ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ೧೪೯

ಓಡಿ ಹೋಗಲೆಂದು ಬಾಗಿಲ ಕಡೆಗೇ ಬಂದಳು. ಹಿಡಿದುಕೊಂಡು ತೋಳುಗಳಿಂದ ಅವಳನ್ನು ಬಳಸಿದ. ಆ ಮೃದು ಎದೆಯನ್ನು ತನ್ನೆದೆಗೆ ಒತ್ತಿಕೊಂಡಾಗ ರೋಮಾಂಚವಾಯಿತಲ್ಲ! ಆ ತುಟಿಗಳಿಗೆ ಅಧಿಕಾರದ ಮುದ್ರೆಯೊತ್ತುವ ಆಸೆ ತನಗಿದ್ದದ್ದು. ಅದನ್ನು ಈಡೇರಿಸಿಯೇ ಬಿಡುತ್ತಿದ್ದ. ಆದರೆ ಬಾಗಿಲ ಹೊರಗೆ ಕಿಲಕಿಲ ನಕ್ಕ ಸದ್ದು. ಅಗಣಿ ಹಾಕಿಲ್ಲ. ಕಾಮಾಕ್ಷಿಯ ತಂಗಿಯರು ಬಾಗಿಲು ನೂಕಿ ಬಂದೇ ಬಿಡಬಹುದು. ನಿರುಪಾಯನಾಗಿ ಅವಳನ್ನು ಬಿಟ್ಟು ಕೊಟ್ಟ. ತಪ್ಪಿಸಿಕೊಂಡು ಹೊರಟೇ ಹೋದಳು. ಚೀರಲೆಂದು ಬಾಯಿ ತೆರೆದಿದ್ದಳು. ಆದರೆ ಗಂಟಲು ಸಹಕರಿಸಿರಲಿಲ್ಲ. ಸುಮಾರು ಒಂದು ವರ್ಷಕ್ಕೂ ಹೆಚ್ಚಿನ ಅವಧಿಯ ಕುಡಿನೋಟಗಳ ವಿನಿಮಯ. ತಾನು ಮುತ್ತು ಕೊಟ್ಟಿದ್ದರೆ ಖಂಡಿತ ಅವಳು ಇಷ್ಟಪಡುತ್ತಿದ್ದಳು. ಪ್ರತಿಯಾಗಿ ಅವಳೂ ಕೊಡುತ್ತಿದ್ದಳು. ತಂಗಿಯರು ಬಂದರಲ್ಲ ಎಂದು ಅವಳು ಹೋಗ ಬೇಕಾಯಿತು.

              ಸೋಫಾದ    ಮೇಲೆ   ಕುಳಿತು   ಸುಧಾರಿಸಿಕೊಳ್ಳಲು     ತನಗೆ   ಎರಡು  ಮೂರು ನಿಮಿಷ ಹಿಡಿಯಿತು.
              ಕೊಠಡಿಯ   ಹೊರಗಿಂದ  ಕಾಮಾಕ್ಷಿಯ   ಚಿಕ್ಕ  ತಂಗಿ  ನಾಗಮಣಿಯ   ಕೀಟಲೆ ಧ್ವನಿ  :                                                                                               "   ತಾಂಬೂಲ   ಮಡಚ್ಕೋಡೋಕೆ   ಅಕ್ಕನನ್ನ   ಕಳಿಸ್ಕೊಡ್ಲೆ  ?"
              ತಾನು ನಿರುತ್ತರ.
            "  ಹಾಕ್ಕೋಳ್ಳೋಕೆ        ಸಂಕೋಚವಾಗುತ್ತೇನೋ  , ಬಾಗಿಲು ಎಳ್ಕೊಳ್ಲೆ  ?"
              –-ಕನಕಲತೆಯ   ಸ್ವರ.
             ಅದಕ್ಕೂ ತಾನು ಮೌನ .  
            " ಊರಿಗೆ   ಇವತ್ತೇ   ಹೋಗ್ತೀರಾ   ?"
               -–ನಾಗವೇಣಿ.
              ಒಳಗಿನಿಂದ   ಅವರ   ತಾಯಿಯ  ಧ್ವನಿ   ಕೇಳಿಸಿತು :
             "   ಕಾಮಾಕ್ಷಿ,  ಕನಕಾ,   ನಾಗೂ,  ಬನ್ರೇ  ಇಲ್ಲೀ ..."
              ಹಿಹಿಹಿ   ನಗು   ದೂರಕ್ಕೆ ಸರಿಯಿತು.  
              ಮತ್ತೆ   ಕೆಲ   ನಿಮಿಷ   ಗೋವಿಂದ  ಕುಳಿತಲ್ಲಿಂದ   ಮಿಸುಕಿರಲಿಲ್ಲ.    ಕಾಮಾಕ್ಷಿ   ಪುನಃ ಬರಬಹುದೆ೦ಬ ಆಸೆ.
              ಬಂದವನು ಹೋಟೆಲಿನ   ಒಬ್ಬ    ಹುಡುಗ.
             " ಸಾಹುಕಾರರು    ಹೇಳಿದ್ರು .     ಟೈಮಾಯ್ತು , ಬರಬೇಕಂತೆ."
              ತಾಂಬೂಲದ   ತಟ್ಟೆಯನ್ನು  ಮುಟ್ಟದೆಯೇ  ಗೋವಿಂದ   ಆ  ಹುಡುಗನನ್ನು   ಹಿಂಬಾಲಿಸಿದ.
              ...ಅದನ್ನೆಲ್ಲ    ಸ್ಮರಿಸಿಕೊಂಡ     ಗೋವಿಂದನಿಗೆ,   ಮಾಧುರ್ಯವನ್ನು  ಸವಿದ    ಅನುಭವವಾಯಿತು    ಈಗ.
             ಅವನ ಎದೆಯಲ್ಲೇನೋ ನೋವು.   ಕಾಮಾಕ್ಷಿಯನ್ನು   ಬಲವಾಗಿ   ತನ್ನೆದೆಗೆ ಒತ್ತಿಕೊಳ್ಳುವ ಆಸೆ...  ಕೈಗಳನ್ನು   ಎದೆಗಡ್ಡವಾಗಿ   ಕಟ್ಟಿಕೊಂಡು   ಗೋವಿಂದ ನೆಡೆದ.   ಒಳಜೇಬಿನ ನೋಟುಗಳು ಕೈಗಳ   ಒತ್ತಡಕ್ಕೆ   ಸಿಲುಕಿದುದರ   ಅರಿವೂ     ಅವನಿಗಿರಲಿಲ್ಲ...
              ...  ರಂಗಣ್ಣ ದಿಬ್ಬದ ಮೇಲಿಂದ ಇಳಿದು ಬ೦ದವನು ನದೀ ದ೦ಡೆಯ   ತನಕವೂ ಹೋಗಿ