜ್ವರದೊಳಗೆ ಬಿಸಿ ನೀರಿನ ಉಪಯೋಗವು ! ವಾತಕಧಾತ್ಮಕ ಜ್ವರದೊಳಗೆ ನೀರಡಿಕೆಯಾಗುತ್ತಿದ್ದರೆ, ಸ್ವಲ್ಪ ಸ್ವಲ್ಪ ಬಿಸಿನೀರು ಕುಡಬೇಕು; ಅಂದರೆ ಕಫವನ್ನು ನಿ'ರು ಮಾಡಿ ನೀರಡಿಕೆಯನ್ನು ಬೇಗನೆ ಕಡಿಮೆ ಮಾಡುತ್ತದೆ; ಮತ್ತು 'ಗ್ನಿಯನ್ನು ಪ್ರದೀಪ್ತಗೊಳಿಸಿ, ಶ್ವೇತಸುಗಳನ್ನು ಮೆತ್ತಗೆ ಮಾಡುತ್ತದೆ. ಬಿಸಿನೀರಿನಿಂದ ಸ್ತಬ್ದ ವಾದ ಪಿತ್ಥ, ವಾಶ, ಬೆವರು, ಮು ಮತ್ತು ಮಂತ್ರಗಳು ಅನುಲೋಮನಗೊಳಿಸುತ್ತವೆ; ಹಾಗು ಅತಿ ನಿದ್ರೆ, ಜಡತ್ವ, ಅರುಚಿ ಅವುಗಳ ನಾಶಹೊಂದುತ್ತವೆ. (೧) ಒಂದು ಕುದಿ ಕಟ್ಟ ನೀರು ಕುಡಿಯುವದರಿಂದ ಮಹಾ ಶಿಂಶಸ: (ದೊಡ್ಡ ಕರಳು)ಗಳಿಗೆ ಮೇಲಿನಿಂದ ಕೆಳಗಿಳಿಯುವ ಗತಿಯನ್ನುಂಟು ಮಾಡುತ್ತದೆ. ಇದರಿಂದ ಮುಲೋತ್ಸರ್ಜನವು ಚೆನ್ನಾಗಿ ಆಗುತ್ತದೆ, (೨) ಅದರಿಂದ ಕೇವಲ 'ಚೆಯೊಳಗಿಂದ ಹರಿಯುವ ಹಾಗು ಅನೇಕ ಬೇರೆ ಬೇರೆ ಜಿಗಟು, ಸಾವ, ಕಫ, ಜೊಲ್ಲು, ಹೊಟ್ಟೆಯೊಳಗಿನ ಮತ್ತು ಕರುಳುಗಳೊಳಗಿನ ದ್ರವ ಮುಂತಾದವುಗಳು