ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೪ ನೋವು ನಾನು ಬದ್ಧನಿದ್ದೇನೆ.

                                ಇಂತಿ
                            ತಮ್ಮ ವಿಧೇಯ, 
                        ಎಂ. ಗಜಾನನ ರಾವ್

ಓದಿ, ಮಡಚಿ, ಲಕೋಟೆಗೆ ತುರುಕುತ್ತ ಗೋವಿಂದನೆಂದ: "ಕೆಲಸವಿಲ್ಲ, ಅಂದೆ. ಹಳ್ಳಿಯ ಗೌಡನಿಗೆ ಇಷ್ಟೊಂದು ಗೌರವ ತೋರಿಸೋದಕ್ಕೆ ಅವನೇನು ಭಾಗ್ಯನಗರದ ಕಾರ್ಪೊರೇಷನ್ ಅಧಿಕಾರಿಯೆ? ವಿಷ್ಣುಮೂರ್ತಿಗಳು ಬರೆಸಿದ್ದಾರೆ ಅಂದ್ಮೇಲೆ ನನ್ನ ಆಕ್ಷೇಪವಿಲ್ಲ. ಕೊಡು, ಕೊಡು. ಆದರೆ ಲೈಸೆನ್ಸ್-ಹಣ ಇಂಥದ್ದೆಲ್ಲ ಇಲ್ಲಿ ಇಲ್ಲ. ಬಾದಾಮ್ ಹಲ್ವವೇ ಫೀಸು." " ಇರಲಿ ಬಿಡಿ, ಗೋವಿಂದರಾವ್. ನಮಗೇನೂ ನಷ್ಟ ಇಲ್ವಲ್ಲ." "ಹಂ. ಹಲ್ವ ಹಳೇ ಸ್ಟಾಕೊ ಗಜಾನನ?” " ಛೆ! ಛೆ! ತಾಜಾ. ನಿನ್ನೆ ಸಾಯಂಕಾಲ ಮಾಡಿದ್ದು." "ಸರಿ. ಹೋಟ್ಲಿಗೆ ಏನು ಹೆಸರಿಡ್ತೀಯಾ?" "ಯೋಚ್ನ ಮಾಡಿಲ್ಲ. ನೀವೇ ಒಂದು ಹೆಸರು ಸೂಚಿಸಿ." " ನಾನಿಟ್ಟರೆ ನಿನ್ನ ಮಾವ ಒಪ್ಪಬೇಕಲ್ಲ?" "ನಾನು ಮಾವ ಅನ್ನೋದು ಗೌರವಕ್ಕೆ. ಇನ್ನು ಅವರು ನಿಜವಾದ ಮಾವ ನಿಮಗೆ ತಾನೇ? ಅಳಿಯದೇವರು ಇಟ್ಟ ಹೆಸರು ಅಂದರೆ ಅದೇ ಇರಲಿ ಅಂತಾರೆ."

"ಗಜಾನನ ಭವನ ಅ೦ತಿಡು."

ನನ್ನ ಹೆಸರೇ ಆಯಿತಲ್ಲ?” "ಹೋಗಲಿ. ವಿಘ್ನೇಶ್ವರ ಭವನ ಅಂತ ಕರಿ" " "ಆದಾಗ್ಬಹುದು." " ಅಂತೂ ಗಜಾನನರಾಯರು ವಿಘ್ನೇಶ್ವರ ಭವನದ ಪ್ರೊಪ್ರೈಟರಾಗ್ತಾರೆ!" "ಎಲ್ಲಾ ನಿಮ್ಮ ದಯದಿಂದ, ಇಲ್ಲಿ ಹೋಟ್ಲಿಡೋ ಹಾಗೆ ಮಾವನನ್ನು ಒತ್ತಾಯ ಪಡಿಸಿದೋರು ನೀವು, ಆದರೆ ಒ೦ದೇ ಸಂದೇಹ–" "ಏನು?” “ಮಗಳನ್ನ ನಿಮಗೆ ಕೊಡೋದು ತೀರ್ಮಾನವಾದ್ಮೇಲಷ್ಟೆ ಈ ಹಳ್ಳೀಲಿ ಹೋಟೆಲಿಡಿಸೋ ವಿಚಾರ ಮಾವನಿಗೆ ಒಪ್ಪಿಗೆಯಾಯ್ತೇ ಅಂತ..." "ಹೇಗೂ ಇರಲಿ, ನಿನಗೆ ಇದರಿಂದ ಅನುಕೂಲವಾಯಿಯ್ತೋ ಇಲ್ಲವೋ?" " ఆಯ್ತು, ಆಯ್ತು!" "ಸರಿ, ಮತ್ತೆ." "ಪಟೇಲರಲ್ಲಿಗೆ ಯಾವಾಗ ಹೋಗೋಣ?" "ಅವನೀಗ ರಾಜೀಪತ್ರ ಬರಿಸ್ತಾ ಇದಾನೆ. ಹೋದರಾಯ್ತು ಊಟವಾದ್ಮೇಲೆ." "ಹೂಂ. ನಿಮ್ಮ ತಂದೆಯವರು ಜಾತಕಗಳ ಕೆಲಸ ಮುಗಿಸೋ ಹೊತ್ತಿಗೆ ಪಟೇಲರನ್ನೂ ಕೃಷ್ಟೇಗೌಡರನ್ನೂ ನೋಡಿ ಬಂದ್ಬಿಡೋಣ." "ಪಟೇಲ್ನಲ್ಲಿಗೆ ನೀನೊಬ್ನೆ ಹೋಗ್ಬಾ. ಆಳು ಮನೆ ತೋರಿಸ್ತಾನೆ. ಕೃಷ್ಟೇಗೌಡನಲ್ಲಿಗೆ