ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೦ ನೋವು


ಮನೆಗೆ ಹಿಂದಿರುಗಿದಾಗ, ಅತ್ತೆಮ್ಮ ದೀಪ ಹಚ್ಚುತ್ತಿದ್ದರು.

    ರಂಗಣ್ಣನ ಕೊಠಡಿಯಲ್ಲಿ ಬೆಳಗ್ಗೆಯೇ ಅಣಿಗೊಳಿಸಿದ್ದ ಟ್ರಂಕು ಪ್ರಯಾಣ ಸಿದ್ದತೆಯನ್ನು ಸಾರುತಿತ್ತು .
     ನಗರಕ್ಕೆ ಹೊರಡುವ ತನ್ನ ಅಪೇಕ್ಷೆಯನ್ನು ರಂಗಣ್ಣ ವ್ಯಕ್ತಪಡಿಸಿದ್ದೇ ತಡ, ಶಾಮೇ ಗೌಡರು ಒಪ್ಪಿಗೆ ಕೊಟ್ಟಿದ್ದರು.
    ಅದರಲ್ಲೂ ಹೊಸಳ್ಳಿಗೆ ಹೋಗಿ ಬಂದ ಮೇಲೆ ಅವರ ಮನಸ್ಸು ಪ್ರಸನ್ನವಾಗಿತ್ತು. ಅವರು 
    ಕೇಳಿದ್ದರು : 
    " ಯಾವಾಗ ಓಗ್ತೀಯಾ ?"
    "ನಾಳೆ. "
    " ಸರಿ. ಚಂದ್ರಣ್ಣನೂ ಇನ್ನೊಂದು ವಾರದೊಳಗೆ ನಗರಕ್ಕೆ ಓಗ್ತಾವ್ನ೦ತೆ ."
    " ನೀವು ಹೋದದ್ದು ಏನಾಯ್ತು  ಅಪ್ಪ?"
    " ಒಪ್ಪಿದ್ರು , ರಂಗ."
    " ಒಪ್ಪಿದ್ರೆ? ಒಳ್ಳೆದಾಯ್ತು. "
    " ನವರಾತ್ರಿಗುಂಚೆ ಒಂದು ಲಗ್ನ ಐತೇಂತ ಅವರ ಜೋಯಿಸರು ಯೋಳವ್ರೆ.. ಆ ಟೇಮಿಗೆ ನಿನಗೂ ರಜಾ ಸಿಗಬೌದು. ಅಲ್ಲವಾ ?"
    " ಹೂಂ, ದಸರಾ ರಜಾ ಹಾಗೂ ಇರುತ್ತಲ್ಲ."
    " ಅದಕ್ಕೂ ಮುಂಚೇನೇ ಆದ್ರೆ ವಾಸೀಂತಿದ್ದೆ. ಮಳೆ ಶುರು ಆದ್ಯೆಕೆ ಒಲದ ಕೆಲಸ;
ಅದು ಮುಗಿದೇ ಎ೦ಗಾಯ್ತದೆ ಅಂದ್ರು ನಿಜ ಅನ್ನಿಸ್ತು "
    " ಚಂದ್ರಣ್ಣ ಒಪ್ಪಿಗೆ ಕೊಟ್ನ ?" 
    " ಆಗೋದಾದ್ರೆ ಈಗ್ಲೇ ಆಗ್ವೇಕು: ಇಲ್ವೇ ಓದ್ರೆ ಬೇರೆ ಕಡೆ ಗಂಡು ನೋಡ್ತೀನಿ–ಅಂದೆ.”
    " ಹುo."
    "ಚಂದ್ರಣ್ಣ ನಗರದಾಗೆ ನಿನಗೆ ಸಿಗ್ತಾನೆ, ಅಲ್ಲವಾ ?” 
    " ಹೂಂ.. ಲಾ ಕಾಲೇಜ್ ಹಾಸ್ಟೆಲ್ನಾಗಿರುತ್ತಾನೆ."
    " ಅಲ್ಲಿಗೆ ಓಗೋದು ಬರೋದು ಮಾಡ್ತಾ  ಇರು."
    " ಹೂಂ."
    –ಆ ಸಂಭಾಷಣೆಯಿಂದ ರಂಗಣ್ಣನಿಗೆಷ್ಟೋ ಸಮಾಧಾನವಾಗಿತ್ತು, ಚಿಕ್ಕವನು ಎಂದು ಉಪೇಕ್ಷೆ ಮಾಡದೆ ಅಷ್ಟೊಂದು ಆತ್ಮೀಯವಾಗಿ ತಂದೆ ಮಾತನಾಡಿದರಲ್ಲ.
    ಪದ್ಮನ ಅನುಚಿತ ವರ್ತನೆ ಅಲ್ಲದೆ ಹೋಗಿದ್ದರೆ ತನ್ನ ತಂಗಿಯ ಮದುವೆ ಇನ್ನೂ ಮುಂದಕ್ಕೆ ಹೋಗುತ್ತಿತ್ತೇನೋ.
    ಗುಡಿಯಿಂದ ತಾನು ವಾಪಸು ಹೊರಟಾಗ ಆ ಕಡೆಗೆ ಪದ್ಮ ಬಂದ. ತನ್ನನ್ನು ನೋಡಿಯೂ ನೋಡದಂತೆ ಮಾಡಿದ ಆ ದೈವಭಕ್ತ, ಮಾತನ್ನಾದರೂ  ಯಾವ ಮುಖದಿಂದ ಆಡಬಲ್ಲ ಆತ ತನ್ನೊಡನೆ ? ತಾನು ಅಲ್ಲಿ ನಿಲ್ಲದೆ ನೇರವಾಗಿ ಇಳಿದು ಬಂದುದು ಒಳ್ಳೆಯದೇ 

ಆಯಿತು .

     ...ಮನೆಗೆ ಬಂದ ರಂಗಣ್ಣ, ಟ್ರಂಕಿಗೆ ತುಂಬಿಸಿ ಉಳಿದುದನ್ನೆಲ್ಲ ಸರಿಯಾಗಿ ಜೋಡಿಸಿ