ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ೧೦೫ ನಾನು ಬರ್ತಿನಿ."

  "ನೀವು ಹೇಗೆ ಹೇಳ್ತೀರೋ ಹಾಗೆ." 

ಗೋಪಾಲನ ಮಗ ಶ್ರೀಪಾದ ಅಂಬೆಗಾಲಿಟ್ಟುಕೊಂಡು ಬಂದ. "ಬಾಪ್ಪ, ಬಾ," ಎಂದ ಗಜಾನನ, ಮಗುವನ್ನು ಕರೆಯುತ್ತ. "ನಿಮ್ಮ ಅಣ್ಣನ್ದೊಂದ ಕಾಣುತ್ತೆ: ಏನು ಹೆಸರು ? "ಎಂದ, ಗೋವಿಂದನತ್ತ ತಿರುಗಿ. ಅಪರಿಚಿತನ ಮುಖ ಕಂಡು ಮಗು ಅಳತೊಡಗಿತು. "ಗೋಪಾಲನ್ದು. ಶ್ರಿಪಾದ ಅಂತ ಹೆಸರಿಟ್ಟಿದ್ದಾರೆ. ಅಂದ ಹಾಗೆ ನಿನ್ನ ಮಗುವಿನ ನಾಮಕರಣ ಆಯ್ತ, ಅಲ್ವೆ ?"

  ಮಗುವನ್ನುದ್ದೇಶಿಸಿ, "ಅಳಬೇಡಪ್ಪ. ಬಾ, ಬಾ," ಎಂದು, "ಅವತ್ತೇ ಆಯ್ತು. ವಿನೋದಾಂತ ಇಟ್ಟಿದೆ." ಎಂದು ನುಡಿದ ಗಜಾನನ.
  "ಆಧುನಿಕ ಹೆಸರು. ಚೆನಾಗಿದೆ. ನಮ್ಮದೆಲ್ಲ ನೋಡಿದಿಯೊ ಇಲ್ವೊ. ಗೋಪಾಲ, ಗೋವಿಂದ, ಗೋರಕ್ಷಕಾ..."
  ಗೋವಿಂದನ ಮಾತಿನ ರೀತಿಯನ್ನು ಅನುಸರಿಸಿ ಗಜಾನನನೆಂದ: 
  "ನಿಮ್ಮಲ್ಲಿ ಹೇಳೋದಕ್ಕೇನು ? ನನ್ನ ಅತ್ತೆಮನೇಲಿ ಸುಬ್ಬಲಕ್ಷ್ಮೀಂತ ಇಟ್ಟಿದ್ರು. ಊರು ಬಿಟ್ಟ ತಕ್ಷಣ ನಾವಿದನ್ನು ವಿನೋದಾ ಅಂತ ಮಾಡಿದ್ವಿ."

" ಹೊ ಹ್ಹೊ ! ವಿಘ್ನೇಶ್ವರ ಭವನಕ್ಕಿಂತಲೂ ಸುಖವಿಲಾಸ ಹ್ಯಾಗೋ ? ಚೆನ್ನಾಗಿ ರೊಲ್ವೇನಯ್ಯ ?” "ಊಹೂಂ. ಕಣಿವೇಹಳ್ಳಿ ಕಾಮಿನೀಪುರ ಆಗೋವರೆಗೂ ನನ್ನ ಹೋಟ್ಲು ಭವನವೇ !" • ಭೇಷ್ ! ಭೇಷ !"

  ಅಳುತ್ತಿದ್ದ ಶ್ರೀಪಾದ ಸುಮ್ಮನಾಗಿ ಜಗಲಿಯ ತನಕವೂ ಹೋದ. ಅಲ್ಲಿಂದ ಹಿಂತಿರುಗಿದ. ದಾರಿಯಲ್ಲಿ, ಅಪರಿಚಿತ ಮತ್ತೆ ತನ್ನನ್ನು ನೋಡಿ ಮಂದಸ್ಮಿತನಾದುದನ್ನು ಕಂಡು, ಪುನಃ ಅಳಲಾಂರಭಿಸಿದ.
  ಮಗನನ್ನು ಹುಡುಕಿಕೊಂಡು ಭಾಗೀರಥಿ ಬಂದಳು. 
" ಇವನ ಹೆಸರು ಗಜಾನನ, ಅತ್ತಿಗೆ ವಿಷ್ಣುಮೂರ್ತಿಗಳ ಸಂಬಂಧಿಕ. ಇಲ್ಲಿ ಹೋಟ್ಲಿ ಡೋದು ಇವನೇ," ಎಂದ ಗೋವಿಂದ.
 ಮಗುವನ್ನೆತ್ತಿಕೊಂಡು ಭಾಗೀರಥಿ, ಬೆಳ್ಳಗೆ ನೀಳವಾಗಿ ಎತ್ತರಕ್ಕಿದ್ದ ಸ್ಪುರದ್ರೂಪಿ ಯುವಕನನ್ನು ನೋಡಿ, " ಹೌದಾ ?" ಎಂದು ಹೇಳಿ, ನೆಟ್ಟಗೆ ಒಳಗೆ ಹೊರಟು ಹೋದಳು. 
 ಮುಖದ ಮೇಲೆ ಮಂದಹಾಸ ಮೂಡಿಸಬೇಕೆಂದು ಅವಳು ಮಾಡಿದ ಯತ್ನ ವಿಫಲ ವಾಯಿತು. 
  ಗೋವಿಂದ ಗಜಾನನನ್ನು ಎಬ್ಬಿಸಿ ಹೊರಗಿನ ಕೊಠಡಿಗೆ ಹೋದ. ಪದ್ಮನಾಭ ನದಿಯತ್ತ ತಿರುಗಾಡುತ್ತ ಹೋದವನು ಹಿಂದಿರುಗಿರಲಿಲ್ಲ. ಅಲ್ಲಿದ್ದ ಕಥೆ ಪುಸ್ತಕಗಳ ಸಂಗ್ರಹವನ್ನು ನೋಡಿ ಗಜಾನನ, "ಇದೆಲ್ಲಾ ಯಾರದು ? ನಿಮ್ಮದೋ, ತಮ್ಮನದೋ ?” ಎಂದು ಕೇಳಿದ.

ಗೋವಿ೦ದನೆ೦ದ :