ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೮ ನೋವು

       " ನಾನಿನ್ನು ಬರ್ತೀನಿ,"   ಎಂದು ನುಡಿದು, ಗೋವಿಂದ ಅಲ್ಲಿಂದ ಹೊರಟ.   ಗೌಡರು ಅಲ್ಲೇ ನಿಂತು,  ತಿರುಗಿ,   ಮನೆಯೊಳಕ್ಕೆ   ಹೋದರು. 
        ದಾರಿಯಲ್ಲಿ  ಯೊಚಿಸಿದ    ಗೊವಿ೦ದ :
        ಗೌಡರಿಂದ ಇಪ್ಪತ್ತೈದು   ರೂಪಾಯಿ   ಇಸಕೊಂಡುದು  ತಂದೆಗೆ  ಗೊತ್ತಾದರೊ  ?  ಗೊತ್ತಾದರೇನಂತೆ ?   ಲಾಯರಿಗೆ  ಕೊಡದೆ   ಸ್ವಂತಕ್ಕೆ   ಅದನ್ನು  ಇಟ್ಟುಕೊ೦ಡೆನೆ೦ಬುದು ಮಾತ್ರ

ಅವರಿಗೆ ತಿಳಿಯದಿದ್ದರಾಯಿತು. ನಗರದ ಲಾಯರೆಲ್ಲಿ , ಕಣಿವೇಹಳ್ಳಿಯ ಶ್ರೀನಿವಾಸಯ್ಯನವರೆಲ್ಲಿ? ಅವರು ಇವರಿಗೆ ಹೇಳಲು ಅವಕಾಶವೇ ಇಲ್ಲವಲ್ಲ ? ತನ್ನ ಪರಿಚಿತ ಲಾಯರಿಗೂ ಮೋಹನ ರಾಯರಿಗೂ ಸಂಪರ್ಕ ಸಾಧ್ಯ. ಮೋಹನರಾಯರು ತನಗಿನ್ನು ದೂರದ ಸಂಬಂಧವೆನ್ನುವುದು ಜೋಡಿ ಮದುವೆಯ ದಿನ ತಾನೇ ಆ ಲಾಯರಿಗೆ ಗೊತ್ತಾಗುವುದು  ? ಗೊತ್ತಾದರೂ ಇಪ್ಪತ್ತೈದು ರೂಪಾಯಿಗಳ ಪ್ರಸ್ತಾಪ ಬಂದೀತೆಂದು ಭಾವಿಸುವುದು, ಗಾಬರಿಯಾಗುವುದು, ಮೂರ್ಖತನ.

