ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೬. ನೋವು " ಅದೆಲ್ಲಾ ಪದ್ಮನಾಭನ ಡಿಪಾರ್ಟ್ಮೆ೦ಟು. ಆ ಮೂಲೇಲಿ ಹಳೇ ದಿನಪತ್ರಿಕೆಗಳು ಇವೆಯಲ‌‌‍–ಆ ಆಸ್ತಿ ಮಾತ್ರ ನನ್ನದು. ನೀನು ಹೋಟ್ಲು , ಶುರುಮಾಡಿದ್ಮೇಲೆ ನಿನಗೆ ತಿಂಡಿ ಕಟ್ಟೋಕೆ ಬೇಕಲ್ಲ. ಪ್ರತಿ ತಿಂಗಳೂ ಹಳೇ ಪೇಪರ್ ನಿನಗೇ ಮಾರ‍್ತೀನಿ". o “ ಹೌದೋ ಗೋವಿಂದರಾವ್ ? ನಾನು ನಗರದಿಂದ ಸೈಕಲು ತಂದರೆ ಹ್ಯಾಗೆ? ಬೆಳಗ್ಗಿನ ಮೊದಲ್ನೇ ಬಸ್ಸು ನಗರದಿಂದ ಬರೋ ಟೈಮಿಗೆ ಸೈಕಲ್ ಮೇಲೆ ಒಬ್ಬ ಹೋದ್ರೆ ಪೇಪರ್ ಗೀಪರ್ ತರಬಹುದು." " ಒಳ್ಳೇ ಯೋಚನೆ-ಖಂಡಿತ ತಗೊಂಡ್ಬಾ, ಈಗಿರೋ ಕಾಲುದಾರೀಲಿ ಸೈಕಲ್ ಹೋಗುತ್ತೆ. ಗಾಡಿ ಟಾಂಗಾ ಓಡಾಡೋ ಹಾಗೆ ಆ ಹಾದೀನ ಆ ಮೇಲೆ ಅಗಲ ಮಾಡಿಸಿದರಾಯ್ತು." ...ಊಟದ ಹೊತ್ತಿಗೆ ಪದ್ಮನಾಭ ಬಂದ. ಅಲ್ಲಲ್ಲಿ ಉಳುಮೆ ಆರಂಭವಾಗಿದ್ದ ಹೊಲಗಳನ್ನು ದಾಟಿ ನದೀ ದಂಡೆಯುದ್ದಕ್ಕೂ ಹೋಗಿ, ನಿರ್ಜನವಾಗಿದ್ದ ಕಡೆ ಸ್ವಲ್ಪ ಹೊತ್ತು ಕುಳಿತು, ಒಂದೆರಡು ಸಿಗರೇಟು ಬೂದಿಮಾಡಿದ್ದ. ' ಬೇಸಗೆಯ ಈ ಜೈಲುವಾಸ ಸಾಕಾಯ್ತು. ಇನ್ನು ಹೆಚ್ಚು ದಿವಸ ಇಲ್ಲಿರಲಾರೆ,"ఎంದುಕೊಳ್ಳುತ್ತ ಹಿ೦ದಿರುಗಿದ್ದ. ಮನೆಯಲ್ಲಿ ಗಜಾನೆನೆನೆ ಪರಿಚಯವಾದಾಗ ಆತನೆಂದ: " ಗಣೇಶ ಭವನಕ್ಕೆ ಒಂದೆರಡು ಸಲ ಬಂದಿದ್ದೆ. ಆದರೆ ನಿಮ್ಮನ್ನು ನೋಡಿದ ನೆನಪಿಲ್ಲ. ಅಂತೂ ನಾಗರಿಕತೇನ ಹೆಡೆಮುರಿ ಕಟ್ಟಿ ಕಣಿವೇಹಳ್ಳಿಗೆ ತರಿದೀರಿ. ಸಂತೋಷ!"

  • ಗಜಾನನ, ಪದ್ಮ ರಜಾದಲ್ಲಿ ಇಲ್ಲಿಗೆ ಬಂದರೆ ಹೊತ್ತು ಕಳೀಲಾಗದೆ ಒದಲಾಡ್ತಾನೆ. ಮಸಾಲೆದೋಸೆ ಅಂದರೆ ಅವನಿಗೆ ಪಂಚಪ್ರಾಣ, ನಿನ್ನ ಹೋಟ್ಲು ಶುರು ಆದ್ಮೇಲೆ ತೊಂದರೆ ಇರೋಲ್ಲ.

"ಬೇಜಾರು ಹೋಗ್ಸೋರೇ ಬಂದ್ಮೇಲೆ ದೋಸೆ ಯಾತಕ್ಕೆ ?” ಎಂದ ಗಜಾನನ ನಗುತ್ತ.


" ಗೊತ್ತಾಗ್ಲಿಲ್ಲ ನೀವು ಹೇಳಿದ್ದು," ಎಂದ ಪದ್ಮನಾಭ. " ಮನೇಗೆ ಬಂದ್ಮೇಲೆ ಅವರೇ ಹೇಳ್ಕೊಡ್ತಾರೆ !" ಒರಟು ಹಾಸ್ಯ. ಪದ್ಮನಾಭ ಹುಬ್ಬಗಳನ್ನು ಗಂಟಿಕ್ಕಿದ. " ಮದುವೆ ಏರ್ಪಾಟು ಬೇರೆ ಇಲ್ಲಿ ಆಗ್ತಿದೆಯೋ ?” ಎಂದು ನುಡಿದು, ಪಡಸಾಲೆಗೆ ಹೋದ. ಗೋಪಾಲ ಹೊಲಗಳಿ೦ದ ಬ೦ದ. "ಬಿಸಿಲು ಜೊರಾಗಿದೆ. ಇವತ್ತೂ ಮಳೆ ಬರೋ ಹಾಗಿದೆ," ಎ೦ದ. " ಅವನು ಗೋಪಾಲ, ನಮ್ಮ ಅಣ್ಣ,” ಎಂದು ಗೋವಿಂದ ಗಜಾನನನಿಗೆ ಹೇಳಿದನೇ ಹೊರತು, ಪರಿಚಯ ಮಾಡಿಸಿಕೊಡುವ ಗೊಡವೆಗೆ ಹೋಗಲಿಲ್ಲ. ಊಟವಾಯಿತು ಶ್ರೀನಿವಾಸಯ್ಯ ವಿಶ್ರಾ೦ತಿಯ ಯೋಚನೆಯನ್ನು ಬಿಟ್ಟುಕೊಟ್ಟು ಜಾತಕಗಳ ತುಲನೆಗೆ ಕುಳಿತರು.