ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು “ಓಹೋಹೋ !” “ ಯಾಕೆ ದೊಡ್ಡಮ್ಮ? ಹಳ್ಳಿಯವರೆಲ್ಲಾ ಮನಸ್ಸು ಮಾಡಿದ್ರೆ ಎರಡು ಮೈಲಿ ಕಚ್ಚಾ ರಸ್ತೆ ಮಾಡೋದು ಕಷ್ಟವೆ ? ಈಗ ಶ್ರಮದಾನ ಅಂತ ಒಂದಿದೆ...” * “ಎಂಥ ದಾನ ?” “ ಶ್ರಮ-ದಾನ, ದುಡಿಮೇನ ದಾನಮಾಡೋದು. ಪ್ರತಿಫಲ ತಗೊಳೆ ಕೆಲ್ಲ ಮಾಡೋದು. ದೇಶವನ್ನೆಲ್ಲ ಈ ರೀತಿ ಸುಧಾರಿಸ್ಟೇಕೂಂತ ಮುಖಂಡು ಹೇಳ್ತಾರೆ.” " ಹೋಗು. ಒಳಗೆ ಭಾಗೀರಥಿ ಕಾಫಿ ಇಟ್ಟಿದಾಳೇನೋ ನೋಡು. ಭೈರಪ್ಪನ ಮನೆಗೆ ಹೋದ ಗೋಪಾಲ ಇನ್ನೂ ಬಂದಿಲ್ಲ.” “ ಗಜಾನನ ಹೋಟ್ಟಿಟ್ಕಲೆ ಕಾಫಿಗೇನೂ ತೊಂದರೆಯಾಗೊಲ್ಲ.” “ ಛಿ ! ಮನೇಲಿ ಮಾಡಿಸೋದು ಬಿಟ್ಟು ಅಲ್ಲಿ ಹೋಗಿ ಕುಡೀತಾ ಕೂತ್ಕತಾರೇನೊ? ” "ಹಷ್ಟ ! ಇನ್ನೊಂದು ಹೇಳೋಕೆ ಮರೆತೆ. ಕಚ್ಚಾ ರಸ್ತೆ ಆದ್ಮಲೆ ಒಂದು ಕುದುರೆ ಗಾಡಿ-ಸಾರೋಟು-ಇಡಬೇಕೂಂತ ವಿಷ್ಣುಮೂರ್ತಿಗಳ ಯೋಚನೆ. ನಮಗೆ ಬೇಡದೇ ಹೋದಾಗ ಬಾಡಿಗೆಗೆ ಕೊಡಬಹುದು.” ದೊಡ್ಡಮ್ಮ ದಂಗಾದರು. “ನಾವು ಬಾಡಿಗೆಗೆ ಗಾಡಿ ಇಡೋದೇ ? ಭಗವಂತ !” “ನಾವಲ್ಲ ದೊಡ್ಡಮ್ಮ, ಗಜಾನನ ಇಡ್ತಾನೆ.” “ ಸಾಕಪ್ಪ, ಒಳಗೋಗು .” ಗೋವಿಂದ ನಕ್ಕು, “ನೋಡ್ತಿರು ದೊಡ್ಡಮ್ಮ, ನೋಡ್ತಿರು,” ಎನ್ನುತ್ತ ಒಳಗೆ ಹೋದ, ಅತ್ತಿಗೆಯನ್ನು ಹುಡುಕಿಕೊಂಡು, ಬಾಗಿಲ ಬಳಿಯಲ್ಲಿ ಮರೆಯಲ್ಲಿ ನಿಂತಿದ್ದ ಭಾಗೀರಥಿ, ದೊಡ್ಡಮ್ಮ ಗೋವಿಂದನಿಗೆ ಒಳಗೋಗು ಎಂದೊಡನೆಯೇ, ಅಡುಗೆಮನೆಯ ಒಲೆಯನ್ನು ಸವಿಾಪಿಸಿದ್ದಳು. ದೊಡ್ಡಮ್ಮ ಯೋಚನೆಗೀಡಾದರು; ಹುಡುಗರಿಗೆ ಇಷ್ಟು ಸ್ವಾತಂತ್ರ ಕೊಡುವುದು ಸರಿಯೆ ? ಗೋವಿಂದ ತನಗೊಬ್ಬ ಮಾವನನ್ನು ತಾನೇ ಆರಿಸಿಕೊಂಡಂತೆ ಆಯಿತಲ್ಲ ? ಈ ಹಳ್ಳಿಯಲ್ಲಿ ಹೋಟೆಲಿಡುವ ವಿಚಾರವೊಂದನ್ನು ಆತ ಬಿಟ್ಟಿದ್ದರೆ ಚೆನ್ನಾಗಿತ್ತು. ಬೀಗರ ಕಡೆಯವರು ಹಳ್ಳಿಯಲ್ಲೇ ಇರುವುದು ಲೇಸಲ್ಲ. ಇನ್ನು ರಸ್ತೆಮಾಡುವ, ಕುದುರೆ ಗಾಡಿ ಇಡುವ ವಿಚಾರಗಳೊ ? ದೊಡ್ಡಮ್ಮ ನಿಟ್ಟುಸಿರುಬಿಟ್ಟು ತಲೆಯಲ್ಲಾಡಿಸಿದರು.... ಸಂಜೆ ತಿರುಗಾಡಲು ಹೋಗಿದ್ದ ಶ್ರೀನಿವಾಸಯ್ಯ ದೀಪ ಹಚ್ಚುವ ವೇಳೆಗೆ ಮನೆಗೆ ಬಂದರು. "ವಿಷ್ಣುಮೂರ್ತಿಗಳಿಗೆ ಬಸ್ ಸಿಗೇನೋ ?” ಎಂದು ಗೋವಿಂದನನ್ನು ಕೇಳಿದರು. "ಸಿಗು, ಅಣ್ಣಯ್ಯ, ನಿಲ್ಲಿಸಿ, ಸೀಟು ಮಾಡ್ಕೊಟ್ಟೆ,” ಎಂದ ಗೋವಿಂದ. ಪದ್ಮನಾಭ ಹಿಡಿದ ಪುಸ್ತಕವನ್ನು ಬಿಡದೆ ಲಾಂದ್ರದ ಬೆಳಕಿನಲ್ಲಿ ಓದುತ್ತ ಕುರ್ಚಿಗೆ ಅಂಟಿಕೊಂಡಿದ್ದ. ಅವನ ಕೋಣೆಯ ಬಾಗಿಲ ಮುಂದೆ ಶ್ರೀನಿವಾಸಯ್ಯ ಒಮ್ಮೆ ನಿಂತರು. ಕಿರಿಯ ಮಗನನ್ನು ನೋಡಿದರು ಏನನ್ನೂ ಆಡದೆ ಮುಂದಕ್ಕೆ ಚಲಿಸಿದರು.