ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಂಕರಕಥಾಸಾರ ೫೬

ಚಕ್ರ, ಲಿಂಗಾದಿಧಾರಣಮಾತ್ರದಿಂದ ಸದ್ಯಃಪತಿತನಾಗುತ್ತಾನೆ; ಆದ್ದರಿಂದ ಶ್ರುತಿ ಸ್ಕೃತಿವಿರುದ್ಧವಾದ ಶಂಖಚಕ್ರಾದಿಧಾರಣವು ಅಯೋಗ್ಯವು ” ಎಂದು ಹೇಳಿ, « ನೀವೇ ರಕ್ಷಕರು ” ಎಂದು ಬಂದ ಅವರಿಗೆ ಸ್ಮೃತ್ಯುಕ್ತವಿಧಾನದಿಂದ ಪ್ರಾಯಶ್ಚಿತ್ತ ವಂಮಾಡಿಸಿ ಅವರನ್ನೆಲ್ಲಾ ಅದ್ವೈತಮತಾನುಯಾಯಿಗಳನ್ನಾಗಿ ಮಾಡಿದರು.

                      ಚತುರ್ಮುಖಮತನಿಹಿಂಸನವು.
ಅನಂತರ ಶಂಕರದೇಶಿಕರು ಸುಬ್ರಹ್ಮಣ್ಯಕ್ಷೇತ್ರಕ್ಕೆ ಹೋದರು. ಆಗ ಅಲ್ಲಿನವ ರಾದ ಕೆಲವರು ಬ್ರಹ್ಮೋಪಾಸಕರು ಬಂದು" ಎಲೈಯತಿಯೇ ! « ಹಿರಣ್ಯಗರ್ಭಸ್ಸಮ ವರ್ತತಾಗ್ರೇ ... ..- ವಿಧೇಮ' ಇತ್ಯಾದಿ ವೇದವಾಕ್ಯದಿಂದ ಬ್ರಹ್ಮನೇ ಸಕಲಕ್ಕೂ ಕರ್ತನು; ಮತ್ತು ಪಾಲಕನೂ ಇವನೇ. ಇದಲ್ಲದೇ ಯಾವನು ಕರ್ತನೆಂದು ಹೇಳಲ್ಪ ಟ್ಟಿದ್ದಾನೋ ಅಂತಹ ಬ್ರಹ್ಮನೇ ಆನಂದದಾಯಕನೆಂದು ಹೇಳಲ್ಪಟ್ಟಿದ್ದಾನೆ; ಆ ಪ್ರಭುವು ಸಕಲ ಜಗತ್ತನ್ನೂ ಸೃಷ್ಟಿಸಿ ಸರ್ವಾತ್ಮನೆಂದು ಕೀರ್ತಿಗೊಂಡಿದ್ದಾನೆ; , ತದೈಕ್ಷತ' ಇತ್ಯಾದಿ ಶ್ರುತಿವಾಕ್ಯಗಳಿ೦ದ ಅವನೇ ತನ್ನ ಭುಜಗಳಿಂದ ವಿಷ್ಣು ಮತ್ತು ಈಶ್ವರನನ್ನು ಸೃಷ್ಟಿಸಿದನೆಂದು ತಿಳಿಯಬರುತ್ತದೆ; ಬ್ರಹ್ಮನಿಂದ ಸೃಷ್ಟಿಸಲ್ಪಟ್ಟ ಸಕಲ ಲೋಕವೂ ಅವನ ಕುಕ್ಷಿಯನ್ನೇ ಕುರಿತು ಹೋಗುತ್ತದೆ; ಮೋಕ್ಷವೂ, ಆ ಬ್ರಹ್ಮನಿಂದ ಲ್ಲದೇ ಬೇರೆ ಯಾರಿಂದಲೂ, ಬರಲಾರದು; ಆದ್ದರಿಂದ ನೀವೂ ನಮ್ಮಂತೆ ಕೂರ್ಚಕ ಮಂಡಲುಧಾರಿಗಳಾದ ಜ್ಞಾನನಿಷ್ಠರಾಗಿ ಮೋಕ್ಷವನ್ನು ಹೊಂದಿ” ಎಂದು ಹೇಳಲು,
    ಶಂಕರಭಗವತ್ಪಾದರು"ಎಲೆ, ಮೂಧರೇ !ಬ್ರಹ್ಮಾದಿಭೂತಗಳು ಯಾವಕಾ ರಣದಿಂದ ಆಗುತ್ತಾರೆ ಎಂಬುದನ್ನು ತಿಳಿ ' ಎಂಬ ಶ್ರುತಿಯಿಂದ ಬ್ರಹ್ಮನನ್ನು ತಿಳಿಯು ವುದು ಮುಖ್ಯಕಾರಣವು; ಮೋಕ್ಷಕ್ಕೆ ವೇದಾಂತವಾಕ್ಯಶ್ರವಣಾದಿಗಳು ಯಾವಾ ಗಲೂ ಮಾಡತಕ್ಕದ್ದು. ಲಯವು ಮೋಕ್ಷವೆಂದು ಹೇಳಲ್ಪಟ್ಟಿಲ್ಲ; ಕಾರ್ಯಬ್ರಹ್ಮನ ಸೇವೆಯಿಂದ ಸುಷುಪ್ತಿತುಲ್ಯನಾದ ಪರಮಾತ್ಮನು ಹೊಂದಲ್ಪಡಲಾರನು. ಆದ್ದರಿಂದ ನಿಮ್ಮ ಗುರುತುಗಳನ್ನು ಬಿಟ್ಟು, ಗುರುಮುಖದಿಂದ ಆತ್ಮಬೋಧೆಯನ್ನು ಕಲಿಯ ಬೇಕು” ಎಂದು ಇವೇ ಮೊದಲಾಗಿ ಹೇಳಲು ಅವರೆಲ್ಲಾ ಆಚಾರ್ಯ ಶಿಷ್ಯರಾಗಿ ಅದ್ವೈತಾಧ್ಯಯನತತ್ಪರರಾದರು.
         ಅಗ್ನಿ ಮತಭಂಜನವು.
  ಅನಂತರ ಅನ್ನು ಪಾಸಕರಾದ ಕೆಲವರು ಬಂದು ಆಚಾರ್ಯರನ್ನುಕುರಿತು 

" ಸ್ವಾಮಿಾ ! « ಅಗ್ನಿರಗ್ರೇಪ್ರಥಮೋದೇವತಾನಾಂ' ಎಂಬ ಶ್ರುತಿಯಿಂದ ಅಗ್ನಿಯೇದೇ