             ಸಾರ್ವಜನಿಕ    ಸೇವೆಗಿಳಿದವರಿಗೆ    ಇಷ್ಟು   ಸಂಪಾದನೆಯೂ   ಇಲ್ಲದಿದ್ದರೆ     ಹೇಗೆ     ?      ಜನ   ತಾವಾಗಿ ನೀಡಬೇಕು.  ಆ ಬುದ್ದಿ  ಅವರಿಗಿಲ್ಲದಿದ್ದರೆ,   ಅಂಥ  ಸದ್ಬುದ್ದಿಯನ್ನು ದೇವರು   ಅವರಿಗೆ ಕೊಡದಿದ್ದರೆ,   ಜನರಿಂದ ದುಡ್ಡನ್ನು  ಸಾರ್ವಜನಿಕ ಕಾರ್ಯಕರ್ತರು ಉಪಾಯವಾಗಿ ಕೀಳಬೇಕು.
          ಹಾಗೆ   ವಿಚಾರದ   ಅಲೆಗಳ  ಮೇಲೆ  ತೇಲುತ್ತ,   ಸಾಕಷ್ಟು  ಮಿಾನನ್ನು ಹಿಡಿದು ದಂಡೆಗೆ ಮರಳುವ ಬೆಸ್ತನ   ತೃಪ್ತಿಯಿಂದ   ಗೋವಿಂದ  ಮನೆಯತ್ತ   ಸಾಗಿದ.
         ' ಈಗಿನ ಕಾಲದಲ್ಲಿ ಕಾಸಿಲ್ದೋನು  ಕಸಕ್ಕೆ    ಸಮ.' 
        ಅದು ವಿಷ್ಣುಮೂರ್ತಿ   ಉವಾಚ.   ಅವರು ಅದನ್ನು ಆಡಿದ್ದು ಆ ಮಧ್ಯಾಹ್ನ ಊಟಕ್ಕೆ ಕುಳಿತಾಗ.  ಯಾರದೋ  ಮಾತು  ಬಂದಾಗ  ಆ  ತಮ್ಮ ಅಭಿಪ್ರಾಯವನ್ನು ಅವರು  ವ್ಯಕ್ತಪಡಿಸಿ ದ್ದರು.   ' ಕಾಸಿಲ್ದೋನು  ಕಸಕ್ಕೆ  ಸಮ  ಗಾದೆ ' ಮಾತಾಗಿ ,  ಚಿರಕಾಲ ಉಳಿಯುವ ಯೋಗ್ಯತೆ ಇರಲಿಲ್ಲವೆ   ಅದಕ್ಕೆ  ?
          ಊಟವಾದೊಡನೆ  ಗೋವಿಂದನ   ಅತ್ತೆಯಾಗುವಾಕೆ  ಅಂದಿದ್ದರು :
         " ಕಾಮಿಾ,   ಅವರಿಗೆ   ತಾಂಬೂಲ  ತಗೊಂಡ್ಹೋಗಿ   ಕೊಡು.”
           ಸೋಫಾಗಳಿದ್ದ  ಕೊಠಡಿಯಲ್ಲಿ   ಗೋವಿಂದ  ಕುಳಿತ,  'ವಿಷ್ಣುಮೂರ್ತಿಗಳು  బರುತ್ತಾರೆ ; ತಾಂಬೂಲ  ಇಬ್ಬರಿಗೆ'–ಎಂದು  ಭಾವಿಸುತ್ತ.
           --" ನಾನು  ಹೋಟ್ಲಲ್ಲಿರ್ತೀನಿ,  ಗೊವಿ೦ದ ಕುಳಿತ.    ತಾ೦ಬೂಲ  ಹಾಕ್ಕೊ೦ಡು  బన్ని."    ಎಂದು    ಹೇಳಿ ವಿಷ್ಣುಮೂರ್ತಿ ಹೊರಟೇಬಿಡಬೇಕೆ ?
          ಕಾಮಾಕ್ಷಿ ಬರಲಿಲ್ಲ.  ಗೋವಿಂದ   ಎದ್ದು ಅತ್ತ ನಡೆದ.   ಒಂದು ಯೋಚನೆಯಿಂದ ಅವನ ಎದೆಗು೦ಡಿಗೆಯ   ಬಡಿತ  ತೀವ್ರವಾಯಿತು.
            ಹೊರಗೆ ಕಾಲುಗಳ ಮೃದುಸಪ್ಪಳ,      ಗೋವಿಂದ   ಬಾಗಿಲಮರೆಯಲ್ಲಿ ನಿಂತ.                         ಕಾಮಾಕ್ಷಿ   ಬಂದಳು.    ತಟ್ಟೆಯನ್ನು ಟೀಪಾಯ್  ಮೇಲಿಟ್ಟಳು.   
            'ನಾನಿಲ್ಲ   ಎಂದು   ಅವಳಿಗೆ ನಿರಾಶೆಯಾಗಿರಬೇಕು.'
             ಅವಳು ತಿರುಗಿದಂತೆ, ಸರಕ್ಕನೆ ತಾನು ಬಾಗಿಲು ಮುಂದೆ ಮಾಡಿದ. ಗಾಬರಿಯಾದಳು.