ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ೧೦೩ ಜಾತಕಗಳ ತುಲನೆಯ ಕೆಲಸ ಊಟವಾದಬಳಿಕ ನೆರವೇರಿಸಿದರಾಯಿತೆಂದು ಶ್ರೀನಿವಾಸಯ್ಯ ఎದ್ದರು.

ಮನೆಯಲ್ಲಿ ಅತಿಥಿ ಇರುವುದನ್ನು ಗಮನಿಸಿ ದೊಡ್ಡಮ್ಮ ಅಡುಗೆ ಮನೆಗೆ ಧಾವಿಸಿದರು. ಹೊರಗಿನಿ೦ದ ಬ೦ದವನೆ ಮು೦ದೆ ಗೋವಿಂದ ಮುನಿಯನ ಕೊಲೆಯ ವಿಷಯ ಪ್ರಸ್ತಾಪಿಸಿ ದನಲ್ಲಾ ಎಂದು ಅವರಿಗೆ ಸ್ವಲ್ಪ ಕಸಿವಿಸಿ. ಆದರೆ, ವಿಷ್ಣುಮೂರ್ತಿಯ ಸಂಬಂಧಿಕ ಎಂದ -ಮೇಲೆ ತಮಗೆ ಬೇಕಾದವನೇ, ದೊಡ್ಡದಲ್ಲ–ಎಂದು ಸ್ವಲ್ಪಮಟ್ಟಿಗೆ ಸಮಾಧಾನಪಟ್ಟು

ಕೊಂಡರು.

ಗೋವಿಂದ ಗಜಾನನನ ಕಡೆ ನೋಡಿ, ನಕ್ಕು, ಅಂದ:  
"ನೋಡಿದಿಯಾ ನಮ್ಮ ಹಳ್ಳೀ ಸಮಾಚಾರ ? ಹ್ಯಾಗಿದೆ ?" 
"ಪಟ್ಟಣದ ಸಮಾಚಾರ ಬೇರೆ, ಹಳ್ಳೀದು ಬೇರೆ. ಇನ್ನು ಹ್ಯಾಗೂ ಇಲ್ಲೇ ಇರ್ತೀನಲ್ಲ- " 
 "ಹುಂ. ಅದೇನು ಚೀಲದಲ್ಲಿ ? ವಿಷ್ಟುಮನೂರ್ತಿಗಳು ಬಂದಾಗ ಹಣ್ಣು ತಂದಿದ್ರು." ಗಜಾನನ ಧ್ವನಿ ತಗ್ಗಿಸಿ ಅಂದ: 
"ಮಾವ ಬದಾಮ್ ಹಲ್ವದ ಎರಡು ಪೊಟ್ಟಣ ಕೊಟ್ಟಿದ್ದಾರೆ. ಒಂದನ್ನು ಪಟೇಲರಿಗೆ ಕೊಡಬೇಕಂತೆ; ಇನ್ನೊಂದು ಕೃಷ್ಟೇಗೌಡರಿಗಂತೆ. ನಿಮ್ಮನೆಗೆ ಕೊಡೋದು ಚೆನಾಗಿರೋಲ್ಲ ಅಂದ್ರು."
" ಹೌದಪ್ಪ. ನಮ್ಮ ಅಜ್ಜೀನ ಕಂಡೆಯಲ್ಲ. ಬಹಳ ಮಡಿ."  
"ಪೊಟ್ಟಣದ ಜತೆ ಗೌಡರಿಗೆ ಕೊಡೋಕೆ ಮಾವ ಒಂದು ಕಾಗದ ಬರೆಸಿದಾರೆ." 
"ಕಾಗದ ಯಾಕೆ? ಕೆಲಸವಿಲ್ಲ. ಎಲ್ಲಿ ತಾ–ಎಂಥ ಕಾಗದ ನೋಡೋಣ." 

"ಮಾವ ಹೇಳಿದ್ದು. ನಾನು ಬರೆದು, ಸಹಿ ಹಾಕಿದ್ದು." "ನೀನು ಅಕ್ಷರಸ್ಥ ಅಂತ ನನಗೆ ಗೊತ್ತು, ಕಣಯ್ಯ. ಕಾಗದ ತಾ."

ಗಜಾನನ ಅಂಗಿಯ ಜೇಬಿನಿಂದ ಲಕೋಟೆಯನ್ನು ತೆಗೆದು ಗೋವಿಂದನ ಕೈಗಿತ್ತ.
" ಅಂಟಿಸಿಲ್ಲ. ಗೋವಿಂದರಾಯರಿಗೆ ತೋರಿಸಿ ಪಟೇಲರಿಗೆ ಕೊಡು ಅಂತ ಮಾವನೇ ಹೇಳಿದಾರೆ."
ಗೋವಿಂದ ಕಾಗದವನ್ನು ಹೊರತೆಗೆದು ಓದಿದ:
              || ಶ್ರೀ ||       ಭಾಗ್ಯನಗರ
                             ತಾ|| ..... 
ಕಣಿವೇಹಳ್ಳಿ ಪಟೇಲರಾದ ಮಹಾರಾಜೇ ಶ್ರಿ ಶಾಮೇಗೌಡರವರ ಸನ್ನಿಧಾನಕ್ಕೆ– ಭಾಗ್ಯನಗರ ನ್ಯೂಗಣೇಶಭವನದ ಎಂ. ಗಜಾನನರಾಯನು ಮಾಡುವ ಅರಿಕೆಗಳು. 
ತಮ್ಮ ಗ್ರಾಮದಲ್ಲಿ ಕಾಫಿ ಹೋಟ್ಲನ್ನು ನಾನು ತೆರೆಯುವ ಬಗ್ಗೆ, ನಮ್ಮ ನ್ಯೂಗಣೇಶ ಭವನದ ಒಡೆಯರಾದ ಶ್ರಿ ಟಿ.ಎನ್. ವಿಷ್ಣುಮೂರ್ತಿಗಳಿಗೆ ತಾವು ಸಮ್ಮತಿ ನೀಡಿರುವುದ 
ಕ್ಕಾಗಿ ನಾನು ಆಭಾರಿಯಾಗಿದ್ದೇನೆ. ಶ್ರಾವಣ ಮಾಸದಲ್ಲಿ ಹೋಟೆಲನ್ನು ತೆರೆಯ ಬೇಕೆಂದು ಉದ್ದೇಶಿಸಿದ್ದು, ತಾವು ಅದನ್ನು ಉದ್ಘಾಟಿಸಬೇಕಾಗಿ ಪ್ರಾರ್ಥಿಸುತ್ತೇನೆ. ಹಾಗೂ, ಹೋಟೆಲು ತೆರೆಯಲು ಗ್ರಾಮದ ಪಟೇಲರಾದ ತಾವು ಲೈಸೆನ್ಸನ್ನು ಕರುಣಿಸಬೇಕಾಗಿ ಬೇಡಿಕೊಳ್ಳುತ್ತೇನೆ. ಅದಕ್ಕೆ ತಗಲುವ ಫೀಸನ್ನು ಕೊಡುವುದಕ್ಕೆ