ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಾಕೋರು ಅವರು. ಚಾಪೆಯ ಉದ್ದ ನೋಡಿ ಅಷ್ಟಕ್ಕೆ ಕಾಲು ಚಾಚಿ, ಸಂಸಾರವನ್ನು ನಾವು ತೂಗಿಸಿಕೊಂಡು ಹೋದರಾಯ್ತು.” ಭಾಗೀರಥಿ ಮಾತು ಕೂಡಿಸಲಿಲ್ಲ. ದೊಡ್ಡಮ್ಮ ಹಿತ್ತಲ ಕಡೆಗೆ ಹೊರಟುದನ್ನು ಕಂಡ ತಾನೂ ಮಗುವನ್ನತ್ತಿಕೊಂಡು ಪಡಸಾಲೆಗೆ ಬಂದಳು. ಅಲ್ಲಿ ಶ್ರೀನಿವಾಸಯ್ಯ ಹಾಸಿಗೆಯ ಮೇಲೆ ಗೊರಕೆ ಹೊಡೆಯುತ್ತ ಮಲಗಿದ್ದರು. ಭಾಗೀರಥಿ ಜಗಲಿಗೆ ನಡೆದಳು. ಗಂಡಸರ ಸಂಕಷ್ಟದ ವಿಷಯ ದೊಡ್ಡಮ್ಮ ಯಾಕೆ ಹಾಗೆ ಹೇಳಿದರು ? ಎಂಬ ಯೋಚನೆ ಅವಳ ಮನಸ್ಸನ್ನು ದಣಿಸಿತು. ಅವರ ಹಿರಿಯ ಮೊಮ್ಮಗನನ್ನು ತಾನು ಕಾಡುತ್ತಿದ್ದೇನೆ, ಎಂದೆ ? ತನ್ನನ್ನು ಕುರಿತ ಟೀಕೆಯೇ ಆ ಮಾತು ? ಭಾಗೀರಥಿಗನಿಸಿತು: ಈ ಸಂಸಾರದಲ್ಲಿ ಅವರೇ ಅತ್ಯಂತ ಹಿರಿಯರು. ಏನನ್ನು ಬೇಕಾದರೂ ಹೇಳುವ ಹಕ್ಕು ಅವರಿಗಿದೆ. ನಾನು ಹೊರಗಿನಿಂದ ಬಂದವಳು. ನನ್ನ ಮಾತು ಇಲ್ಲೇನು ನಡೆಯುತ್ತೆ ? ಶ್ರೀಪಾದನಿಗೆ ಮತ್ತೆ ನಿದ್ದೆಯ ಹೊತ್ತು, ಭಾಗೀರಥಿ ಅವನನ್ನು ಕೊಠಡಿಗೊಯ್ದು ಮಲಗಿಸಿದಳು. ಬಳಿಕ ಒಣಗಿದ ಬಟ್ಟೆಗಳನ್ನು ತಂದು ಮಡಚೋಣವೆಂದು ಹೊರಹೋದಳು. ...ಬಿಸಿಲು ಬಾಡುವ ವೇಳೆಗೆ ವಿಷ್ಣುಮೂರ್ತಿಯವರನ್ನು ಬಸ್ಸು ಹತ್ತಿಸಿ ಬರಲು ಹೋಗಿದ್ದ ಗೋವಿಂದ ವಾಪಸಾದ. “ಯಾಕೆ ತಡ ? ಸೋಮಪುರದ ಬಸ್ಸು ಸಿಗ್ಲಿಲ್ವ ?” – ಎಂದು ದೊಡ್ಡಮ್ಮ ಕೇಳಿದರು, “ ಸಿಕ್ಕು, ಕಳಿಸ್ಕೊಟ್ಟೆ. ಆದರೆ ಭಾರೀ ಬಿಸಿಲು, ದೊಡ್ಡಮ್ಮ, ವಿಷ್ಣುಮೂರ್ತಿಗಳು ಸುಸ್ತಾಗಿ ಹೋದ್ರು, ಬಾ ನಾನು ಕೃಷ್ಣಗೌಡನ ಮನೇಲಿ ಸ್ವಲ್ಪ ಹೊತ್ತು ಕೂತಿದ್ದೆ.” ಎಂದ ಗೋವಿಂದ. ಅಜ್ಜಿ ಮೊಮ್ಮಗನ ಸಂಭಾಷಣೆ ಅಡುಗೆ ಮನೆಯಲ್ಲಿದ್ದ ಭಾಗೀರಥಿಗೆ ಕೇಳಿಸುತ್ತಿತ್ತು. ಡಬ್ಬಗಳ ಸಂದಿಯಲ್ಲಿ ತುಂಬಿದ್ದ ಧೂಳನ್ನು ಝಾಡಿಸುವುದರಲ್ಲಿ ನಿರತಳಾಗಿದ್ದ ಭಾಗೀರಥಿ ಕಿವಿ ನಿಮಿರಿಸಿ ಹೊರಗಿನ ಮಾತುಗಳನ್ನು ಆಲಿಸಿದಳು. “ ಈ ಹಳ್ಳಿ ನೋಡಿ ಅದೇನು ಇಷ್ಟವಾಯ್ಯೋ ವಿಷ್ಣುಮೂರ್ತಿಗಳಿಗೆ ?” ಎಂದು ನಕ್ಕರು ದೊಡ್ಡಮ್ಮ. " " ನಮ್ಮ ತಾತನಿಗೆ ಈ ಹಳ್ಳಿ ಯಾಕೆ ಇಷ್ಟವಾಯ್ತು ಹೇಳು ದೊಡ್ಡಮ್ಮ? ಇದೇ ಅಮರಾವತಿ, ಇಲ್ಲೇ ಇದ್ದೀನಿ ಅಂದ್ರಲ್ಲ ?” “ನಿಜಾಂತಿಟ್ಕ” “ ಅದರಲ್ಲೂ ವಿಷ್ಣುಮೂರ್ತಿಗಳು ಯಾವುದಕ್ಕೂ ದುಡುಕಿ ಕೈ ಹಾಕೋ ಮನುಷ್ಯನೇ "ಲೋಕಾನುಭವಿ. ಅಂದಹಾಗೆ ಜಾತಕದ್ದೇನಾದರೂ ಮಾತು ಬಂತೆ ?” "ಇನ್ನು ಎರಡು ಮೂರು ದಿನದಲ್ಲಿ ಗಜಾನನ ಕೈಯಲ್ಲಿ ಕೊಟ್ಟು ಕಳಿಸ್ತೀನಿ ಅಂದ್ರು.” ವೈಯಕ್ತಿಕ ವಿಷಯ ಎಂದು ಸಂಕೋಚ ಪಡಲಿಲ್ಲ ಗೋವಿಂದ.