ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ೯೭ "ಯಾರು ಗಜಾನನ ?” "ಅದೇ ಅವರ ದೂರದ ಸಂಬಂಧಿಕ. ಅವನಿಗೋಸ್ಕರವೇ ನಮ್ಮ ಅಮರಾವತೀಲಿ ಹೋಟ್ಟಿಡೋದು.” “ನಿನಗೆ ಇವರೆಲ್ಲಾ ಪರಿಚಯ ಅನ್ನು.” “ಓಹೋ !” “ ಸರಿಹೋಯ್ತು ! ಅಲ್ಲೋ, ಹುಡುಗೀರೂ ನೋಡಿದೀಯೇನೊ ?” ಗೋವಿಂದ ಸ್ವಲ್ಪಮಟ್ಟಿಗೆ ನಾಚಿದ; ಇನ್ನೂ ಸ್ವಲ್ಪ ಮಟ್ಟಿಗೆ ನಾಚಿದವನಂತೆ ನಟಿಸಿದ. “ ಎಂಥ ಪ್ರಶ್ನೆ ಕೇಳ್ತಿಯಾ ದೊಡ್ಡಮ್ಮ......” “ಈಗಿನ ಕಾಲದ ಹುಡುಗ್ರು, ಅಲ್ಲೆ ನೀನು ನಗರಕ್ಕೆ ಹೋದಾಗ್ಲೆಲ್ಲಾ ಅವರಲ್ಲಿ ತಾನೆ ಉಳ್ಕೊಳ್ಳೋದು ?” “ಅವರ ಹೊಟ್ಟಲ್ಲಿ ದೊಡ್ಡಮ್ಮ; ಮನೇಲಲ್ಲ.” "ಹೋಟ್ಟಿನ ಕೆಲಸವೆಲ್ಲ ಗಂಡಸರೇ ಮಾಡ್ತಾರೆ, ಅನ್ನು.” “ ಹೌದು, ಮತ್ತೆ !” "ಅಡುಗೇನೂ ಗಂಡಸರದೇನೇ.” “ ಅಲ್ಲೆ ! ವಿಷ್ಣುಮೂರ್ತಿಗಳ ಮನೆ ಹೆಂಗಸರು ಬಂದು ಮಾಡ್ತಾರೆ ಅಂದ್ರೋಂಡಿಯಾ ? ಸರಿ !” - “ ಪದ್ಮನಿಗೆ ಹೆಣ್ಣು ನೋಡೋ ವಿಷಯ ಏನಾದರೂ ಅಂದ್ರೆ ?” “ಹ್ಮ. ಹೋಗ್ತಾ ದಾರಿ ಉದ್ದಕ್ಕೂ ಆ ಸಂಬಂಧ ಹ್ಯಾಗೆ ? ಈ ಸಂಬಂಧ ಹ್ಯಾಗೆ ? ಅಂತ ಯೋಚ್ಚೆ ಮಾಡ್ತಾನೇ ಇದ್ರು.” “ ನಂಬಿಗಸ್ಥ, ಒಂದು ಜವಾಬ್ದಾರಿ ಹೊತ್ತೊಂಡೆ ನಿರ್ವಹಿಸೋ ಮನುಷ್ಯ.” “ ಅವರಿಗೇನು ದೊಡ್ಡಮ್ಮ ! ಹೋಟಲ್ಲಿ ಫೋನಿದೆ. ಕೂತಲ್ಲಿಂದಲೇ ಯಾವ ಮೂಲೇಲಿ ಇರೋವರ ಜತೆ ಬೇಕಾದರೂ ಮಾತಾಡ್ತಾರೆ.” “ ಅದೆಂಥಾದ್ದೊ ?” “ ಫೋನ್ ದೊಡ್ಡಮ್ಮ, ಕಪ್ಪಗೆ ಹೀಗೆ ಇರುತ್ತೆ. ಕರ್‌ಕರ್ ಅಂತ ಯಾವ ನಂಬರ್ ಬೇಕೊ ತಿರುಗೋದು. ಒಂದು ತುದೀನ ಕಿವಿಗಿಡೋದು. ಇನ್ನೊಂದು ತುದಿ ಬಾಯಿ ಗಿಡೋದು.” “ ಬಿಡಪ್ಪ, ನನಗ್ಯಾತಕ್ಕೆ ಅದೆಲ್ಲ ? ಅಂತೂ, ಪದ್ಮನಿಗೆ ಹೆಣ್ಣು ನೋಡೋ ಕೆಲಸಾನೂ ಮಾಡ್ತಾರೆ, ಅನ್ನು.” “ “ ಓ, ಆಗ್ಲ ಅಂತಿದ್ರು. ಯಾರೋ ಒಬ್ರ ಹೋಟೆಲ್ ಮಾಲಿಕರ ಮಗಳಿದಾಳಂತೆ. ಹೋದ ವರ್ಷ ಎಸ್.ಎಸ್.ಎಲ್.ಸಿ ಮಾಡಿದ್ದಂತೆ. ಇನ್ನೊಂದು, ಒಬ್ಬರು ಲಾಯರಿ ಮಗಳು. ಇನ್ನೂ ಒಂದು ಹೇಳಿದ್ರಪ್ಪ-–-ಒಬ್ಬರು ಶಿರಸ್ತೆದಾರರ ಮಗಳು...” “ ಅಂತೂ ಪರವಾಗಿಲ್ಲ.” “ ಆದರೆ ಒಂದು, ದೊಡ್ಡಮ್ಮ. ಹೇಗಾದರೂ ಮಾಡಿ ಇಲ್ಲಿಂದ ಟಾರ್ ರಸ್ತೆವರೆಗಿರೋ ಕಾಲು ದಾರೀನ ಅಗಲ ಮಾಡಿಸಿ ಎತ್ತಿನ ಬಂಡಿ, ಟಾಂಗಾ ಓಡಾಡೋ ಹಾಗೆ...”